Films about Sacrificial Love: ಪ್ರೀತಿಸಿದ ಹುಡುಗಿ ಸಿಗಲೇಬೇಕೆನ್ನುವ ಹಠ ಪ್ರೀತಿಯಲ್ಲ…. ತ್ಯಾಗ ಕೂಡ ನಿಜವಾದ ಲವ್ ಎಂದು ತೋರಿಸಿಕೊಟ್ಟ ಸಿನಿಮಾಗಳಿವು

Published : Sep 10, 2025, 12:54 PM IST

ತಮ್ಮ ಪ್ರೀತಿಯನ್ನು ಹೇಗಾದರು ಮಾಡಿ ಉಳಿಸಿಕೊಂಡು ನಾನೇ ಹೀರೋ ಎಂದು ತೋರಿಸಿದ್ದಕ್ಕಿಂತ, ತಮ್ಮ ಪ್ರೀತಿಯನ್ನು ತ್ಯಾಗ ಮಾಡಿ ಹಿಟ್ ಆದ ಸಿನಿಮಾಗಳು ಸಾಕಷ್ಟಿವೆ. ಅಂತಹ ಸಿನಿಮಾಗಳು ಇಲ್ಲಿವೆ.

PREV
19

ಸಿನಿಮಾಗಳಲ್ಲಿ ಹಿರೊ -ಹೀರೋಯಿನ್ ಕೊನೆಯಲ್ಲಿ ಜೊತೆಯಾಗಿದ್ರೇನೆ ಸಿನಿಮಾ ಗೆಲ್ಲೋದು ಎನ್ನುವ ಕಾಲ ಈಗ ಇಲ್ಲ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಗೆದ್ದ ಸಿನಿಮಾಗಳನ್ನು ನೋಡಿದ್ರೆ, ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ ನಾಯಕರ ಸಿನಿಮಾಗಳೇ ದೊಡ್ಡ ಮಟ್ಟದಲ್ಲಿ ಹಿಟ್ (super hit films) ಆಗಿವೆ. ಅಂತಹ ಸಿನಿಮಾಗಳು ಇಲ್ಲಿವೆ. ನಿಮ್ಮದು ಈಗಾಗಲೇ ಬ್ರೇಕಪ್ ಆಗಿದ್ರೆ ಈ ಸಿನಿಮಾ ನೋಡಬೇಡಿ. ಮತ್ತೆ ಪಶ್ಚಾತ್ತಾಪ ಪಡುತ್ತೀರಿ.

29

ಬಂಧನ

ಡಾ, ವಿಷ್ಣುವರ್ಧನ್ (Dr Vishnuvardhan), ಸುಹಾಸಿನಿ ಮತ್ತು ಜೈ ಜಗದೀಶ್ ಅಭಿನಯದ ಈ ಸಿನಿಮಾದಲ್ಲಿ, ವಿಷ್ಣುವರ್ಧನ್ ನಂದಿಯನ್ನು ಎಷ್ಟು ಲವ್ ಮಾಡ್ತಾರೆ ಅನ್ನೋದು ಗೊತ್ತೇ ಇದೆ. ಆದರೆ ಆಕೆಗೆ ಈಗಾಗಲೇ ಲವ್ ಇದೆ ಎಂದು ಗೊತ್ತಾದ ಮೇಲೆ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿ, ಕೊನೆಯವರೆಗೂ ಒಬ್ಬಂಟಿಯಾಗಿಯೇ ಉಳಿದರು.

39

ಅಮೆರಿಕಾ ಅಮೆರಿಕಾ

ರಮೇಶ್ ಅರವಿಂದ್ (Ramesh Aravind), ಹೇಮಾ ಪ್ರಭಾತ್ ಮತ್ತು ಅಕ್ಷಯ್ ಆನಂದ್ ನಟಿಸಿದ ಸಿನಿಮಾ ಇದು. ಮೂವರು ಬೆಸ್ಟ್ ಫ್ರೆಂಡ್ಸ್, ಆದರೆ ರಮೇಶ್ ಅವರು ಹೇಮಾ ಅವರನ್ನು ಪ್ರೀತಿಸುತ್ತಿದ್ದರು, ಆದರೆ ಹೇಳಿಕೊಂಡಿರಲಿಲ್ಲ. ಕೊನೆಗೆ ಮನೆಯವರೆಲ್ಲಾ ಭೂಮಿಕಾ ಮತ್ತು ಶಶಾಂಕ್ ಮದುವೆ ಮಾಡಿಸಿದಾಗ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿ ಗೆಳೆಯರನ್ನು ಒಂದು ಮಾಡಿದ್ದರು ಸೂರ್ಯ.

49

ಜಸ್ಟ್ ಮಾತ್ ಮಾತಲ್ಲಿ

ಅದೆಷ್ಟೋ ಯುವ ಹೃದಯಗಳನ್ನು ಗೆದ್ದಿದ್ದ, ಕದ್ದಿದ್ದ, ಒಡೆದಿದ್ದ ಸಿನಿಮಾ ಜಸ್ಟ್ ಮಾತ್ ಮಾತಲ್ಲಿ. ಹುಡುಗಿಯೇ ಪ್ರೀತಿ ಹೇಳಿದಾಗ, ಅದನ್ನು ಒಪ್ಪಿಕೊಳ್ಳದ ನಾಯಕ, ನಂತರ ಪ್ರೀತಿಯ ಅರಿವಾಗಿ, ಆಕೆಯನ್ನು ಸೇರಲು ಮತ್ತೆ ಬರುತ್ತಾನೆ, ಬರುವಾಗ ದಾರಿಯಲ್ಲಿ ಸಿಗುವ ವ್ಯಕ್ತಿ ಜೊತೆ ಸ್ನೇಹವಾಗಿ, ಅವರ ಕಥೆ ಕೇಳುತ್ತಾ, ಕೊನೆಗೆ ಅವರ ಮದುವೆಗೆ ತೆರಳುತ್ತಾನೆ. ಆವಾಗ ಗೊತ್ತಾಗೋದು ತಾನು ಪ್ರೀತಿಸಿದ ಹುಡುಗಿಯದ್ದೇ ಈ ಮದುವೆ ಎಂದು. ಅಲ್ಲೂ ಪ್ರೀತಿ ತ್ಯಾಗ ಮಾಡಿ ಹೀರೋ ಸೂಪರ್ ಹೀರೋ ಆದ.

59

ಅರಮನೆ

ತಾನು ಇಷ್ಟ ಪಟ್ಟ ಹುಡುಗಿಯ ಮನೆಮಂದಿಯನ್ನು ಒಂದು ಮಾಡಲು ಎಲ್ಲಾ ರೀತಿಯ ಸಹಾಯ ಮಾಡುವ ಹುಡುಗ, ಕೊನೆಗೆ ಹುಡುಗಿ ಬೇರೆಯವರನ್ನು ಲವ್ ಮಾಡಿದ್ದು, ಗೊತ್ತಾದ ಮೇಲೆ ಅವರಿಬ್ಬರನ್ನು ಮನೆಯವರು ಒಪ್ಪಿಕೊಳ್ಳುವಂತೆ ಸಹ ಮಾಡುವ ಮೂಲಕ ತಾನು ತ್ಯಾಗ ರಾಜ ಎನಿಸಿಕೊಂಡರು.

69

ಸಪ್ತ ಸಾಗರದಾಚೆ ಎಲ್ಲೋ

ಪ್ರೀತಿಸಿದ ಹುಡುಗಿಯನ್ನೇ ತ್ಯಾಗ ಮಾಡಿ, ಕೊನೆಗೆ ಆಕೆಗಾಗಿ, ಆಕೆ ಇಷ್ಟಪಟ್ಟ ಎಲ್ಲವನ್ನೂ ಮಾಡುತ್ತಾ ಬರುವ ಹುಡುಗನಾಗಿ ರಕ್ಷಿತ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾ ನೋಡಿದರೆ ಪ್ರೀತಿ ಅಂದ್ರೆ ಹೇಗಿರಬೇಕು, ಹುಡುಗಿ ದೂರವಾದ ತಕ್ಷಣ ಆಕೆಯನ್ನು ಧೂಷಿಸುವ ಹುಡುಗರಿಗಿಂದ ಆಕೆಗಾಗಿ ಆಕೆಗೆ ಗೊತ್ತಿಲ್ಲದಂತೆ ಎಲ್ಲವನ್ನು ಮಾಡುವ ನಾಯಕನಾಗೋದು ಮಹಾನ್ ಅನಿಸುತ್ತೆ.

79

99

ಈ ಸಿನಿಮಾ ಇನ್ನೊಂದು ತರಹದ ತ್ಯಾಗದ ಕಥೆ. ಗಣೇಶ್ ಮತ್ತು ಭಾವನ ಅಭಿನಯದ ಈ ಸಿನಿಮಾದಲ್ಲಿ, ನಾಯಕ ತಾನು ಶಾಲೆಯಲ್ಲಿ ಪ್ರೀತಿಸಿದ ಹುಡುಗಿಗಾಗಿ, ಕೊನೆಯವರೆಗೂ ಕಾಯುತ್ತಲೇ ಇರುತ್ತಾನೆ. ಆಕೆಯನ್ನು ಆಕೆಗೂ ಗೊತ್ತಾಗದಂತೆ ಪ್ರತಿ ಸಂದರ್ಭದಲ್ಲೂ ಭೇಟಿಯಾಗುತ್ತಲೇ ಇರುತ್ತಾನೆ. ಆದರೆ ಸಮಯ ಸಂದರ್ಭ ಮಾತ್ರ ಇಬ್ಬರನ್ನೂ ಭೇಟಿ ಮಾಡಲೇ ಬಿಡೋದಿಲ್ಲ.

89

ಹುಚ್ಚ

ಕಿಚ್ಚ ಸುದೀಪ್ (Kiccha Sudeep) ಅಭಿನಯದ ಸೂಪರ್ ಹಿಟ್ ಸಿನಿಮಾ ಇದು. ಪ್ರೀತಿಸಿದ ಹುಡುಗಿಗಾಗಿ ಹುಚ್ಚನಾಗಿ ಕೊನೆಗೆ ಆಕೆಯನ್ನು ಕಳೆದುಕೊಂಡು, ತಾನೇ ಹುಚ್ಚಾಸ್ಪತ್ರೆಗೆ ಸೇರುವಂತಹ ಆ ದೃಶ್ಯ ಇವತ್ತಿಗೂ ಕಣ್ಣಲ್ಲಿ ನೀರು ತರಿಸುತ್ತದೆ.

99

ಮುಂಗಾರುಮಳೆ

ತಾನು ಯಾರ ಮದುವೆಗೆಂದು ಅಮ್ಮನ ಗೆಳತಿಯ ಮನೆಗೆ ಹೋಗುತ್ತಿದ್ದಾನೆಯೋ ಅದೇ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಿಲ್ಲದ ಪ್ರೀತಂ, ನಂತರ ನಂದಿನಿಗೂ ಲವ್ ಆಗುವಂತೆ ಮಾಡುತ್ತಾನೆ, ಕೊನೆಗೆ ಮನೆಯವರ ಮಾತಿಗೆ ಕಟ್ಟುಬಿದ್ದು, ಹುಡುಗಿಯ ದೃಷ್ಟಿಯಲ್ಲಿ ಕೆಟ್ಟವನಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುತ್ತಾನೆ. ಗಣೇಶ್ (Golden star ganesh) ಮತ್ತು ಪೂಜಾ ಗಾಂಧಿ ಅಭಿನಯದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

Read more Photos on
click me!

Recommended Stories