Radhika Pandit: ಕುಟುಂಬ ಹಾಗೂ ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡ ಸ್ಯಾಂಡಲ್​ವುಡ್​​ ಸಿಂಡ್ರೆಲ್ಲಾ!

First Published | Mar 9, 2022, 1:16 PM IST

ಸ್ಯಾಂಡಲ್​ವುಡ್​​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್​ ಸೋಮವಾರದಂದು 38ನೇ ಜನ್ಮದಿನವನ್ನು ಆಚರಿಸಿದ್ದರು. ಪತಿ ಯಶ್​ ಮತ್ತು ಮಕ್ಕಳು, ಆಪ್ತರೊಂದಿಗೆ ಈ ಸಂಭ್ರಮ ಆಚರಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ (Radhika Pandit) ಮಾರ್ಚ್ 7ರಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡರು. ಪತಿ ರಾಕಿಂಗ್ ಸ್ಟಾರ್ ಯಶ್ (Yash), ಮಕ್ಕಳಾದ ಆಯ್ರಾ (Ayra), ಯಥರ್ವ (Yatharv) ಇನ್ನುಳಿದ ಕುಟುಂಬಸ್ಥರು ಸೇರಿದಂತೆ ಸ್ನೇಹಿತರು ಇದ್ದರು.

ರಾಧಿಕಾ ಪಂಡಿತ್ ಅವರ ಅಭಿಮಾನಿ ಖಾತೆಗಳಲ್ಲಿ ಬರ್ತ್‌ಡೇ ಫೋಟೋಗಳು (Birthday Photos) ವೈರಲ್ ಆಗಿದ್ದು, ಮುದ್ದಾದ ಫೋಟೋಗಳನ್ನು ನೋಡಿ ಅಭಿಮಾನಿಗಳು (Fans) ಸಂಭ್ರಮಿಸಿದ್ದಾರೆ. 

Tap to resize

ಮಕ್ಕಳಾದ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿರುವ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿ ಇದ್ದಾರೆ. ಈ ಬಾರಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಗಲಿಕೆ ಹಿನ್ನಲೆ ಅವರು ಸರಳವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. 

'ಮೊಗ್ಗಿನ ಮನಸ್ಸು' (Moggina Manasu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ ಅದೇ ಚಿತ್ರದಲ್ಲಿ ತಮಗೆ ನಾಯಕರಾಗಿದ್ದ ಯಶ್​ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಯಶ್ ಅವರು ತಮ್ಮ ಮುದ್ದಿನ ಮಡದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಶೇಷವಾಗಿ ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದು, 'ನಂದಗೋಕುಲ' (Nandagokula) ತಂಡ. ಸಿನಿಮಾ ರಂಗಕ್ಕೆ ಬರುವ ಮುನ್ನ ರಾಧಿಕಾ ಪಂಡಿತ್ ಅವರು 'ನಂದ ಗೋಕುಲ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 

ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾದರೂ, ಸ್ಟಾರ್ ನಟ, ನಟಿಯಾಗಿ ಹೊರಹೊಮ್ಮಿದರೂ ಕೂಡ 'ನಂದಗೋಕುಲ' ಧಾರಾವಾಹಿ ತಂಡವನ್ನು ಯಶ್ ಆಗಲೀ, ರಾಧಿಕಾ ಆಗಲೀ ಮರೆತಿಲ್ಲ. ಸಿನಿಮಾಗಳಲ್ಲಿ ಬ್ಯುಸಿಯಾದರೂ ಕೂಡ ಕಿರುತೆರೆಯ ಸ್ನೇಹಿತರ (Friends) ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದಾರೆ. 

ಸದ್ಯ ಮಗುವಾದ ಮೇಲೂ ಚಾರ್ಮ್​ ಉಳಿಸಿಕೊಂಡಿರುವ ರಾಧಿಕಾ ಪಂಡಿತ್​ ಮತ್ತೆ ನಟನೆಗೆ ಮರಳಬೇಕು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಮಾತ್ರ ಇನ್ನು ನಿರ್ಧಾರ ಪ್ರಕಟಿಸಿಲ್ಲ.

ಇನ್ನೂ 2008ರಲ್ಲಿ ತೆರೆಗೆ ಬಂದ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್​. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಆ ನಂತರ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

Latest Videos

click me!