ಕನ್ನಡ ಚಿತ್ರರಂಗದ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಇಂದು ಅಂದ್ರೆ ಜುಲೈ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
211
ಈಗಾಗಲೇ ಗಣೇಶ್ ಅವರು ಅಭಿಮಾನಿಗಳಿಗೆ ಈ ಬಾರಿ ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಕುರಿತು ಗಣೇಶ್ ತಾವೇ ಖುದ್ಧಾಗಿ ಸೋಶಿಯಲ್ ಮೀಡೀಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
311
ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ಣುಂಬಿಕೊಂಡು ಸಂಭ್ರಮಿಸುವ ದಿನ. ಆದರೆ ಈ ಬಾರಿ ನಾನು ‘ಪಿನಾಕ’ ಹಾಗೂ ‘Your Sincerely ರಾಮ್’ ಚಿತ್ರಗಳ ಹೊರಾಂಗಣ ಚಿತ್ರೀಕರಣಗಳಲ್ಲಿ ಭಾಗವಹಿಸಬೇಕಿರುವ ಕಾರಣ ಜುಲೈ 2ರಂದು ನಾನು ನಿಮ್ಮೆಲ್ಲರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.
ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವು ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ ಎಂದು ಈ ಮೂಲಕ ವಿನಂತಿಸುತ್ತೇನೆ ಎನ್ನುವ ಪೋಸ್ಟ್ ಮಾಡಿದ್ದರು.
511
ಆದರೆ ಹುಟ್ಟುಹಬ್ಬಕ್ಕೂ (birthday) ಮುನ್ನ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಿಗಾಗಿ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು, ಗಣೇಶ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಫೋಟೊ ಶೂಟ್ ಮಾಡಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
611
ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಸ್ಟೈಲಿಶ್ ಆಗಿ ಕಾಣಬಹುದು. ಈ ಫೋಟೊಗಳನ್ನು ನಿಜಕ್ಕೂ ಅಭಿಮಾನಿಗಳ ಪಾಲಿಗೆ ಬರ್ತ್ ಡೆ ಉಡುಗೊರೆಯೇ (birthday gift) ಆಗಿದೆ.
711
ನಿತ್ಯಪ್ರಕಾಶ್ ಬಂಟ್ವಾಳ ಅವರು ಗಣೇಶ್ ಅವರ ಫೋಟೊ ಶೂಟ್ ಮಾಡಿಸಿದ್ದು, ವಿಭಿನ್ನ ಹೇರ್ ಸ್ಟೈಲ್, ಸ್ಲಿಮ್ ಲುಕ್, ಸ್ಟೈಲಿಶ್ ಮ್ಯಾನರಿಸಂ ಮೂಲಕ ಮಿಂಚುತ್ತಿದ್ದಾರೆ ಗೋಲ್ಡನ್ ಸ್ಟಾರ್.
811
ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದೇ ದಿನಕ್ಕೆ ಸ್ಟಾರ್ ಆದವರಲ್ಲ. ಮುಂಗಾರು ಮಳೆ ಸಿನಿಮಾ ಅವರನ್ನು ಗೋಲ್ಡನ್ ಸ್ಟಾರ್ ಮಾಡಿದ್ದು ನಿಜಾ ಆದರೆ ಗಣೇಶ್ ಆ ಹಂತಕ್ಕೆ ತಲುಪೋದಕ್ಕೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ.
911
ಕಿರುತೆರೆಯಲ್ಲಿ ಕಾಮಿಡಿ ಟೈಮ್ ಎನ್ನುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಗಣೇಶ್, ಕಾಮಿಡಿ ಟೈಮ್ ಗಣೇಶ್ (Comedy Time Ganesh) ಅಂತಾನೆ ಫೇಮಸ್. ನಂತರ ಸೀರಿಯಲ್ ಗಳಲ್ಲಿ ನಟಿಸಿ, ಸುಮಾರು 12 ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ, ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದರು ಗಣೇಶ್.
1011
ಚೆಲ್ಲಾಟ ಸಿನಿಮಾ ಮೂಲಕ ನಾಯಕನಾಗಿ ಭಡ್ತಿ ಪಡೆದ ಗಣೇಶ್ ನಂತರ ಹಿಂದಿರುಗಿ ನೋಡಿಲ್ಲ. ಯೋಗರಾಜ್ ಭಟ್ ಅವರ ಮುಂಗಾರು ಮಳೆ ಸಿನಿಮಾ ಗಣೇಶ್ ಅವರನ್ನು ಗೋಲ್ಡನ್ ಸ್ಟಾರ್ ಮಾಡಿತು, ಸಿನಿಮಾ ಸೂಪರ್ ಹಿಟ್ ಆಯಿತು. ಬಳಿಕ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದರು.
1111
ಕೊನೆಯದಾಗಿ ಗಣೇಶ್ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ‘ಪಿನಾಕ’ ಹಾಗೂ ‘Your Sincerely ರಾಮ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಸದ್ಯ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಗಣೇಶ್.