ಕನ್ನಡದ ಚಿತ್ರಕ್ಕೆ ಬಾಲಿವುಡ್‌ನ ಗಣ್ಯ ವ್ಯಕ್ತಿ ಕರಣ್ ಜೋಹರ್ ನಿರೂಪಣೆ ಮಾಡುತ್ತಿರುವುದು ಇದೇ ಮೊದಲು. ಈ ಟ್ರೇಲರ್ ರಿಲೀಸ್ ಕಾರ್ಯಕ್ರಮ ವಿಶಿಷ್ಟವಾಗಿ, ವಿಭಿನ್ನವಾಗಿ ನಡೆಯಲಿದೆ.
57
ಸ್ಟಾರ್ ಹೋಟೆಲ್‌ನಲ್ಲಿ ಕಾರ್ಯಕ್ರಮ
ತಾರಾ ಹೋಟೆಲ್‌ನಲ್ಲಿ ಈ ಸಮಾರಂಭ ನಡೆಯಲಿದ್ದು, ದೇಶದ ನಾನಾ ಭಾಗದ ಪತ್ರಕರ್ತರು ಆಗಮಿಸಲಿದ್ದಾರೆ. ಯಾವುದೇ ಕ್ಯಾಮೆರಾಗಳಿಗೆ ಪ್ರವೇಶ ಇರುವುದಿಲ್ಲ. ಚಿತ್ರತಂಡವೇ ವಿಡಿಯೋ ಶೂಟ್ ಮಾಡಿ ಮಾಧ್ಯಮಗಳಿಗೆ ನೀಡುವ ಸಾಧ್ಯತೆ ಇದೆ.
67
ಏಪ್ರಿಲ್ ಸಿನಿಮಾ ರಿಲೀಸ್
ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಪ್ರಿ-ರಿಲೀಸ್ ಈವೆಂಟ್ ನಡೆಸದಿರಲು ಚಿತ್ರತಂಡ ತೀರ್ಮಾನಿಸಿದೆ. ಏ.14ರಂದು ವಿಶ್ವಾದ್ಯಂತ ಸುಮಾರು 7000 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
77
ಕೆಜಿಎಫ್ 2 ಹವಾ ಶುರು
ಕೆಜಿಎಫ್ 2 ಏಪ್ರಿಲ್ 14ರಂದು ದೇಶ, ವಿದೇಶದಾದ್ಯಂತ ಬಿಡುಗಡೆಯಾಗಲಿದೆ. ಇಡೀ ವಿಶ್ವದ ದಾಖಲೆಯ ಏಳು ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಅಬ್ಬರಿಸಲಿದೆ. ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆದರೆ, ವಿವಿಧ ರಾಜ್ಯಗಳ ಸಾವಿರಾರು ಥಿಯೇಟರ್‌ಗಳು ರಾಕಿ ಮಾಡೋ ಮ್ಯಾಜಿಕ್‌ಗೆ ಸಾಕ್ಷಿಯಾಗಲಿದೆ.