Sudeep: ನನ್ನ ಸೂಪರ್ ಹೀರೋ...; ಚಿತ್ರರಂಗದಲ್ಲಿ 27 ವರ್ಷ ಪೂರೈಸಿದ ಕಿಚ್ಚನಿಗೆ ಪ್ರಶಾಂತ್ ಸಂಬರ್ಗಿ ವಿಶೇಷ ವಿಶ್

Published : Feb 01, 2023, 06:18 PM IST

ಚಿತ್ರರಂಗದಲ್ಲಿ 27 ವರ್ಷಗಳನ್ನು ಪೂರೈಸಿದ ನಟ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ವಿಶೇಷವಾಗಿ ವಿಶ್ ಮಾಡಿದ್ದಾರೆ. 

PREV
17
Sudeep: ನನ್ನ ಸೂಪರ್ ಹೀರೋ...; ಚಿತ್ರರಂಗದಲ್ಲಿ 27 ವರ್ಷ ಪೂರೈಸಿದ ಕಿಚ್ಚನಿಗೆ ಪ್ರಶಾಂತ್ ಸಂಬರ್ಗಿ ವಿಶೇಷ ವಿಶ್

ಅಭಿನಯ ಚಕ್ರವರ್ತಿ, ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಸಿನಿಮಾರಂಗದಲ್ಲಿ 27 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಮಯದಲ್ಲಿಕಿಚ್ಚನಿಗೆ ಅನೇಕ ಗಣ್ಯರು, ಆಪ್ತರು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. 

27

ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.  ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಿಚ್ಚನ ಆಪ್ತ ಪ್ರಶಾಂತ್ ಸಂಬರ್ಗಿ ವಿಶೇಷವಾಗಿ ಸುದೀಪ್‌ಗೆ ವಿಶ್ ಮಾಡಿದ್ದಾರೆ.

37

ಸುದೀಪ್ ಜೊತೆಗಿರುವ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಿಚ್ಚನ 27 ವರ್ಷಗಳ ಜರ್ನಿಗೆ ವಿಶ್ ಮಾಡಿದ್ದಾರೆ. ಈ ಫೋಟೋಗಳು ಕಿಚ್ಚನ ಜೊತೆಗಿನ ಹಳೆಯ ಬಾಂಧವ್ಯವನ್ನು ಬಿಚ್ಚಿಟ್ಟಿದೆ. 

47

2001 ಮೊದಲ ಟಿಲಿಕಾಂ ಬ್ರಾಂಡ್ ಅಂಬಾಸಿಡರ್‌ರಿಂದ 2023 ಬಿಗ್ ಬಾಸ್ 9 ವರೆಗೂ. ನಾನು ಎಲ್ಲವನ್ನು ನೋಡಿದ್ದೇನೆ. ನನ್ನ ಗೆಳೆಯನ ಯಶಸ್ಸು ಮತ್ತು ಬೆಳವಣಿಗೆಯನ್ನು ಆನಂದಿಸಿದ್ದೇನೆ' ಎಂದಿದ್ದಾರೆ.  
 

57

'ಅಭಿಮಾನಿಗಳಿಗೆ, ಸುದೀಪಿಸಂಗೆ 27 ವರ್ಷಗಳು ನನಗೆ ಇದು ಶುದ್ಧ ಸ್ನೇಹ. ಈ 27 ವರ್ಷಗಳಲ್ಲಿ ನಾನು ಮತ್ತು ನನ್ನ ಸ್ನೇಹಿತ ಸುದೀಪ್ ಮತ್ತು ಸುದೀಪಿಸಂ ಬಗ್ಗೆ 23 ವರ್ಷಗಳಿಂದ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇನೆ' ಎಂದು ಹೇಳಿದ್ದಾರೆ. 

67

'ನನ್ನ ಸೂಪರ್‌ಹೀರೋ ಕಿಚ್ಚ ಸಿದೀಪ್ ಅವರಿಗೆ ಶುಭವಾಗಲಿ ಮತ್ತು ಶುಭ ಹಾರೈಕೆಗಳು ಮತ್ತು ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

77

ಕಿಚ್ಚ ಸುದೀಪ್ ಅವರ 27 ವರ್ಷಗಳ ಸಿನಿಮಾ ಜರ್ನಿಯಲ್ಲಿ ನಟನೆ, ನಿರ್ದೇಶನ, ಸಿನಿಮಾ, ಕಿರುತೆರೆ, ಪರಭಾಷೆಯಲ್ಲೂ ನಟಿಸಿ ಯಶಸ್ಸು ಕಂಡಿದ್ದಾರೆ. ಕಿಚ್ಚನ ಈ ಜರ್ನಿ ಹೀಗೆ ಮುದುವರೆಯಲಿ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.  

Read more Photos on
click me!

Recommended Stories