ತೂಫಾನ್ ಹಾಡು ವೈರಲ್
ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್, ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಮಲಯಾಳಂ ನಟ ಪ್ರಥ್ವಿರಾಜ್ ಭಾಗವಹಿಸಲಿದ್ದಾರೆ.
ಶೀಘ್ರದಲ್ಲಿ ಸಿನಿಮಾ ತೆರೆ ಕಾಣಲಿದೆ.
ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಪ್ರಿ-ರಿಲೀಸ್ ಈವೆಂಟ್ ನಡೆಸದಿರಲು ಚಿತ್ರತಂಡ ತೀರ್ಮಾನಿಸಿದೆ. ಏ.14ರಂದು ವಿಶ್ವಾದ್ಯಂತ ಸುಮಾರು 7000 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಯಶ್ ಮಾಸ್ ಲುಕ್ ವೈರಲ್
ಇಡೀ ವಿಶ್ವದ ದಾಖಲೆಯ ಏಳು ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಅಬ್ಬರಿಸಲಿದೆ. ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆದರೆ, ವಿವಿಧ ರಾಜ್ಯಗಳ ಸಾವಿರಾರು ಥಿಯೇಟರ್‌ಗಳು ರಾಕಿ ಮಾಡೋ ಮ್ಯಾಜಿಕ್‌ಗೆ ಸಾಕ್ಷಿಯಾಗಲಿದೆ.
ಪಂಚ ಭಾಷೆಯಲ್ಲಿ ಸಿನಿಮಾ ರಿಲೀಸ್
ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಅನ್ನೋದರ ಬಗ್ಗೆ ಬಿರುಸಿನ ಲೆಕ್ಕಾಚಾರ ಶುರುವಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ ಇಂಡಿಯಾ ಮಾತ್ರವಲ್ಲದೇ ಜಪಾನ್, ಅಮೆರಿಕಾ ಸೇರಿದಂತೆ 70 ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರ ಕಡಿಮೆ ಅಂದರೂ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡೋದು ಗ್ಯಾರಂಟಿ.
ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ ನಿರೀಕ್ಷೆಎ ಹೆಚ್ಚಿಸಿದೆ.
ರಿಷ್ಠ ಸಾವಿರ ಕೋಟಿ ರೂ.ಗಳವರೆಗೂ ದೋಚಬಹುದು. ಆದರೆ ಸ್ಟಾರ್ ನಟ ವಿಜಯ್ (Vijay) ನಟನೆಯ ಬೀಸ್ಟ್ (Beast) ಚಿತ್ರವೂ ಕಾಂಪಿಟೀಶನ್‌ನಲ್ಲಿ ಇರೋ ಕಾರಣ ಗಳಿಕೆಗೆ ಸ್ವಲ್ಪ ಮಟ್ಟಿನ ಹೊಡೆತ ಬೀಳೋದನ್ನು ನಿರಾಕರಿಸಲಾಗದು. ಆದರೆ ಕೆಜಿಎಫ್‌ಗೆ ಸದ್ಯಕ್ಕಿರೋ ರೆಸ್ಪಾನ್ಸ್ ನೋಡಿದರೆ ಇದು ಒಂದೇ ದಿನದಲ್ಲಿ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡೋದ್ರಲ್ಲಿ ಅನುಮಾನ ಬೇಡ ಅಂತಾರೆ ಈ ಲೆಕ್ಕಾಚಾರ ಬಲ್ಲವರು.