ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!

Suvarna News   | Asianet News
Published : Mar 10, 2022, 10:33 AM IST

ಪುನೀತ್ ಇಲ್ಲದೆ ಹುಟ್ಟುಹಬ್ಬ ಬೇಡ. ನಟ ಜಗ್ಗೇಶ್ ಮಹತ್ವದ ನಿರ್ಧಾರಕ್ಕೆ ಸಾಥ್ ಕೊಟ್ಟ ಅಭಿಮಾನಿಗಳು.   

PREV
16
ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!

ಮಾರ್ಚ್‌ 17 ಇಡೀ ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ದಿನ ಏಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಹುಟ್ಟಿದ ದಿನ.

26

ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾದರು. ಅಪ್ಪು ನಮ್ಮೊಟ್ಟಿಗಿಲ್ಲ ಅನ್ನೋ ಕಹಿ ಸತ್ಯವನ್ನು ಯಾರೂ ಮನಸ್ಸಿನಿಂದ ಒಪ್ಪಿಕೊಳ್ಳುವುದಕ್ಕೆ ರೆಡಿಯಾಗಿಲ್ಲ.
 

36

ಅಣ್ಣನ ಸ್ಥಾನದಲ್ಲಿ ನಿಂತು ಅಪ್ಪುಗೆ ಪ್ರೀತಿ ಕೊಟ್ಟಿರುವ ಜಗ್ಗೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಅಪ್ಪು ಕರೆ ಮಿಸ್ ಮಾಡಿಕೊಳ್ಳುವೆ ಎಂದಿದ್ದಾರೆ.

46


'ಈ ಬಾರಿ ನನ್ನ 59 ನೇ ಹುಟ್ಟುಹಬ್ಬ ಆಚರಿಸುವುದಿಲ್ಲ ಅದಕ್ಕೆ ಮನಸ್ಸು ಇಲ್ಲ ಕಾರಣ ಪ್ರತಿ ವರ್ಷ ಮಾರ್ಚ್ 17ರಂದು ತಪ್ಪದೇ ಬರುತ್ತಿದ್ದು ಪುನೀತ್ ರಾಜ್‌ಕುಮಾರ್ ಅವರ ಕರೆ'

56

'ಪುನೀತ್ ರಾಜ್‌ಕುಮಾರ್ ಕರೆ ಮಾಡಿ ಅಣ್ಣ ಹ್ಯಾಪಿ ಬರ್ತಡೇ ಎನ್ನುತ್ತಿದ್ದರು. ಆ ಕರೆ ಮತ್ತೆ ಎಂದೂ ಬರದಂತಾಯಿತು' ಎಂದು ಟ್ಟೀಟ್ ಮಾಡಿದ್ದಾರೆ. 

66


ಈ ಮಾತುಗಳನ್ನು ಅಭಿಮಾನಿಗಳಿಗೆ ತಲುಪಿಸುವ ಮೂಲಕ ಅಪ್ಪು ಜೊತೆ ಕೊನೆ ಬಾರಿ ಕ್ಲಿಕ್ ಮಾಡಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ.

Read more Photos on
click me!

Recommended Stories