ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡ ಯಾರು?

First Published | Jun 11, 2024, 12:27 PM IST

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನಂತರ ನಟಿ ಪವಿತ್ರಾ ಗೌಡ ಕೂಡ ಅರೆಸ್ಟ್‌. ಯಾರು ಈ ಪವಿತ್ರಾ ಗೌಡ.... 

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನಂತರ ನಟಿ ಪವಿತ್ರಾ ಗೌಡ ಕೂಡ ಅರೆಸ್ಟ್‌. ಯಾರು ಈ ಪವಿತ್ರಾ ಗೌಡ....

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಕನ್ನಡದ ನಟ ದರ್ಶನ್ ಮತ್ತು ಎರಡನೇ ಪತ್ನಿ ಪವಿತ್ರಾ ಗೌಡರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Tap to resize

ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದಕ್ಕೆ ಮೂಲ ಕಾರಣವೇ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಕಳುಹಿಸಿರುವುದು.

ಕೆಟ್ಟ ಫೋಟೊ ಕಳಿಸುತ್ತಿದ್ದನಂತೆ ಹೀಗಾಗಿ ರೇಣುಕಾಸ್ವಾಮಿಯನ್ನ ಒಂದು ವಾರದಿಂದ ಟ್ರಾಕ್ ಮಾಡಿ ಬೆಂಗಳೂರಿಗೆ ಕರೆತಂದು ದರ್ಶನ್ ಆಪ್ತ ವಿನಯ್ ಕಾರ್ ಶೆಡ್‌ ಒಂದರಲ್ಲಿ ಇಟ್ಟು ಹಲ್ಲೆ ಮಾಡಿದ್ದರು. ಮರ್ಮಾಂಗಕ್ಕೆ ಬಲವಾಗಿ ಒದ್ದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದ. 

ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಗೌಡ ಸದ್ಯಕ್ಕೆ ರೆಡ್‌ ಕಾರ್ಪೆಟ್‌ ಎನ್ನುವ ಬೊಟಿಕ್‌ ನಡೆಸುತ್ತಿದ್ದಾರೆ. ಅಲ್ಲಿ ವುಮೆನ್ಸ್ ಸ್ಪೆಷಲ್, ಇಂಡಿಯನ್ ಟ್ರೆಡಿಷನಲ್, ವೆಸ್ಟರ್ನ್ ಹಾಘು ಇಂಡೋ ವೆಸ್ಟರ್ನ್ ಗಾರ್ಮೆಂಟ್ಸ್ ದೊರೆಯುತ್ತದೆ. 

ಜನವರಿ 24ರಂದು ದರ್ಶನ್‌ ಜೊತೆಗಿರುವ ಎಲ್ಲಾ ಫೋಟೋ ವಿಡಿಯೋಗಳನ್ನು ಹಂಚಿಕೊಂಡು 10 ವರ್ಷಗಳು ಕಳೆದಿದೆ ಇನ್ನೂ ಹಲವು ವರ್ಷಗಳಿದೆ ಎಂದು ಬರೆದುಕೊಂಡಿದ್ದಾರೆ. 

ಇದಾದ ಮೇಲೆ ಪವಿತ್ರಾ ಗೌಡ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೇಸರ ವ್ಯಕ್ತ ಪಡಿಸಿ ತಮ್ಮ ಫ್ಯಾಮಿಲಿ ಸಪೋರ್ಟ್‌ಗೆ ನಿಂತುಕೊಂಡರು. 

ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಆಕ್ಟಿವ್ ಆಗಿದ್ದು ಸುಮಾರು 1 ಲಕ್ಷ 30 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. 133 ಫೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. 

ಸಿನಿಮಾ ರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಪವಿತ್ರಾ ಗೌಡ ಕೂಡ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಪವಿತ್ರಾಗೂ ಹಲವು ಸಿನಿ ಸ್ನೇಹಿತರಿದ್ದಾರೆ. 

Latest Videos

click me!