Daisy Bopanna: ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್

Published : Jun 23, 2025, 05:08 PM ISTUpdated : Jun 23, 2025, 05:12 PM IST

ಗಾಳಿಪಟದ ಚೆಲುವೆ ಡೈಸಿ ಬೋಪಣ್ಣ, ನಟನೆಯಿಂದ ದೂರ ಇದ್ದು ವರ್ಷಗಳೇ ಕಳೆದಿದೆ. ಇದೀಗ ಬೈಕ್ ರೇಸಿಂಗ್ ಸಾಹಸಕ್ಕೆ ಕೈ ಹಾಕಿದ್ದು, ಅದರ ಜಲಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

PREV
18

ಅಂದು ಸಿನಿರಸಿಕರ ಮನಗೆದ್ದ ಸಿನಿಮಾ ಗಾಳಿಪಟ (Galipata film). ಈ ಚಿತ್ರದಲ್ಲಿ ಮಿಂಚಾಗಿ ನೀನು ಬರಲು ಹಾಡಿನಲ್ಲಿ ಮಿಂಚಂತೆ ಕಂಡು ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್ ನೆನಪಿದ್ಯಾ? ಹೌದು ಅದೇ ಡೈಸಿ ಬೋಪಣ್ಣ, ಈಗ ಆ ಸರಳ ಸುಂದರಿಯಾಗಿ ಉಳಿದಿಲ್ಲ, ಬದಲಾಗಿ, ಬೋಲ್ಡ್ ಬ್ಯೂಟಿಯಾಗಿ ಮಿಂಚುತ್ತಿದ್ದಾರೆ.

28

ಕನ್ನಡ ಸಿನಿಮಾದ ಜನಪ್ರಿಯ ನಟಿಯಾಗಿದ್ದ ಡೈಸಿ ಬೋಪಣ್ಣ (Daisy Bopanna), ಇದ್ದಕ್ಕಿದ್ದಂತೆ, ಮದುವೆಯಾಗಿ, ನಟನೆಗೆ ಗುಡ್ ಬೈ ಹೇಳಿ, ದೂರದ ಮುಂಬೈಗೆ ಹೋಗಿ ನೆಲೆಸಿದರು. ನಟಿಸದೇ ಇದ್ದರೂ ಸಹ ಡೈಸಿ ತಮ್ಮ ಫಿಟ್ನೆಸ್, ಬೋಲ್ಡ್ ನೆಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.

38

ಇದೀಗ ಹೊಸ ಸಾಹಸಕ್ಕೆ ಕೈ ಹಾಕಿರುವ ಡೈಸಿ ಬೋಪಣ್ಣ, ಬೈಕ್ ರೇಸಿಂಗ್ (bike racing) ಮೂಲಕ ತಮ್ಮ ಬಾಲ್ಯದ ಕನಸನ್ನು ನನಸಾಗಿಸುತ್ತಿದ್ದಾರೆ. ತಮ್ಮ ಬೈಕ್ ರೇಸಿಂಗ್ ಜಲಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಈ ನಟಿ.

48

ನಾನು ಚಿಕ್ಕವಳಿದ್ದಾಗ, ನನ್ನ ಅಪ್ಪ ಜಾವಾ ಬೈಕ್ ರೈಡ್ (bike ride) ಮಾಡುವಾಗ, ಅದರ ಟ್ಯಾಂಕ್ ಮೇಲೆ ಕುಳಿತುಕೊಳ್ಳುತ್ತಿದ್ದೆ, ನಾನು 19 ವರ್ಷದವಳಿದ್ದಾಗ ನನ್ನ ಮೊದಲ ಡುಕಾಟಿ ಮಾನ್’ಸ್ಟರ್ ಬೈಕ್ ಅನ್ನು ಓಡಿಸಿದೆ , ಅದರ ಜೊತೆಗೆ ಹಯಾಬುಸಾ, ಯಮಹಾ ಇತ್ಯಾದಿ ಸೂಪರ್ ಬೈಕ್‌ಗಳ ಸರಣಿಯನ್ನು ಓಡಿಸಿದೆ. ಆದರೆ ಬೇರೆ ಯಾವುದೇ ಕ್ರೀಡೆಯಲ್ಲಿ ಬೈಕ್ ರೈಡ್ ಮಾಡುವಾಗಿನ ಹುರುಪು, ಉತ್ಸಾಹ ಸಿಗೋದಿಲ್ಲ, ಬೈಕ್ ರೇಸಿಂಗ್ ಅನ್ನು ಬೇರೆ ಯಾವುದಕ್ಕೂ ಹೋಲಿಸೋದಕ್ಕೂ ಸಾಧ್ಯವಿಲ್ಲ. ರೈಡರ್ ಗಳಿಗೆ ಮಾತ್ರ ಅದರ ಅನುಭವ ಗೊತ್ತಿರುತ್ತೆ.

58

ಈ ರೇಸಿಂಗ್ ಕೋರ್ಸ್ superbike school ನನ್ನ ನನಸಾದ ಕನಸಾಗಿತ್ತು. ರೇಸಿಂಗ್ ಕಲಿಯುವುದು ಮತ್ತು ಮುಖ್ಯವಾಗಿ ಕೋರ್ಸ್ ನಂತರ ಕಲಿತದ್ದು ನಾನು ನಿರೀಕ್ಷಿಸದ ವಿಷಯವಾಗಿದ್ದು, ಆದರೆ ಈ ರೇಸಿಂಗ್ ಕೋರ್ಸ್ ನನ್ನ ರೈಡ್ ಗಳಲ್ಲಿ ಹಿಂದೆಂದೂ ಇಲ್ಲದಷ್ಟು ಆತ್ಮವಿಶ್ವಾಸವನ್ನು ನೀಡಿದ್ದು ನಿಜ..

68

ಎಲ್ಲಾ ಬೈಕರ್ಸ್ ಗಳಿಗೆ ರೇಸಿಂಗ್ ಒಂದು ಮಹತ್ವದ ವಿಷಯ, ಒಂದೇ ಬಾರಿಗೆ ಎಲ್ಲವನ್ನೂ ಕಲಿಯೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ರೈಡರ್ಸ್ ಗಳ ಜೊತೆ ಮತ್ತೆ ಮತ್ತೆ ರೇಸಿಂಗ್ ಕೋರ್ಸ್ ಮಾಡಬೇಕಾಗಬಹುದು. ಆದರೆ ಇದೆಲ್ಲವೂ ಯೋಗ್ಯವಾದುದು ಎಂದಿದ್ದಾರೆ ಡೈಸಿ ಬೋಪಣ್ಣ.

78

ಬೈಕ್, ಭಯ, ಆ ಉತ್ಸಾಹ, ಹುರುಪು, ಅನಿಶ್ಚಿತತೆ, ತಂತ್ರ, ಫೋಕಸ್, ಗಟ್ಟಿತನ, ದೈಹಿಕ ದೃಢತೆ (physical fitness) - ಇವೆಲ್ಲವೂ ನನ್ನ ರೈಡಿಂಗ್ ಮೇಲಿನ ಪ್ರೀತಿಯನ್ನು ಮತ್ತಷ್ಟು ಇನ್ನಷ್ಟು ಹೆಚ್ಚಿಸಿದೆ. ಇದೆಲ್ಲವೂ ಸಾಧ್ಯವಾಗಿದೆ ಅಂದ್ರೆ, ಇದು ಕೇವಲ ಆರಂಭ ಅಷ್ಟೇ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಬೈಕ್ ರೇಸಿಂಗ್ ಜರ್ನಿ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿಯನ್ನು ತೋರಿಸಿದ್ದಾರೆ ಗಾಳಿಪಟ ಚೆಲುವೆ.

88

ತಮ್ಮ ಪೋಸ್ಟ್ ಜೊತೆ ಬೈಕ್ ರೇಸಿಂಗ್ ಮಾಡುವ ವಿಡಿಯೋ ಹಾಗೂ ಸ್ಪೋರ್ಟ್ಸ್ ಬೈಕ್ ಜೊತೆಗೆ ತಾವು ನಿಂತಿರುವ ಒಂದಷ್ಟು ಫೋಟೊಗಳನ್ನು ಡೈಸಿ ಬೋಪಣ್ಣ ಶೇರ್ ಮಾಡಿದ್ದಾರೆ. ಇವರ ಫೋಟೊ ನೋಡಿ ಅಭಿಮಾನಿಗಳು ಮೆಂಚಿಕೊಂಡಿದ್ದು, ಲೇಡಿ ಬಾಂಡ್, ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಎಂದಿದ್ದಾರೆ.

Read more Photos on
click me!

Recommended Stories