ಪತ್ನಿ ಹುಟ್ಟುಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿದ ವಿನೋದ್ ಪ್ರಭಾಕರ್: ಯಾರೆಲ್ಲಾ ಬಂದಿದ್ರು ಗೊತ್ತಾ?

Published : Jun 20, 2025, 12:39 PM IST

ಮಾದೇವ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ಹುಟ್ಟುಹಬ್ಬವನ್ನ ಜೋರಾಗಿ ಆಚರಿಸಿದ್ದಾರೆ.

PREV
16

ಕನ್ನಡ ಚಿತ್ರರಂಗದ ಮರಿ ಟೈಗರ್‌ ಎಂದೇ ಖ್ಯಾತರಾದ ವಿನೋದ್ ಪ್ರಭಾಕರ್‌ ಇದೀಗ ಡಬಲ್ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ರಿಲೀಸ್​ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

26

ಇದೀಗ ಅದೇ ಖುಷಿಯಲ್ಲಿ ಪತ್ನಿಯ ಹುಟ್ಟುಹಬ್ಬವನ್ನ ಭರ್ಜರಿಯಾಗಿ ಆಚರಿಸಿದ್ದಾರೆ. ಹೌದು! ಮಾದೇವ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ಹುಟ್ಟುಹಬ್ಬವನ್ನ ಜೋರಾಗಿ ಆಚರಿಸಿದ್ದಾರೆ.

36

ಇತ್ತೀಚೆಗಷ್ಟೇ ನಿಶಾ ಪ್ರಭಾಕರ್ ಹುಟ್ಟುಹಬ್ಬವಿತ್ತು. ಈ ವೇಳೆ ವಿನೋದ್ ಪ್ರಭಾಕರ್ ಸ್ಪೆಷಲ್ ಸರ್‌ಪ್ರೈಸ್ ಪ್ಲಾನ್ ಮಾಡಿದ್ದಲ್ಲದೇ, ಚಿಶೇಷವಾದ ಡೆಕೋರೇಷನ್ ಮಾಡಿಸಿ ಪತ್ನಿ ನಿಶಾ ಬರ್ತ್‌ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ

46

ಪತ್ನಿಯ ಬರ್ತ್‌ಡೇ ಪ್ರಯುಕ್ತ ವಿನೋದ್ ಪ್ರಭಾಕರ್ ಅವರು ಡ್ಯಾನ್ಸ್​ ಮಾಡಿದ್ದಾರೆ. ಇನ್ನು ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಮಂಗಳಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ, ಬಿಗ್ ಬಾಸ್ ಖ್ಯಾತಿಯ ವಿನಯ್, ಗೌಡ, ರಜತ್,​ ಕಿಶನ್, ಧರ್ಮ ಕೀರ್ತಿರಾಜ್‌, ನಟಿ ಸೋನಲ್ ಮಂಥೆರೋ, ನಟ ಝೈದ್‌ ಖಾನ್ ಭಾಗವಹಿಸಿದ್ದರು.

56

ಇನ್ನು ಕಳೆದ ವಾರ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ರಿಲೀಸ್‌ ಆಗಿದೆ. ನವೀನ್ ರೆಡ್ಡಿ ನಿರ್ದೇಶನದ ಮಾದೇವ ಸಿನಿಮಾ ಹ್ಯಾಂಗ್‌ಮ್ಯಾನ್ ಕಥೆಯನ್ನ ಹೊಂದಿದ್ದು, ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಇದು ಸಿನಿ ಪ್ರಿಯರನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

66

ಮೌತ್ ಪಬ್ಲಿಸಿಟಿಯಿಂದಲೇ ಮಾದೇವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಸದ್ಯ ಮಾದೇವ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಈಗಾಗಲೇ 2.5 ಕೋಟಿ ಬಾಚಿಕೊಂಡಿದೆ.

Read more Photos on
click me!

Recommended Stories