Directors Launching Their Children: ತಮ್ಮ ಮಕ್ಕಳ ಮೊದಲ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಿದ ನಿರ್ದೇಶಕರು

Published : May 22, 2025, 04:51 PM ISTUpdated : May 22, 2025, 04:54 PM IST

ಕನ್ನಡದ ಹೆಚ್ಚಿನ ನಿರ್ದೇಶಕರು ತಮ್ಮ ಮಕ್ಕಳನ್ನು ಸಿನಿಮಾಗೆ ತರುವ ಕೆಲಸವನ್ನು ತಾವೇ ಮಾಡಿದ್ರು, ಆದರೆ ಅದರಲ್ಲಿ ಗೆದ್ದವರು ಮಾತ್ರ ತುಂಬಾನೆ ಕಡಿಮೆ.   

PREV
17
Directors Launching Their Children: ತಮ್ಮ ಮಕ್ಕಳ ಮೊದಲ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಿದ ನಿರ್ದೇಶಕರು

ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಿರ್ದೇಶಕರು (popular director), ತಮ್ಮ ಮಕ್ಕಳನ್ನು ತಾವೇ ನಿರ್ದೇಶನ ಮಾಡಿದ ಸಿನಿಮಾದ ಮೂಲಕ ಚಂದನವನಕ್ಕೆ ಪರಿಚಯಿಸಿದ್ದಾರೆ. ಯಾವೆಲ್ಲಾ ನಿರ್ದೇಶಕರು ತಮ್ಮ ಮಕ್ಕಳ ಮೊದಲ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಿದ್ದಾರೆ ನೋಡೋಣ. 
 

27

ವಿಜಯಲಕ್ಷ್ಮೀ ಸಿಂಗ್
ಕನ್ನಡದ ಜನಪ್ರಿಯ ಮಹಿಳಾ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ (Vijayalakshmi Singh) ತಮ್ಮ ಮೂವರು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿ ಅವರನ್ನು ತಮ್ಮದೇ ನಿರ್ದೇಶನದ ಯಾನ ಸಿನಿಮಾ ಮೂಲಕ ಲಾಂಚ್ ಮಾಡಿದ್ದರು. 

37

ಅರ್ಜುನ್ ಸರ್ಜಾ : 
ನಟ, ನಿರ್ದೇಶಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja)ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತಮ್ಮದೇ ನಿರ್ದೇಶನದ ಪ್ರೇಮ ಬರಹ ಸಿನಿಮಾ ಮೂಲಕ ಲಾಂಚ್ ಮಾಡಿದ್ದರು. ಈ ಚಿತ್ರದಲ್ಲಿ ಚಂದನ್ ಕುಮಾರ್ ನಾಯಕರಾಗಿದ್ದರು.
 

47

ಇಂದ್ರಜಿತ್ ಲಂಕೇಶ್
ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ತಮ್ಮ ಪುತ್ರ ಸಮರ್ಜಿತ್ ಲಂಕೇಶ್ ಅವರ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 

57

ರಾಜೇಂದ್ರ ಸಿಂಗ್ ಬಾಬು
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ತಮ್ಮ ಪುತ್ರ ಆದಿತ್ಯನನ್ನು ಲಾಂಚ್ ಮಾಡಿದ್ದು, ತಮ್ಮದೇ ನಿರ್ದೇಶನದ ಲವ್ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿದ್ದರು. 

67

ದುನಿಯಾ ವಿಜಯ್
ಇದೀಗ ಖ್ಯಾತ ನಟ ದುನಿಯಾ ವಿಜಯ್ ಅವರು ತಮ್ಮ ಮಗಳು ಮೊನಿಷಾ ವಿಜಯ್ ಕುಮಾರ್ ಅವರನ್ನು ಸಿಟಿ ಲೈಟ್ಸ್ ಸಿನಿಮಾ ಮೂಲಕ ಲಾಂಚ್ ಮಾಡುತ್ತಿದ್ದಾರೆ. 
 

77

ಎಸ್ ನಾರಾಯಣ್
ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಎಸ್ ನಾರಾಯಣ್ (S Narayan)ತಮ್ಮ ಮಗ ಪಂಕಜ್ ಎಸ್ ನಾರಾಯಣ್ ಗಾಗಿ ಚೈತ್ರದ ಚಂದ್ರಮ ಸಿನಿಮಾ ನಿರ್ದೇಶನ ಮಾಡಿದ್ದರು. 

Read more Photos on
click me!

Recommended Stories