Amulya Baby Shower ಇಡೀ ಕನ್ನಡ ಚಿತ್ರರಂಗದ ಸಮ್ಮುಖದಲ್ಲಿ ಅದ್ಧೂರಿ ಸೀಮಂತ!

First Published | Feb 14, 2022, 7:43 PM IST

ನಟಿ ಅಮೂಲ್ಯಗೆ ಇದು ಮೂರನೇ ಬೇಬಿ ಶವರ್. ಇಡೀ ಕನ್ನಡ ಚಿತ್ರರಂಗವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವದಿಸಿದೆ.

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್ ಅಮೂಲ್ಯ ತಾಯಿ ಆಗುತ್ತಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲ್ಲಿದ್ದಾರೆ. 

ನಟಿ ಅಮೂಲ್ಯಗೆ ಪತಿ ಜಗದೀಶ್ ನಿವಾಸದಲ್ಲಿ ಅದ್ಧೂರಿಯಾಗಿ ಸಾಂಪ್ರದಾಯಿಕ ಸೀಮಂತ ಮಾಡಲಾಗಿತ್ತು. ಈ ವೇಳೆ ಕುಟುಂಬದವರು ಭಾಗಿಯಾಗಿದ್ದರು. 

Tap to resize

ಅಮೂಲ್ಯ ಮತ್ತು ಜಗದೀಶ್ ಆಪ್ತ ಗೆಳೆಯರು ಬೆಂಗಳೂರಿನ ಹೋಟೆಲ್‌ನಲ್ಲಿ ಸಿಂಪಲ್ ಆಗಿ ಬೇಬಿ ಶವರ್ ಹಮ್ಮಿಕೊಂಡಿದ್ದರು. ಈ ವೇಳೆ ಬಿಗ್ ಬಾಸ್ ವೈಷ್ಣವಿ ಗೌಡ ಕೂಡ ಭಾಗಿಯಾಗಿದ್ದರು. 

ಮೂರನೇ ಸೀಮಂತ ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆದಿದೆ. ಇಡೀ ಕನ್ನಡ ಚಿತ್ರರಂಗವೇ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿವೆ.

ಸೀಮಂತ ಕಾರ್ಯಕ್ರಮ ಆರಂಭಿಸುವ ಮುನ್ನ ಅಮೂಲ್ಯ ಕುಟುಂಬ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಅಪ್ಪು ಫೋಟೋಗೆ ಪೂಜೆ ಸಲ್ಲಿಸಿ ಅಶ್ವಿನಿ ಮೇಡಂ ಅವರನ್ನು ಮಾತನಾಡಿಸಿರುವುದಾಗಿ ಸ್ವತಃ ಅಮೂಲ್ಯ ಸ್ಟೋರಿ ಹಾಕಿದ್ದರು.

ಬೇಬಿ ಪಿಂಕ್ ಬಣ್ಣದ ಬಾಲ್ ಗೌನ್‌ ಧರಿಸಿದ್ದಾರೆ ಅಮೂಲ್ಯ, ಜಗದೀಶ್ ಬ್ಲ್ಯಾಟ್‌ ಔಟ್‌ಫಿಟ್‌ನಲ್ಲಿ ಮಿಂಚಿದ್ದಾರೆ. ಪ್ರಕೃತಿಯ ಮಡಿಲಲ್ಲಿ ನಿಂತುಕೊಂಡು ಪಿಂಕ್ ಥೀಮ್‌ ನಡುವೆ ಕೇಕ್ ಕಟ್ ಮಾಡಿದ್ದಾರೆ.

ರಾಧಿಕಾ ಪಂಡಿತ್, ಹರಿಪ್ರಿಯಾ, ರಮ್ಯಾ, ಸುಧಾ ರಾಣಿ, ಭಾರತಿ ವಿಷ್ಣುವರ್ಧನ್, ನಟ ಪ್ರೇಮ್, ಸೋನು ಗೌಡ...ಹೀಗೆ ಇಡೀ ಚಿತ್ರರಂಗವೇ ಭಾಗಿಯಾಗಿತ್ತು.

Latest Videos

click me!