ರಗಡ್ ಹಳ್ಳಿ ಹುಡುಗಿ ಪಾತ್ರದಲ್ಲಿ ಕೀರ್ತಿ ಕೃಷ್ಣ; ಫೋಟೋಗಳು ವೈರಲ್

Published : Jan 28, 2023, 01:01 PM IST

ಶರಣ್ ಮತ್ತು ಶ್ರುತಿ ಕೃಷ್ಣ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೀರ್ತಿ. ಪಕ್ಕಾ ಹಳ್ಳಿ ಹುಡುಗಿ ಪಾತ್ರ ಆಯ್ಕೆ ಮಾಡಿಕೊಂಡಿರುವುದು ಯಾಕೆ? 

PREV
16
ರಗಡ್ ಹಳ್ಳಿ ಹುಡುಗಿ ಪಾತ್ರದಲ್ಲಿ ಕೀರ್ತಿ ಕೃಷ್ಣ; ಫೋಟೋಗಳು ವೈರಲ್

ಶರಣ್ ಮತ್ತು ಶ್ರುತಿ ಕೃಷ್ಣ ಸಹೋದರಿ ಉಷಾ ಅವರ ಪುತ್ರಿ ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಳ್ಳಿ ಹುಡುಗಿ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

26

ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕೀರ್ತಿ ಅವರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಂಸ್ಥೆಯಲ್ಲಿ ನಟನಾ ತರಬೇತಿ ಮಾಡಿದ್ದಾರೆ ಹಾಗೂ ನೀನಾಸಂನಲ್ಲಿ ಮಾಸ್ಟರ್‌ ಧನಂಜಯ್‌ ಅವರಿಂದ ನಟನೆ ಕಲಿತಿದ್ದಾರೆ. 

36

ಧರಣಿ ಚಿತ್ರತಂಡ ನಾಯಕಿಯನ್ನು ಹುಡುಕುವಾಗ ಸೋಷಿಯಲ್ ಮೀಡಿಯಾದಲ್ಲಿ ಕೀರ್ತಿ ಅಪ್ಲೋಡ್ ಮಾಡಿದ ಹಳ್ಳಿ-ಹೋಮ್ಲಿ ಗೆಟಪ್‌ ನೋಡಿ  ಸಂಪರ್ಕ ಮಾಡಿದ್ದರಂತೆ. 

46

2010ರಲ್ಲಿ ಓಂ ಸಾಯಿ ಪ್ರಕಾಶ್ ನಿರ್ದೇಶನ ಮಾಡಿರುವ ಶ್ರೀನಾಗಶಕ್ತಿ ಸಿನಿಮಾದಲ್ಲಿ ರಾಮ್‌ಕುಮಾರ್ ಮತ್ತು ಶ್ರುತಿ ಮಗಳ ಪಾತ್ರದಲ್ಲಿ ಕೀರ್ತಿ ಅಭಿನಯಿಸಿದ್ದಾರೆ. 

56

ಬಾಲ್ಯದಿಂದಲೂ ದೊಡ್ಡಮ್ಮ ಶ್ರುತಿ ನಟಿಸಿರುವ ಚಿತ್ರಗಳನ್ನು ನೋಡಿರುವ ಕಾರಣ ನಟಿಯಾಗಬೇಕು ಎಂದು ಕನಸು ಕಂಡರಂತೆ. ಹೀಗಾಗಿ ವಿದ್ಯಾಭ್ಯಾಸ ಮುಗಿಸಿದ ನಂತರ ಎಂಟ್ರಿ ಕೊಟ್ಟಿದ್ದಾರೆ. 

66

'ಮನೆ ತುಂಬಾ ಕಲಾವಿದರೇ ಇದ್ದಾರೆ. ಅವರನ್ನು ನೋಡಿಕೊಂಡು ಬೆಳೆದ ನನಗೆ ಸಹಜವಾಗಿ ನಟಿ ಆಗಬೇಕು ಅನಿಸಿತು. ನನ್ನ ತಾತ ಹಾಗೂ ದೊಡ್ಡಮ್ಮ ಶ್ರುತಿ, ಸೋದರ ಮಾವ ಶರಣ್‌ ಅವರ ಚಿತ್ರಗಳನ್ನು ನೋಡಿಕೊಂಡು ಬಂದವಳು. ಇವರೇ ನನಗೆ ಸ್ಫೂರ್ತಿ ಕೂಡ' ಎಂದು ಕೀರ್ತಿ ಹೇಳಿದ್ದಾರೆ. 

Read more Photos on
click me!

Recommended Stories