ಅದ್ಧೂರಿಯಾಗಿತ್ತು ರವಿಚಂದ್ರನ್ ಪುತ್ರ ಮನೋರಂಜನ್‌ ಆರತಕ್ಷತೆ: ಫೋಟೋಗಳಿವು!

First Published | Aug 21, 2022, 11:43 AM IST

ಕ್ರೇಜಿ ಸ್ಟಾರ್‌ ಮನೆಯಲ್ಲಿ ಮದುವೆ ಸಂಭ್ರಮ. ಮೊದಲ ಪುತ್ರನ ಆರತಕ್ಷತೆಯಲ್ಲಿ ಸ್ಟಾರ್ ನಟ-ನಟಿಯರು ಭಾಗಿ...

 ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 

 ಮನೋರಂಜನ್ ಮತ್ತು ಸಂಗೀತ ಆರತಕ್ಷತೆ ನಿನ್ನೆ ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಆಗಸ್ಟ್‌ 21ರಂದು ಮಾಂಗಲ್ಯಧಾರಣೆ ನೆರವೇರಲಿದೆ.

Tap to resize

ಆರತಕ್ಷತೆಯಲ್ಲಿ ಶಿವರಾಜ್‌ಕುಮಾರ್, ಮಾಲಾಶ್ರೀ, ಖುಷ್ಬು, ಸಿಟಿ ರವಿ, ಶರವಣ, ಹಂಸಲೇಖ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಸೋಮವಾರ 22ರಂದು ನಂದಿ ಬೆಟ್ಟದ ಬಳಿ ಇರುವ ಖಾಸಗಿ ಸ್ಟಾರ್ ಹೋಟೆಲ್‌ನಲ್ಲಿ ಸಿನಿಮಾ ನಟರು, ರಾಜಕೀಯ ಗಣ್ಯರು ಹಾಗೂ ಕುಟುಂಬಸ್ಥರಿಗೆ ಆರತಕ್ಷತೆ ನಡೆಯಲಿದೆ.

ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಸೂಟ್‌ನಲ್ಲಿ ಮನೋರಂಜನ್‌ ಕಾಣಿಸಿಕೊಂಡರೆ ಲ್ಯಾವೆಂಡರ್‌ ರೇಶ್ಮೆ ಸೀರೆಯಲ್ಲಿ ಸಂಗೀತ ಮಿಂಚಿದ್ದಾರೆ. ರವಿಚಂದ್ರನ್ ಕೂಡ ಬ್ಲ್ಯಾಕ್‌ ಸೂಟ್ ಧರಿಸಿದ್ದರು.

ಮನೋರಂಜನ್ ಸಾಹೇಬ, ರಣಧೀರ, ಮುಗಿಲ್‌ಪೇಟೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ 'ತ್ರಿವಿಕ್ರಮ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಸಂಗೀತ ದೀಪಲ್ ವೈದ್ಯಕೀಯ (doctor) ಹಿನ್ನಲೆ ಇರುವವರು ಎನ್ನಲಾಗಿದೆ. ಕಪಲ್‌ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Latest Videos

click me!