ಕನ್ನಡ ಚಿತ್ರರಂಗದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ಯಶ್ ಮತ್ತು ರಾಧಿಕಾ ಪಂಡಿತ್ ಇಂದು 5ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.
ಕಡಲ ತೀರದಲ್ಲಿ ಸೂರ್ಯಾಸ್ತದ ಎದುರು ಕುಳಿತು ಒಬ್ಬರನ್ನೊಬ್ಬರು ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ಸ್ಯಾಂಡಲ್‌ವುಡ್ ಸಿಂಡ್ರೆಲಾ.
'ನಿಮ್ಮನ್ನು ಉತ್ತಮಗೊಳಿಸುವವರು, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸಿ ಪ್ರೋತ್ಸಾಹಿಸುವವರು, ನಾವು ನಿರ್ಲಕ್ಷಿಸಿರುವ ಕನಸುಗಳು ಮತ್ತು ಗುರಿಗಳ ಕಡೆಗೆ ನಮ್ಮನ್ನು ತಳ್ಳಿದವರು...' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
'ನಿಸ್ವಾರ್ಥವಾಗಿ ತಮ್ಮ ಸಮಯವನ್ನು ತ್ಯಾಗ ಮಾಡುವವರು, ನಿಮಗೆ ಧೈರ್ಯಶಾಲಿಯಾಗಿರಲು ಸಹಾಯ ಮಾಡುವವರು, ಅವರೇ ಹ್ಯಾಪಿ ವ್ಯಕ್ತಿ,' ಎಂದೂ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ.
'ಅದೇ ಪವಿತ್ರವಾದದ್ದು. ನೀವು ಇಂತಹ ಪ್ರೀತಿಯನ್ನು ಹಿಡಿದುಕೊಳ್ಳಬೇಕು,' ಎಂದು ಬ್ಯೂ ಟ್ಯಾಪ್ಲಿನ್ ಹೇಳಿಕೆಯನ್ನು ರಾಧಿಕಾ ಹಂಚಿಕೊಂಡಿದ್ದಾರೆ.
'ಹ್ಯಾಪಿ 5 ಸ್ವೀಟ್‌ಹಾರ್ಟ್...' ಎಂದು ವಿಶ್ ಮಾಡಿರುವ ರಾಧಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.