ಉದ್ದವಾದ ಕೂದಲನ್ನು ಗಿಡ್ಡ ಮಾಡಿಕೊಂಡು ಒಂದು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡೆ ಎಂದ ದೀಪಿಕಾ ದಾಸ್!

ನಾಗಿಣಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮತ್ತೆ ಸಿನಿಮಾಗೆ ಮರಳಿದ್ದಾರೆ. ಮದುವೆ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಪಾರು ಪಾರ್ವತಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. 

ಬಿಗ್‌ ಬಾಸ್‌ ಸ್ಪರ್ಧಿ ದೀಪಿಕಾ ದಾಸ್‌ ನಟನೆಯ ‘ಪಾರು ಪಾರ್ವತಿ’ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪಿ ಬಿ ಪ್ರೇಮನಾಥ್‌ ಸಾರಥ್ಯದ ಹೊಸ ನಿರ್ಮಾಣ ಸಂಸ್ಥೆಯನ್ನು ಉದ್ಘಾಟನೆ ಮಾಡಲಾಯಿತು. ರೋಹಿತ್‌ ಕೀರ್ತಿ ಚಿತ್ರದ ನಿರ್ದೇಶಕರು. ಪೂನಂ ಸರ್‌ನಾಯಕ್‌, ಫವಾಜ್‌ ಅಶ್ರಫ್‌ ಚಿತ್ರದ ಮುಖ್ಯ ಪಾತ್ರಧಾರಿಗಳು.

ಬಹಳ ದಿನಗಳ ನಂತರ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ. ‘ಪಾರು ಪಾರ್ವತಿ’ ಎಂಬ ಸಿನಿಮಾದಲ್ಲಿ ದೀಪಿಕಾ ದಾಸ್ ನಾಯಕಿಯಾಗಿದ್ದಾರೆ. ಅಡ್ವೆಂಚರಸ್ ಕುರಿತಾದ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.


ದೀಪಿಕಾ ದಾಸ್‌, ‘ನನಗೆ ಪ್ರವಾಸ ಎಂದರೆ ಇಷ್ಟ. ಈಗ ಅದೇ ರೀತಿಯ ಕತೆಯಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಏಕಾಂಗಿ ಸಂಚಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರಕ್ಕಾಗಿ ನಾನು ಒಂದು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದೇನೆ‌ ಹಾಗೂ ಉದ್ದವಾದ ಕೂದಲನ್ನು ಗಿಡ್ಡ ಕೂದಲು ಮಾಡಿಕೊಂಡಿದ್ದೇನೆ’ ಎಂದರು.
 

ಅಂದಹಾಗೆ, ದೀಪಿಕಾ ಅವರು ರಿಯಲ್ ಲೈಫ್‌ನಲ್ಲಿ ಜಾಸ್ತಿ ಪ್ರವಾಸ ಮಾಡುತ್ತಾರೆ. ಈ ಸಿನಿಮಾದಲ್ಲೂ ಅವರಿಗೆ ಟ್ರಾವೆಲ್ ಮಾಡುವ ಹುಡುಗಿಯ ಪಾತ್ರವೇ ಸಿಕ್ಕಿದೆ. ಇನ್ನೂ 198 ದೇಶಗಳನ್ನು ಸುತ್ತಬೇಕು ಎಂಬುದು ನನ್ನ ಜೀವನದ ಮಹಾದಾಸೆಯಂತೆ.

ಈ ಸಿನಿಮಾದಲ್ಲಿ ನಾನು ಮಾಡಿರುವ ಪಾತ್ರಕ್ಕೂ ನನ್ನ ನಿಜ ಜೀವನದ ಪಾತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ನಮ್ಮ ನಿರ್ದೇಶಕರು ಅನೇಕ ಬಾರಿ ಅದನ್ನು ಹೇಳಿದ್ದಾರೆ. ನಿಮ್ಮಂತೆಯೇ ಈ ಸಿನಿಮಾದ ಪಾಯಲ್ ಪಾತ್ರ ಕೂಡ ಇದೆ ಎನ್ನುತ್ತಿರುತ್ತಾರೆ. ಸದ್ಯಕ್ಕೆ ಹೊಸ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ ಎಂದು ದೀಪಿಕಾ ದಾಸ್ ತಿಳಿಸಿದರು.
 

ರೋಹಿತ್‌ ಕೀರ್ತಿ, ‘ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ‘ಪಾರು ಪಾರ್ವತಿ’ ಚಿತ್ರದ್ದು ಅಡ್ವೆಂಚರ್‌ ಹಾಗೂ ಪ್ರವಾಸ ಒಳಗೊಂಡ ಕತೆ. ಮೂರು ಮುಖ್ಯ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
 

ನಿರ್ಮಾಪಕ ಪ್ರೇಮನಾಥ್‌, ‘ನಾನು ಐಟಿ ಉದ್ಯೋಗಿ. ಚಿತ್ರ ನಿರ್ಮಿಸುವ ಕನಸಿತ್ತು. ಅದು ಈಗ ಈಡೇರುತ್ತಿದೆ.‌ ನಿರ್ದೇಶಕರು ಒಳ್ಳೆಯ ಕತೆ ಮಾಡಿದ್ದಾರೆ. ಇದು ಪ್ರವಾಸದ ಕತೆಯಾಗಿರುವುದರಿಂದ ಇಷ್ಟವಾಯಿತು’ ಎಂದರು.

Latest Videos

click me!