ಡಾರ್ಕ್‌ ನೆಟ್‌ ಬಗ್ಗೆ ಸರ್ಚ್‌ ಮಾಡಿದ್ರೂ ಅಕೌಂಟ್‌ ಹ್ಯಾಕ್‌ ಆಗಬಹುದು: ನಟಿ ಸುಕೃತಾ ವಾಗ್ಲೆ

First Published | Aug 2, 2024, 6:54 PM IST

‘ಡಾರ್ಕ್‌ ನೆಟ್‌ ಎಂಬುದು ನಮ್ಮ ಊಹೆಗೂ ನಿಲುಕದ ಭಯಾನಕ ಜಗತ್ತು. ನಾವು ಇದರ ಬಗ್ಗೆ ಸರ್ಚ್‌ ಕೊಟ್ಟರೂ ನಮ್ಮ ಅಕೌಂಟ್‌ ಹ್ಯಾಕ್‌ ಆಗುವ ಸಾಧ್ಯತೆ ಇದೆ. ಆ ಮಟ್ಟಿಗೆ ಇದು ಅಪಾಯಕಾರಿ.’ ಹೀಗಂದಿದ್ದು ನಟಿ ಸುಕೃತಾ ವಾಗ್ಲೆ. 
 

ನಟಿ ಸುಕೃತಾ ವಾಗ್ಲೆ ನಟನೆಯ ಡಾರ್ಕ್‌ ನೆಟ್‌ ಕಥಾಹಂದರದ ಸೈಕಲಾಜಿಕಲ್‌ ಥ್ರಿಲ್ಲರ್‌ ‘ಕಪಟಿ’ ಆಗಸ್ಟ್‌ 23ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತ ಸುದ್ದಿಗೋಷ್ಠಿಯಲ್ಲಿ ಸುಕೃತಾ, ‘ನಾನು ಸಿನಿಮಾ ಜಗತ್ತಿಗೆ ಗುಡ್‌ಬೈ ಹೇಳಿ ಉಡುಪಿಯಲ್ಲಿ ಎಲ್‌ಎಲ್‌ಬಿ ಮಾಡ್ತಾ ಆರಾಮವಾಗಿದ್ದೆ. 

ಆ ಹೊತ್ತಿಗೆ ಈ ಸಿನಿಮಾ ಆಫರ್‌ ಬಂತು. ನಿರ್ದೇಶಕರು ಇದು ಮಹಿಳಾ ಪ್ರಧಾನ ಚಿತ್ರ ಅಂದಾಗ, ರಿಸ್ಕ್‌ ಅಲ್ವಾ ಅಂತ ಕೇಳಿದ್ದೆ. ಆದರೆ ನಿರ್ದೇಶಕರಿಗೆ ಗೆಲ್ಲುವ ವಿಶ್ವಾಸ ಇದೆ’ ಎಂದರು.

Tap to resize

ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹುದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಈ ಪಾತ್ರ ಎಲ್ಲರಿಗೂ ಇಷ್ಟ ಆಗಲಿದೆಯೆಂದು ಸುಕೃತಾ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಪಾತ್ರದಲ್ಲಿ ನಟಿಸಿರುವ ಸಾತ್ವಿಕ್‌, ‘ಉಡುಪಿಯಲ್ಲಿ ರಂಗಭೂಮಿಯಲ್ಲಿದ್ದುಕೊಂಡು ಪೇಂಟಿಂಗ್‌, ಇಂಟೀರಿಯರ್‌ ಡಿಸೈನಿಂಗ್‌ ಮಾಡ್ತಿದ್ದ ನನಗೆ ಬೆಂಗಳೂರು, ಚಿತ್ರರಂಗ ಎರಡೂ ಹೊಸತು’ ಎಂದರು.

ನಿರ್ಮಾಪಕ ದಯಾಳ್‌ ಪದ್ಮನಾಭ್‌, ‘ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ 12ನೇ ಚಿತ್ರ, ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ನನ್ನ ಐಡೆಂಟಿಟಿ ಕನ್ನಡ ಚಿತ್ರರಂಗ’ ಎಂದು ಹೆಮ್ಮೆಯಿಂದ ಘೋಷಿಸಿದರು. 

ನಿರ್ದೇಶಕರಾದ ಚೇತನ್‌ ಹಾಗೂ ರವಿ, ಡಾರ್ಕ್‌ ನೆಟ್‌ನ ಕರಾಳ ಜಗತ್ತನ್ನು ವಿವರಿಸಿದರು. ಡಾರ್ಲಿಂಗ್‌ ಕೃಷ್ಣ ಟೀಸರ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ದೇವ್‌ ದೇವಯ್ಯ ಚಿತ್ರದ ಮುಖ್ಯಪಾತ್ರದಲ್ಲಿದ್ದಾರೆ.
 

ಕಪಟಿ ಚಿತ್ರಕ್ಕೆ ಜೋಹನ್ ಸಂಗೀತ ನೀಡಿದ್ದು, ಸತೀಶ್ ರಾಜೇಂದ್ರನ್ ಕ್ಯಾಮೆರಾ ಕೈಚಳಕವಿದೆ. ಸುನೀಲ್ ಅವರ ಕಲಾ ನಿರ್ದೇಶನವಿದ್ದು, ರವಿ ಸಾಹಸ ನಿರ್ದೇಶನ ಮಾಡಿದ್ದಾರೆ. ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಕಪಟಿ ಸಿನಿಂಆ ಆಗಸ್ಟ್ 23ರಂದು ರಿಲೀಸ್ ಆಗಲಿದೆ.

Latest Videos

click me!