ಯಾರಿಗೂ ಸಿಗುತ್ತಿಲ್ಲ, ಎಲ್ಲೂ ಕಾಣಿಸುತ್ತಿಲ್ಲ; ರಚಿತಾ ರಾಮ್‌ ಮನೆಗೆ ನುಗ್ಗುತ್ತೇವೆ ಅಂತಿದ್ದಾರೆ ಫ್ಯಾನ್ಸ್!

First Published | Aug 8, 2024, 3:37 PM IST

ಮೌನವಾಗಿರುವ ಡಿಂಪಲ್ ಕ್ವೀನ್...ಎಲ್ಲಿದ್ದೀರಾ ಎಂದು ಪದೇ ಪದೇ ಪ್ರಶ್ನಿಸುತ್ತಿರುವ ಫ್ಯಾನ್ಸ್‌....

ಸ್ಯಾಂಡಲ್‌ವುಡ್ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ಸೋಷಿಯಲ್ ಮೀಡಿಯಾ, ಮಾಧ್ಯಮ ಮತ್ತು ಫ್ಯಾನ್ಸ್‌ಗಳಿಂದ ದೂರ ಉಳಿದುಬಿಟ್ಟಿದ್ದಾರೆ.

ಸಾಮಾನ್ಯವಾಗಿ ವೀಕೆಂಡ್ ಫ್ರೀ ಮಾಡಿಕೊಂಡು ಅಭಿಮಾನಿಗಳನ್ನು ತಮ್ಮ ರಾಜ ರಾಜೇಶ್ವರಿ ನಗರದ ನಿವಾಸದಲ್ಲಿ ರಚಿತಾ ರಾಮ್ ಭೇಟಿ ಮಾಡುತ್ತಿದ್ದರು.

Tap to resize

ಈಗ ಅಭಿಮಾನಿಗಳನ್ನು ಭೇಟಿ ಮಾಡುತ್ತಿಲ್ಲ, ತಮ್ಮ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡುತ್ತಿಲ್ಲ, ಒಂದು ಫೋಟೋ ಅಪ್ಲೋಡ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ. 

ಅಪ್ಪಟ ಕನ್ನಡತಿಯಾಗಿ ಕನ್ನಡ ಸಿನಿಮಾಗಳಲ್ಲಿ ಉಳಿದುಕೊಂಡಿರುವ ಚೆಲುವೆ ಅಂದ್ರೆ ರಚಿತಾ ರಾಮ್. ಸ್ಟಾರ್ ನಟರ ರೇಂಜಿಗೆ ಫ್ಯಾನ್ಸ್‌ ಹೊಂದಿದ್ದಾರೆ.

ನಿಮ್ಮ ಮನೆಯ ಮುಂದೆ ಪ್ರತಿಭಟಣೆ ಮಾಡುತ್ತೀವಿ, ನಿಮ್ಮ ಮನೆಗೆ ನುಗ್ಗುತ್ತೀವಿ ...ಇದೆಲ್ಲಾ ಆಗಬಾರದು ಅಂದ್ರೆ ನೀವು ಭೇಟಿ ಮಾಡಲೇ ಬೇಕು ಅಂತಿದ್ದಾರೆ ಫ್ಯಾನ್ಸ್.

ಸದ್ಯ ರಚಿತಾ ರಾಮ್ ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ ಮತ್ತು ಸಂಜು ವೆಡ್ಸ್ ಗೀತಾ 2 ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. 

Latest Videos

click me!