'ಏನೇ ಸುರಕ್ಷತೆ ಪಡೆದುಕೊಂಡರೂ, ಎರಡು ವರ್ಷಗಳ ನಂತರ ಕೊರೋನಾ ಪಾಸಿಟಿವ್ (Positive) ಆಗಿದೆ,' ಎಂದು ಖುಷ್ಬೂ ಹೇಳಿದ್ದಾರೆ.
48
'ನನಗೆ ಪಾಸಿಟಿವ್ ಆಗಿದೆ. ನಿನ್ನೆ ಸಂಜೆವರೆಗೂ ನೆಗೆಟಿವ್ ತೋರಿಸುತ್ತಿತ್ತು. ನೆಗಡಿ ಆಗಿದ್ದ ಕಾರಣ ಟೆಸ್ಟ್ ತೆಗೆದುಕೊಂಡೆ,' ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಬರೆದುಕೊಂಡಿದ್ದಾರೆ.
58
'ನಾನು ಈಗ ಐಸೋಲೇಟ್ ಆಗಿರುವೆ. ಒಬ್ಬಳೇ ಇರುವುದಕ್ಕೆ ಬೇಸರವಾಗುತ್ತದೆ. ಹೀಗಾಗಿ ನನ್ನ ಮುಂದಿನ 5 ದಿನಗಳನ್ನು ಸುಲಭವಾಗಿ ಕಳೆಯುವುದಕ್ಕೆ ಸಹಾಯ ಮಾಡಿ. ಯಾವುದೇ ಲಕ್ಷಣ ಕಾಣಿಸಿಕೊಂಡರೂ ಟೆಸ್ಟ್ ಮಾಡಿಸಿಕೊಳ್ಳಿ,' ಎಂದಿದ್ದಾರೆ.
68
ಖುಷ್ಬೂ ಅವರಿಗೆ ಸೋಂಕು ತಗುಲಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಆಪ್ತರು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರು ಕಾಮೆಂಟ್ ಮಾಡಿದ್ದಾರೆ.
78
'ಆದಷ್ಟು ಬೇಗ ಚೇತರಿಸಿಕೊಳ್ಳಿ. ನಾವು ಆ ರೋಡ್‌ನಲ್ಲಿ ಪ್ರಯಾಣ ಮಾಡಿದ್ದೀವಿ. ಸಣ್ಣ ಬ್ರೇಕ್ ತೆಗೆದುಕೊಳ್ಳಿ. ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ಗುಣ ಆಗುತ್ತೀರಿ,' ಎಂದು ನಟಿ ಪೂರ್ಣಿಮಾ ಭಾಗ್ಯರಾಜ್ ಕಾಮೆಂಟ್ ಮಾಡಿದ್ದಾರೆ.
88
ಹಿರಿಯ ನಟಿ ಸುಹಾಸಿನಿ ಸೇರಿದಂತೆ ಅನೇಕರನ್ನು ಕಾಮೆಂಟ್ ಮಾಡಿದ್ದಾರೆ. ಕೆಲವು ತಿಂಗಳಿನಿಂದ ವರ್ಕೌಟ್ ಮಾಡಿ ಸಣ್ಣ ಆಗಿರುವ ಖುಷ್ಬೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ.