ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿರುವ, ಬಿ.ಕೆ. ಚಂದ್ರಹಾಸ್ ನಿರ್ದೇಶನದ ‘ಕೌಂತೇಯ’ ಚಿತ್ರದ ‘ಚಿಗುರೆಲೆಯ ತುದಿಯ ಮೇಲೆ’ ಹಾಡು ಬಿಡುಗಡೆಯಾಗಿದೆ. ನಿರ್ದೇಶಕರೇ ಸಾಹಿತ್ಯ ಬರೆದಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ.
ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿರುವ ‘ಕೌಂತೇಯ’ ಚಿತ್ರದ ಹಾಡು ಬಿಡುಗಡೆ ಆಗಿದೆ. ಬಿ.ಕೆ. ಚಂದ್ರಹಾಸ್ ನಿರ್ದೇಶನದ ಚಿತ್ರವಿದು. ಜಿ.ಸುರೇಶ್ ಕುಮಾರ್ ನಿರ್ಮಾಣದ ಈ ಚಿತ್ರದ ‘ಚಿಗುರೆಲೆಯ ತುದಿಯ ಮೇಲೆ’ ಎನ್ನುವ ಹಾಡು ಈಗ ಕೇಳುಗರ ಮುಂದೆ ಬಂದಿದೆ. ನಿರ್ದೇಶಕರೇ ಹಾಡಿಗೆ ಸಾಹಿತ್ಯ ನೀಡಿದ್ದು, ಸಂಚಿತ್ ಹೆಗ್ಡೆ ಹಾಡಿದ್ದಾರೆ.
23
ಎಮೋಷನಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ
ಚಂದ್ರಹಾಸ, ‘ಇದು ಪೌರಾಣಿಕ ಕಥೆಯಲ್ಲ. ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಕತೆಗೆ ಒಬ್ಬ ಸಾಫ್ಟ್ ವಿಲನ್ ಬೇಕು ಅನಿಸಿದಾಗ, ಮನು ಅವರೇ ಸೂಕ್ತ ಅನಿಸಿತು. ಚಿತ್ರ ನೋಡಿದಾಗ ಕೆಲವು ತಪ್ಪುಗಳನ್ನು ನಾವು ಮಾಡಬಾರದು ಅನಿಸುತ್ತೆ. ರಕ್ತಪಾತ ಒಳ್ಳೆಯದಲ್ಲ ಎಂದು ಚಿತ್ರದ ಮೂಲಕ ಹೇಳಿದ್ದೇನೆ’ ಎಂದರು.
33
ನನ್ನ ಪಾತ್ರ ತುಂಬಾ ಭಿನ್ನ
ಮನೋರಂಜನ್, ‘ನನ್ನದು ಇಲ್ಲಿ ವಿಲನ್ ರೀತಿಯ ಪಾತ್ರ. ಮೊದಲ ಬಾರಿಗೆ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದೇನೆ. ಹೀಗಾಗಿ ನನ್ನ ಪಾತ್ರ ತುಂಬಾ ಭಿನ್ನವಾಗಿದೆ’ ಎಂದರು. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಪೊಲೀಸ್ ಪಾತ್ರದಲ್ಲಿ, ನಟಿ ಪ್ರಿಯಾಂಕ ತಿಮ್ಮೇಶ್ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಯಾರಾ ರಿದ್ದಿ ಚಿತ್ರದ ನಾಯಕಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.