Lakshmi Nivasa ಧಾರಾವಾಹಿಯಲ್ಲಿ ಸೌಪರ್ಣಿಕಾ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಯಶಸ್ವಿನಿ ಕೆ ಸ್ವಾಮಿ ಇದೀಗ ಪಾತ್ರಕ್ಕೆ ವಿದಾಯ ಹೇಳುತ್ತಿದ್ದಾರೆ. ಲಕ್ಷ್ಮೀ ನಿವಾಸದ ಮಧುರ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಮೂಲಕ ಯಶಸ್ವಿನಿ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಈ ಧಾರಾವಾಹಿಯಲ್ಲಿ ಇದೀಗ ಮೂರು ಪಾತ್ರಗಳು ಕೊನೆಯಾಗಿವೆ. ಅದರಲ್ಲಿ ಒಂದು ಪಾತ್ರ ಸೌಪರ್ಣಿಕಾ. ಈ ಪಾತ್ರವನ್ನು ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಶಸ್ವಿನಿ ಕೆ ಸ್ವಾಮಿ ನಿರ್ವಹಿಸುತ್ತಿದ್ದರು.
26
ಸೌಪರ್ಣಿಕಳಾಗಿ ಯಶಸ್ವಿನಿ
ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಯಶಸ್ವಿನಿ ‘ಲಕ್ಷ್ಮೀ ನಿವಾಸ’ದಲ್ಲಿ ಸೌಪರ್ಣಿಕಾ ಪಾತ್ರವನ್ನು ಇವರು ನಿರ್ವಹಿಸಿದ್ದರು. ಇದೀಗ ಧಾರಾವಾಹಿಯಲ್ಲಿ ಈ ಪಾತ್ರವನ್ನು ಅಂತ್ಯಗೊಳಿಸಲಾಗಿದೆ. ಹಾಗಾಗಿ ಮಧುರ ನೆನಪುಗಳೊಂದಿಗೆ ನಟಿ ವಿದಾಯ ಹೇಳಿದ್ದಾರೆ.
36
ಸೌಪರ್ಣಿಕಾ ಯಾರು?
ಲಕ್ಷ್ಮೀ ನಿವಾಸದಲ್ಲಿ ಭಾವನಾಳನ್ನು ಮದುವೆಯಾಗಲು ಬಂದ ಶ್ರೀಕಾಂತ್ ಅವರ ಮುದ್ದಿನ ತಂಗಿ ಹಾಗೂ ಖುಷಿ ಅತ್ತೆ ಸೌಪರ್ಣಿಕಳಾಗಿ ಯಶಸ್ವಿನಿ ನಟಿಸಿದ್ದರು. ಇದು ನೆಗೆಟಿವ್ ಶೇಡ್ ಹೊಂದಿದ ಕಥೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಇವರನ್ನು ಪಾಸಿಟಿವ್ ಶೇಡ್ ನಲ್ಲಿ ತೋರಿಸಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಶಸ್ವಿನಿ, ಸೌಪರ್ಣಿಕ ಪಾತ್ರಕ್ಕೆ ಇಂದಿಗೆ ವಿದಾಯ ಹೇಳುವ ಸಮಯ ಬಂದಿದೆ. ಮತ್ತೊಮ್ಮೆ ಒಳ್ಳೆಯ ಪಾತ್ರದ ಮೂಲಕ ನಿಮ್ಮ ಮುಂದೆ ಆದಷ್ಟು ಬೇಗ ಬರುತ್ತೇನೆ. ಈ ಪಾತ್ರಕ್ಕೆ ಇಷ್ಟೊಂದು ಪ್ರೀತಿ ಕೊಟ್ಟಿರೊ ನಿಮ್ಮೆಲ್ಲರಿಗು ಧನ್ಯವಾದಗಳು. ಆದಷ್ಟು ಬೇಗ ಸಿಗುವ ಎಂದು ಹೇಳಿದ್ದಾರೆ.
56
ಪಾತ್ರದ ಅಂತ್ಯ ಆಗಿದ್ದು ಹೇಗೆ?
ಇಲ್ಲಿವರೆಗೆ ಸತ್ತಿದ್ದಾರೆ ಎನ್ನಲಾಗಿದ್ದ ಶ್ರೀಕಾಂತ್ ಮತ್ತೆ ಬಂದು, ಕೋರ್ಟ್ ನಲ್ಲಿ ಎಲ್ಲಾ ನಿಜವನ್ನು ತಿಳಿಸಿದ್ದಾರೆ. ಸಿದ್ಧೇ ಗೌಡ್ರು ತಪ್ಪು ಮಾಡಿಲ್ಲ, ತನ್ನ ಗಂಡನೇ ಅಣ್ಣ ಮತ್ತು ಅಮ್ಮನ ಕೊಲೆ ಮಾಡಿಸಿದ್ದು, ಅನ್ನೋದು ಸೌಪರ್ಣಿಕಾ ಮುಂದೆ ಬಯಲಾಗಿದೆ. ಕೊನೆಗೆ ಶ್ರೀಕಾಂತ್ ತಂಗಿ ಸೌಪರ್ಣಿಕಾ ಮತ್ತು ಮಗಳು ಖುಷಿಯೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳುವುದಾಗಿ ಹೇಳುತ್ತಾರೆ. ಆ ಮೂಲಕ ಪಾತ್ರವನ್ನು ಮುಗಿಸಲಾಗಿದೆ.
66
ಯಾವೆಲ್ಲಾ ಧಾರಾವಾಹಿಗಳಲ್ಲಿ ನಟಿಸಿದ್ದರು ಯಶಸ್ವಿನಿ?
ಯಶಸ್ವಿನಿ ಕನ್ನಡ, ತಮಿಳು, ತೆಲುಗು ಸೇರಿ ಹಲವಾರು ಭಾಷೆಗಳ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ನೆಗೆಟಿವ್ ಶೇಡ್ ಗಳಲ್ಲೇ ನಟಿಸಿದ್ದಾರೆ. ಕನ್ನಡದಲ್ಲಿ ಮುಖ್ಯವಾಗಿ ಮಂಗಳ ಗೌರಿಯ ಮದುವೆ ಹಾಗೂ ಲಕ್ಷ್ಮೀ ನಿವಾಸದಲ್ಲಿ, ತೆಲುಗಿನಲ್ಲಿ ಭಾಗ್ಯರೇಖಾ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ಯಶಸ್ವಿನಿ ಮಿಂಚಿದ್ದಾರೆ. ಬಿಗ್ ಬಾಸ್ ಮಿನಿ ಸೀಸನ್, ಭರ್ಜರಿ ಬ್ಯಾಚುಲರ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳಲ್ಲಿ ಯಶಸ್ವಿನಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.