ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿರುವ ಕನ್ನಡಿಗ ಕಿಶೋರ್, ಪ್ರತಿಯೊಂದು ಪಾತ್ರವನ್ನು ಕೂಡ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಶೋರ್ ಈಗ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಈದ್‌ಗೆ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ ಸಿಕಂದರ್‌ನಲ್ಲಿ , ನಟ ಸಲ್ಮಾನ್ ಖಾನ್ ವಿರುದ್ಧ ವಿಲನ್ ಪಾತ್ರದಲ್ಲಿ ಕಿಶೋರ್ ಮಿಂಚಿದ್ದು ಇದು ಅವರ ಬಾಲಿವುಡ್ ನ ಮೊದಲ ಸಿನೆಮಾವಾಗಿದೆ.