ಟಾಕ್ಸಿಕ್ ಟೀಸರ್‌ನ ಒಂದು ಸೀನ್‍ಗೆ ಬೆಚ್ಚಿ ಬಿದ್ದ ಹಾಲಿವುಡ್, ರಾಯನಾಗಿ ಯಶ್ ಹೊಸ ಮೈಲಿಗಲ್ಲು ಸೃಷ್ಟಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ. ಆದರೆ ಅತ್ತ ಹಾಲಿವುಡ್ ಒಂದು ಕ್ಷಣ ದಂಗಾಗಿದೆ. ಕಾರಣ ಅದು ಒಂದು ಸೀನ್.
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಸಿನಿಮಾ ಜಗತ್ತೇ ತಿರುಗಿ ನೋಡುವ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕನ್ನಡ ಸಿನಿಮಾ ಮಾತ್ರವಲ್ಲ ಭಾರತೀಯ ಸಿನಿಮಾದಲ್ಲೇ ಈ ರೀತಿಯ ಟೀಸರ್ ಬಂದೇ ಇಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ದೂರದಲ್ಲಿರುವ ಹಾಲಿವುಡ್ ಕುಳಿತಲ್ಲೇ ಬೆವತಿದೆ. ಕಾರಣ ಅದೊಂದು ಸೀನ್.
26
ಹಾಲಿವುಡ್ ಮೀರಿಸಿದ ಇಂಪ್ರೂವೈಸೇಶನ್
ಟಾಕ್ಸಿಕ್ ಟೀಸರ್ ದೇಶಾದ್ಯಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಓಪನಿಂಗ್ ಸೀನ್ ಹಾಲಿವುಡೇ ರೇಂಜ್‌ನಲ್ಲೇ ತೆಗೆದಿದ್ದಾರೆ. ವಿಶೇಷ ಅಂದರೆ ಹಾಲಿವುಡ್ ಬೆಚ್ಚಿ ಬಿದ್ದಿರುವುದು ಟೀಸರ್‌ನ 2.11 ನಿಮಿಷದಲ್ಲಿರುವ ಸೀನ್. ಹಲವು ಬಾಲಿವುಡ್ ಸಿನಿಮಾಗಳಲ್ಲಿ ಈ ರೀತಿಯ ಸೀನ್‌ಗಳಿವೆ. ಆದರೆ ಇಷ್ಟು ಇಂಪ್ರೂವೈಸೇಶನ್ ಯಾರೂ ಊಹಿಸಿಯೇ ಇರಲಿಲ್ಲ.
36
ರಾಕಿ ಬಾಯ್ ಫೈರ್
ಯಶ್ ಈ ಸಿನಿಮಾದಲ್ಲಿ ರಾಯ ಪಾತ್ರ ಮಾಡಿದ್ದಾರೆ. ಟೀಸರ್‌ನಲ್ಲಿ ರಾಯ ಗನ್ ಹಿಡಿದುಕೊಂಡು ಎಂಟ್ರಿಯಾಗುತ್ತಿದ್ದಂತೆ, ಸಮಾಧಿ ಸ್ಥಳದಲ್ಲಿ ರಾಯ ಮೇಲೆ ಗುಂಡಿನ ಮಳೆಗೆರೆಯಲು ಆದೇಶ ನೀಡುತ್ತಾನೆ. ಆದರೆ ನಡೆದುಕೊಂಡು ಬರುತ್ತಿದ್ದಂತೆ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ಓರ್ವ ತನ್ನ ಕೈಯಲ್ಲಿದ್ದ ಗನ್ ಎತ್ತಿ ಶೂಟ್ ಮಾಡಲು ಮುಂದಾಗುತ್ತಾನೆ. ಆದರೆ ಯಶ್ ಆತನ ಕೈ ಹಾಗೂ ಗನ್ ಮೇಲೆ ಕಾಲಿಟ್ಟು ಗುಂಡಿನ ಮಳೆಗೆರೆಯುವ ಸೀನ್ ಬಾಲಿವುಡ್ ಎಲ್ಲಾ ಸಿನಿಮಾಮಗಳನ್ನು ಮೀರಿಸಿದೆ.
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಒಟ್ಟು 2.51 ನಿಮಿಷ. ಆರಂಭದಂದ ಅಂತ್ಯದವರಗೆ ಹಲವು ಶೇಡ್‌ಗಳಿವೆ. ಟೀಸರ್ ಆರಂಭದಲ್ಲೇ ಹಚ್ಚ ಹಸುರಿನ ಸುಂದರ ಪರಿಸರದಿಂದ ಆರಂಭಗೊಳ್ಳುತ್ತಿದೆ. ಆದರೆ ಎರಡನ ಫ್ರೇಮ್‌ನಿಂದಲೇ ಬ್ಲಾಕ್ ಥೀಮ್ ಆವರಿಸಿಕೊಳ್ಳುತ್ತದೆ. ಹಾಲಿವುಡ್ ಪ್ರತಿ ಸಿನಿಮಾ ಕತೆ ಆಧರಿಸಿ ಒಂದೊಂದು ಥೀಮ್ ಮೂಲಕ ತೋರಿಸಲಾಗುತ್ತದೆ. ಆದರೆ ಟಾಕ್ಸಿಕ್ ಹಾಲಿವುಡ್ ಥೀಮ್‌ಗಳನ್ನೇ ಮೀರಿಸಿದ ರೀತಿಯಲ್ಲಿ ಮೂಡಿ ಬಂದಿದೆ.
56
ಸಮಾಧಿ ಸ್ಥಳದಿಂದಲೇ ನೆಗೆಟೀವ್
ಸಮಾಧಿ ಸ್ಥಳವೇ ನೆಗಟೀವ್ ಸ್ಥಳ. ಇ ನೆಗೆಟಿವಿಟಿಯಿಂದಲೇ ಸಿನಿಮಾ ಟೀಸರ್ ಆರಂಭಗೊಳ್ಳುತ್ತದೆ. ಇದರ ಜೊತೆಗೆ ಪ್ರತಿ ಫ್ರೇಮ್ ಬ್ಲಾಕ್ ಥೀಮ್ ಆವರಿಸಕೊಳ್ಳುತ್ತದೆ. ಯಶ್ ಎಂಟ್ರಿ, ಬಳಸಿರುವ ಕಾರು, ಡ್ರೆಸ್, ಕಾರಿನಲ್ಲಿನ ಸೀನ್, ಸಮಾಧಿ ಸ್ಥಳಕ್ಕೆ ಗನ್ ಹಿಡಿದು ಆಗಮಿಸುವ ಸೀನ್, ಬಳಿಕ ಫೈರಿಂಗ್, ಸ್ಫೋಟದ ವೇಳೆ ಬೆಂಕಿ ಜ್ವಾಲೆಯಲ್ಲೂ ಬ್ಲಾಕ್ ಥೀಮ್ ಬಳಸಿಕೊಳ್ಳಲಾಗಿದೆ.
ಸಮಾಧಿ ಸ್ಥಳದಿಂದಲೇ ನೆಗೆಟೀವ್
66
ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್
ಯಶ್ ಅಭಿನಯದ ಟಾಕ್ಸಿಕ್ ಸಿನಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಟೀಸರ್ ಬಾರಿ ಸಂಚಲನ ಸೃಷ್ಟಿಸಿದೆ. ಕೆಲವೇ ನಿಮಿಷದಲ್ಲಿ ಭರ್ಡರಿ ಲೈಕ್ಸ್ ಹಾಗೂ ವೀವ್ಸ್ ಪಡೆದಿದೆ. ಟಾಕ್ಸಿಕ್ ಸಿನಿಮಾ ಕುರಿತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.