Latest Videos

ಸರಿಯಾಗಿ ನಿಂತ್ಕೊಳ್ಳಮ್ಮ; ಶ್ರೀಲೀಲಾ ಪೋಸ್‌ ನೋಡಿ ನೆಟ್ಟಿಗರು ಗರಂ

First Published May 22, 2024, 12:39 PM IST

ಫಾರಿನ್ ಮಾಡಲ್ ರೀತಿಯಲ್ಲಿ ಪೋಸ್ ಕೊಟ್ಟ ಶ್ರೀಲೀಲಾ. ನಮ್ಮ ಕನ್ನಡತಿ ಅನಿಸುತ್ತಿಲ್ಲ ಎಂದ ನೆಟ್ಟಿಗರು....

 2019ರಲ್ಲಿ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾಗೆ ಭರಾಟೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. 

ಇದಾದ ಮೇಲೆ ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಕನ್ನಡದಲ್ಲಿ ಬೈ ಟು ಲವ್ ಮತ್ತು ಜೇಮ್ಸ್‌ ಚಿತ್ರದಲ್ಲಿ ನಟಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಶ್ರೀಲೀಲಾ ಸುಮಾರು 5.3 ಮಿಲಿಯನ್ ಫಾಲೋವರ್ಸ್‌ನ ಹೊಂದಿದ್ದಾರೆ. ವಿಭಿನ್ನ ಫೋಟೋಶೂಟ್‌ಗಳನ್ನು ಮಾಡಿಸುತ್ತಿದ್ದಾರೆ.

ಇತ್ತೀಚಿಗೆ ಶ್ರೀಲೀಲಾ ಅಪ್ಲೋಡ್ ಮಾಡುತ್ತಿರುವ ಫೋಟೋಗಳನ್ನು ಫಾರಿನ್ ಮಾಡಲ್ ರೀತಿ ಪೋಸ್ ಕೊಡುತ್ತಿದ್ದಾರೆ. ಹೀಗಾಗಿ ನೆಟ್ಟಿಗರು ಗರಂ ಆಗಿದ್ದಾರೆ.

ಸರಿಯಾಗಿ ನಿಂತ್ಕೊಳ್ಳಮ್ಮ ಇಲ್ಲ ಸರಿಯಾಗಿ ಕುತ್ಕೊಳ್ಳಮ್ಮ....ವಿಚಿತ್ರ ವಿಚಿತ್ರ ಪೋಸ್‌ಗಳನ್ನು ಕೊಟ್ಟು ಕನ್ನಡಿಗರ ಪ್ರೀತಿ ಕಳೆದುಕೊಳ್ಳಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಭಗವಂತ್ ಕಸ್ತೂರಿ, ಆಧಿಕೇಶವ್, ಎಕ್ಸ್‌ಟ್ರಾ ಆಡಿನರಿ ಮ್ಯಾನ್‌ ಸೇರಿದಂತೆ ಹಲವು ತಮಿಳು ಸಿನಿಮಾಗಳಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ಆದರೆ ಸತತ ಸೋಲುಗಳನ್ನು ನೋಡಿದ್ದಾರೆ.

click me!