Darshan Thoogudeepa ಪತ್ನಿ ವಿಜಯಲಕ್ಷ್ಮೀ‌ ಈ ಸುಂದರ ಗೌನ್‌ ಬೆಲೆಗೆ ಫ್ರಿಡ್ಜ್‌, ವಾಶಿಂಗ್‌ ಮಶಿನ್ ಬರುತ್ತೆ!

Published : Jun 24, 2025, 12:16 PM ISTUpdated : Jun 24, 2025, 12:47 PM IST

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ. ಈ ಡ್ರೆಸ್‌ ಬೆಲೆ ನೋಡಿದ್ರೆ ನಿಜಕ್ಕೂ ಹೌಹಾರ್ತೀರಾ! 

PREV
16

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಸಲ್ವಾರ್‌ ಸೂಟ್‌, ಕುರ್ತಾ, ಡಿಸೈನರ್‌ ಸೀರೆ, ಗೌನ್‌, ಜೀನ್ಸ್‌ ಪ್ಯಾಂಟ್‌, ಲೆಹೆಂಗಾ ಎಂದು ಅವರು ವಿವಿಧ ರೀತಿಯ ಡ್ರೆಸ್‌ ಧರಿಸಿ ಮಿಂಚುತ್ತಿದ್ದಾರೆ.

26

ವಿವಿಧ ರೆಸ್ಟೋರೆಂಟ್‌ಗಳು, ವಿದೇಶಿ ಪ್ರವಾಸ, ದೇವಸ್ಥಾನಗಳಿಗೆ ಭೇಟಿ ಹೀಗೆ ಅವರು ಬ್ಯುಸಿಯಿದ್ದಾರೆ. ಇತ್ತೀಚೆಗೆ ದರ್ಶನ್‌ ಅವರು ಪತ್ನಿ ಸಮೇರ ಕೊಟ್ಟಿಯೂರು ಜಾತ್ರೆಗೆ ಹೋಗಿದ್ದರು. ಈಗ ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್‌ ಧರಿಸಿ ಮಗನ ಜೊತೆ ಫೋಟೋಕ್ಕೆ ಪೋಸ್‌ ನೀಡಿದ್ದಾರೆ.

36

ವಿಜಯಲಕ್ಷ್ಮೀ ಅವರು ನೀಲಿ ಬಣ್ಣದ ಗೌನ್‌ ಧರಿಸಿದ್ದಾರೆ. ಇದು ಪಕ್ಕಾ ಡಿಸೈನರ್‌ ಡ್ರೆಸ್‌ ಆಗಿದ್ದು, ಆನ್‌ಲೈನ್‌ನಲ್ಲಿ ಈ ಡ್ರೆಸ್‌ ಹುಡುಕಾಡಿದಾಗ ಇದರ ಬೆಲೆ ಮಾತ್ರ ಎಂಥವರಿಗೂ ಶಾಕ್‌ ನೀಡುವುದು.

46

ಹೌದು, ಈ ಗೌನ್‌ ಬೆಲೆ ಒಂದೊಂದು ಸೈಟ್‌ನಲ್ಲಿ ಒಂದೊಂದು ರೇಟ್‌ ತೋರಿಸಿದರೂ ಕೂಡ 37000 ರೂಪಾಯಿಯಿಂದ 47000 ರೂಪಾಯಿ ಇದೆ ಎನ್ನಲಾಗಿದೆ.

56

ಈ ಗೌನ್‌ ಬೆಲೆಗೆ ಒಂದೊಳ್ಳೆಯ ಫ್ರಿಡ್ಜ್‌ ಅಥವಾ ವಾಶಿಂಗ್‌ ಮಶಿನ್‌ ಸಿಗೋದಂತೂ ಪಕ್ಕಾ ಎನ್ನಬಹುದು. ಸ್ಟಾರ್‌ ನಟನ ಪತ್ನಿ ಆಗಿರೋದಿಕ್ಕೆ ಇಷ್ಟು ಕಾಸ್ಟಲೀ ಬೆಲೆಯ ಬಟ್ಟೆ ಧರಿಸೋದು ಮಾತ್ರ ಸಹಜ ಬಿಡಿ. ಆದರೆ ಸಾಮಾನ್ಯ ಜನರಿಗೆ ಇದು ಗಗನ ಕುಸುಮವೇ ಸರಿ.

66

ಏನೇ ಹೇಳಿ, ವಿಜಯಲಕ್ಷ್ಮೀ ಅವರು ಈ ಗೌನ್‌ನಲ್ಲಿ ನೋಡಲು ಸಖತ್‌ ಆಗಿ ಕಾಣ್ತಿದ್ದಾರೆ. ಈ ಫೋಟೋಗಳಿಗೆ ನಟಿ ಅಂಜಲಿ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. 

Read more Photos on
click me!

Recommended Stories