Ganesh's Birthday Gift: ಜನ್ಮದಿನದಂದು ಭಜರಂಗಿ ಅವತಾರ ತಾಳಿದ 'ಗೋಲ್ಡನ್‌ ಸ್ಟಾರ್‌' ಗಣೇಶ್!

Published : Jul 02, 2025, 11:53 AM ISTUpdated : Jul 02, 2025, 12:50 PM IST

ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದು ಖ್ಯಾತಿ ಪಡೆದಿರುವ ನಟ ರಮೇಶ್‌ ಅರವಿಂದ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬೋ 'Yours Sincerely Raamʼಗಾಗಿ ಒಂದಾಗಿರುವುದು ಗೊತ್ತೇ ಇದೆ. 

PREV
15

ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇಂದು ನಟ ಗಣೇಶ್‌ ಹುಟ್ಟುಹಬ್ಬಕ್ಕೆ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. 'Yours Sincerely Raamʼ ಪೋಸ್ಟರ್‌ ಬಿಡುಗಡೆ ಮಾಡಿ ಗೋಲ್ಡನ್‌ ಸ್ಟಾರ್‌ಗೆ ಬರ್ತಡೇ ಶುಭಾಶಯ ತಿಳಿಸಿದೆ.

25

ಗಣೇಶ್‌ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್‌ ಬಹಳ ವಿಶೇಷವಾಗಿದೆ. ಗಣೇಶ್‌ ಹಿಂದೆಂದೂ ಕಾಣದ ಗೆಟಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಅವತಾರದಲ್ಲಿ ಮಳೆ ಹುಡ್ಗ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್‌ ಡ್ರಾಪ್‌ ನಲ್ಲಿ ಮೂಡಿ ಬಂದಿರುವ ಪೋಸ್ಟರ್‌ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್‌ ಮ್ಯಾನ್‌ ಬ್ಯಾಗ್‌ ಕಾಣಿಸುತ್ತದೆ. ಪೋಸ್ಟರ್‌ ನಾನಾ ಕುತೂಹಲ ಹುಟ್ಟುಹಾಕುವ ಕ್ರಿಯೇಟ್‌ ಮಾಡುವುದರ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

35

ʼಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಿನಿಮಾ ಹಸಿವಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ.

45

ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ Your's sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ Your's sincerely ತೆರೆಗೆ ಬರಲಿದೆ.

55

ಅಂದಹಾಗೆ ಗಣೇಶ್‌ ಅವರು ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ. ಮನೆ ಬಳಿ ಬರಬೇಡಿ, ನಾನು ಮನೆಯಲ್ಲಿ ಇರೋದಿಲ್ಲ ಎಂದು ಅವರು ಹೇಳಿದ್ದಾರೆ.

Read more Photos on
click me!

Recommended Stories