ನಟಿ ಸಪ್ತಮಿ ಗೌಡ ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಸಿನಿಮಾರಂಗದಲ್ಲಿ ಯಶಸ್ಸಿನ ಸವಿ ಕಾಣುತ್ತಿರುವ ನಟಿ ಇತ್ತೀಚಿಗಷ್ಟೇ ತಮ್ಮ 28ನೇ ವರ್ಷದ ಜನ್ಮದಿನ ಆಚರಣೆ ಮಾಡಿದ್ದಾರೆ.
ಜೂನ್ 8 ರಂದು ತಮ್ಮ 28ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿರುವ ಸಪ್ತಮಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
ಕಾಂತಾರದಂಥ ದೊಡ್ಡ ಸಕ್ಸಸ್‌ಅನ್ನು ಕಂಡಿರುವ ನಟಿ ಸಪ್ತಮಿ ಗೌಡ, ಆ ಬಳಿಕ ಸಾಕಷ್ಟು ಹೊಸ ಸಿನಿಮಾಗಳಲ್ಲಿ ನಟಿಸಿದ್ದು, ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ನಿಂತು ಕೆಂಪು ಬಣ್ಣದ ಬ್ಲೇಜರ್, ಬಿಳಿ ಬಣ್ಣದ ಟಾಪ್ ಹಾಗೂ ಡೆನಿಮ್ ಜೀನ್ಸ್‌ನಲ್ಲಿ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಪೋಟೋ ಶೂಟ್‌ನಲ್ಲಿ ಸಪ್ತಮಿ ಗೌಡ ಧರಿಸಿರುವ ಕೂಲಿಂಗ್ ಗ್ಲಾಸ್ ಬಗ್ಗೆ ಹೆಚ್ಚಿನವರ ಗಮನ ಹೋಗಿದೆ. ನಿಮ್ಮ ಕೂಲಿಂಗ್ ಕ್ಲಾಸ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಕಾಂತಾರ ಸಿನಿಮಾದ ಬಳಿಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾದಲ್ಲಿಯೂ ಸಪ್ತಮಿ ಗೌಡ ನಟಿಸಿದ್ದರು.
ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಈಗ ಕಾಂತಾರ-ಚಾಪ್ಟರ್-1 ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದರ ಕುರಿತಾಗಿಯೂ ಅಪ್‌ಡೇಟ್ ಹೊರಬಿದ್ದಿದೆ.
ಕಾಂತಾರ-ಚಾಪ್ಟರ್ 1ನಲ್ಲಿಯೂ ಅವರು ಲೀಲಾ ಪಾತ್ರದಲ್ಲಿಯೇ ನಟಿಸುತ್ತಾರಾ? ಅಥವಾ ಬೇರೆ ಪಾತ್ರದಲ್ಲಿ ಇರಲಿದ್ದಾರಾ ಎನ್ನುವ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
2023ರಲ್ಲಿ ಅವರು ದಿ ವಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದರು. ವಿವೇಕ್ ಅಗ್ನಿಹೋತ್ರಿ ಸಿನಿಮಾ ಇದಾಗಿತ್ತು.
ಇದರ ನಡುವೆ ಸಪ್ತಮಿ ಗೌಡ ಹೆಸರು ಕೆಲವು ಕೆಟ್ಟ ವಿಚಾರಕ್ಕಾಗಿಯೂ ತಳುಕು ಹಾಕಿಕೊಂಡಿದೆ. ಸಿನಿಮಾ ನಟರೊಬ್ಬರ ವಿಚ್ಛೇದನದ ವಿಚಾರದಲ್ಲಿ ಸಪ್ತಮಿ ಹೆಸರು ಕೇಳಿಬರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಪ್ತಮಿ ಗೌಡ ಸಖತ್ ಹಾಟ್ ಆಗಿಯೂ ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಾರ್ಟ್ಸ್‌ನಲ್ಲಿ ಅವರು ಫೋಟೋ ಶೂಟ್ ಮಾಡಿಸಿದ್ದರು.
ಪೊಲೀಸ್ ಇನ್ಸ್‌ಪೆಕ್ಟರ್ ಎಸ್‌ಕೆ ಉಮೇಶ್ ಹಾಗೂ ಶಾಂತಾ ಅವರ ಪುತ್ರಿಯಾಗಿರುವ ಸಪ್ತಮಿ ಗೌಡ ರಾಷ್ಟ್ರೀಯ ಮಟ್ಟದ ಸ್ವಿಮ್ಮರ್ ಕೂಡ ಹೌದು.