ರುಕ್ಮಿಣಿ ವಸಂತ್ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧ... ರಶ್ಮಿಕಾ ಥರ ಆಗ್ಬೇಡಿ ಎಂದ‌‌ ಜನ

Published : May 21, 2025, 06:45 PM IST

ಕನ್ನಡ ನಟಿ ರುಕ್ಮಿಣಿ ವಸಂತ್ ಅವರ ತಮಿಳು ಸಿನಿಮಾ ಏಸ್ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಆ ಸಂಭ್ರಮದಲ್ಲಿದ್ದಾರೆ ನಟಿ.   

PREV
18
ರುಕ್ಮಿಣಿ ವಸಂತ್ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧ... ರಶ್ಮಿಕಾ ಥರ ಆಗ್ಬೇಡಿ ಎಂದ‌‌ ಜನ

ಚಂದನವನದ ಚೆಲುವೆ ಹಾಗೂ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್  (Rukmini Vasanth) . ಸದ್ಯಕ್ಕಂತೂ ನಟಿಗೆ ಪರ ಭಾಷೆಗಳ ಸಿನಿಮಾಗಳಲ್ಲಿ ಒಂದಾದ ಮೇಲೊಂದು ಆಫರ್ ಗಳು ಬರುತ್ತಲೇ ಇವೆ. 

28

ಸದ್ಯದಲ್ಲೇ ರುಕ್ಮಿಣಿ ವಸಂತ್ ಅಭಿನಯದ ತಮಿಳು ಸಿನಿಮಾ ಏಸ್ ರಿಲೀಸ್ ಆಗಲಿದ್ದು, ನಟಿ ಸದ್ಯ ಚಿತ್ರದ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ (Vijay Sethupati) ನಾಯಕರಾಗಿ ಅಂಟಿಸುತ್ತಿದ್ದು, ಇವರಿಬ್ಬರ ಕಾಂಬಿನೇಶನ್ ಈಗಾಗಲೇ ಸದ್ದು ಮಾಡುತ್ತಿದೆ. 
 

38

ರುಕ್ಮಿಣಿ ವಸಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಇದೇ ಮೇ 23 ರಂದು ತಮ್ಮ ಮೊದಲ ತಮಿಳು ಸಿನಿಮಾ ಏಸ್ (Ace) ಬಿಳುಗಡೆಯಾಗುತ್ತಿದ್ದು, ಸಿನಿಮಾ ಪ್ರೆಸ್ ಮೀಟ್ ಗಾಗಿ ತಾವು ರೆಡಿಯಾಗಿರೋದಾಗಿ ತಿಳಿಸಿದ್ದಾರೆ. 
 

48

ಹೆಚ್ಚಾಗಿ ಸೀರೆಯಲ್ಲಿಯೇ ದೇವತೆಯಂತೆ ಕಾಣಿಸಿಕೊಳ್ಳುವ ರುಕ್ಮಿಣಿ ವಸಂತ್ ಈ ಬಾರಿಯೂ ಹಸಿರು ಬಣ್ಣದ ಸೀರೆ, ಸ್ಲೀವ್ ಲೆಸ್ ಬ್ಲೌಸ್, ಕಿವಿಯಲ್ಲಿ ಜುಮುಕಿ, ಪುಟ್ಟದಾದ ನೆಕ್ಲೆಸ್, ಮುಡಿಯಲ್ಲಿ ಮಲ್ಲಿಗೆ ಹೂವು ಮುಡಿದು, ತುಂಬಾನೆ ಮುದ್ದಾಗಿ ರೆಡಿಯಾಗಿದ್ದಾರೆ. 
 

58

ರುಕ್ಮಿಣಿ ವಸಂತ್ ಈ ಲುಕ್ ಗೆ ಮನ ಸೋತ ಅಭಿಮಾನಿಗಳು ಭೂಮಿಗಿಳಿದ ಅಪ್ಸರೆ, ಪುಟ್ಟಿ, ಗಾರ್ಜಿಯಸ್, ರುಕ್ಕು, ಸಿಂಪಲ್ ಎಲಿಗೆಂಟ್ ಲುಕ್, ನಿಮ್ಮ ಹೊಸ ಸಿನಿಮಾಕ್ಕೆ ಶುಭಾಶಯಗಳು ಎಂದು ಶುಭಾಶಯ ಕೋರಿದ್ದಾರೆ. 
 

68

ಇನ್ನೂ ಕೆಲವು ಅಭಿಮಾನಿಗಳು, ಮೇಡಂ ನೀವು ರಶ್ಮಿಕಾ ಥರ ಮಾಡ್ಬೇಡಿ ಅಂದಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗಿಗೆ ಎಂಟ್ರಿ ಕೊಟ್ಟ ಮೇಲೆ ಕನ್ನಡವನ್ನೆ ಮರೆತು ಹೋದರು ಎನ್ನುವ ಆರೋಪ ಕನ್ನಡಿಗರದ್ದು, ಹಾಗಾಗಿ ರುಕ್ಮಿಣಿ ವಸಂತ್ ಕೂಡ ಹಾಗೆ ಮಾಡದೇ ಇರಲಿ ಎಂದು ಹೇಳಿರಬಹುದು. 
 

78

ಸಪ್ತಸಾಗರದಚೆ ಸಿನಿಮಾ ಮೂಲಕ ಮೋಡಿ ಮಾಡಿ, ಭೈರತಿ ರಣಗಲ್, ಬಘೀರ ಸಿನಿಮಾದಲ್ಲಿ ವೈದ್ಯೆಯಾಗಿ ಮಿಂಚಿ ಕನ್ನಡಿಗರ ಹೃದಯ ಗೆದ್ದಿರುವ ರುಕ್ಮಿಣಿ ವಸಂತ್ ಕೈಯಲ್ಲಿ ಏಸ್ ಬಿಟ್ಟು ಇನ್ನೂ ಎರಡು ತೆಲುಗು ಸಿನಿಮಾಗಳಿವೆ. 
 

88

ನಾಣಿ ಜೊತೆ ಮದರಸಿ (Madharasi)ಎನ್ನುವ ಸಿನಿಮಾದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ. ಅಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಜ್ಯೂನಿಯರ್ ಎನ್ ಟಿಆರ್ ಗೆ ನಾಯಕಿಯಾಗಿ ಸಹ ರುಕ್ಮಿಣಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಹೆಸರಾಂತ ನಿರ್ದೇಶಕ ಮಣಿರತ್ನಂ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ ಎನ್ನುವ ಮಾಹಿತಿ ಕೂಡ ಇದೆ. 
 

Read more Photos on
click me!

Recommended Stories