ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜ್ಯ ಮಟ್ಟದ ಸ್ವಿಮ್ಮರ್ ಸಪ್ತಮಿ ಗೌಡ ಈಗ ಕಾಂತಾರ ಬ್ಯೂಟಿ...
ಕಾಂತಾರ ಸಿನಿಮಾ ಮೂಲಕ ದೇಶಾದ್ಯಂತ ಲೀಲಾ ಎಂದು ಪರಿಚಯವಾಗಿರುವ ಸಪ್ತಮಿ ಗೌಡ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಕಪ್ಪು ಬಣ್ಣದ ಲೆದರ್ ಸಿಂಗಲ್ ಪೀಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸಪ್ತಮಿ ಲೀಲಾ ಆಗಿ ನೋಡಿ ನೋಡಿ ಈ ಲುಕ್‌ನಲ್ಲಿ ನೀನು ಹಾಟ್ ಎಂದಿದ್ದಾರೆ ನೆಟ್ಟಿಗರು.
'ಬ್ಲ್ಯಾಕ್ ಧರಿಸಿ ಎಂದೂ ತಪ್ಪು ಮಾಡಲು ಸಾಧ್ಯವಿಲ್ಲ' ಎಂದು ಸಪ್ತಮಿ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು Mayartha Productions ಕ್ಲಿಕ್ ಮಾಡಿದ್ದಾರೆ.
ಕಾಂತಾರ ಸಪ್ತಮಿ ಎರಡನೇ ಸಿನಿಮಾ ಆಗಿದ್ದು, ಕಾಳಿ ಮೂರನೇ ಸಿನಿಮಾ. ಅಭಿಷೇಕ್ ಅಂಬರೀಶ್ ಜೊತೆ ನಟಿಸುತ್ತಿರುವ ಸಿನಿಮಾ ಇದಾಗಿದ್ದು ಕೆಲವು ದಿನಗಳ ಹಿಂದೆ ಮುಹೂರ್ತ ನಡೆದಿದೆ.
ಕಾಂತಾರ ಸಿನಿಮಾ ನಂತರ ಸಪ್ತಮಿ ಗೌಡರಿಗೆ ಆಫರ್‌ಗಳು ಹರಿದು ಬರುತ್ತಿದೆ. ಕೈ ತುಂಬಾ ಆಫರ್‌ಗಳಿದ್ದು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂದು ಕಾದು ನೋಡಬೇಕಿದೆ.