ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು

First Published | Sep 4, 2024, 5:02 PM IST

ಸಂಗೀತ ನಿರ್ದೇಶಕ ಹಂಸಲೇಖ ಅವರ ಕುಟುಂಬ ಸಂಗೀತ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದೆ. ಅವರ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಮುದ್ದಿನ ಮಗಳ ಬಗ್ಗೆ ಗೊತ್ತಾ. ಇಲ್ಲಿದೆ ಕುಟುಂಬದ ಮಾಹಿತಿ.

ಕನ್ನಡದ ಪ್ರಸಿದ್ದ ಸಂಗೀತ ನಿರ್ದೇಶಕರಲ್ಲೊಬ್ಬರು ನಾದಬ್ರಹ್ಮ ಹಂಸಲೇಖ, ಸಂಗೀತ ಸಾಧನೆಯಿಂದ ಜನಮಾನಸದಲ್ಲಿ ಉಳಿದಿರುವ ಹಂಸಲೇಖ, ಒಂದಲ್ಲ ಒಂದು ವಿವಾದದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.   ಇದೀಗ ಅವರ ಕುಟುಂಬದ ಬಗ್ಗೆ ತಿಳಿಯೋಣ.

 ಹಂಸಲೇಖ ಅವರ ಮೂಲ ಹೆಸರು ಗಂಗರಾಜು, ಪತ್ನಿ ಲತಾ ಹಂಸಲೇಖ, ಮಕ್ಕಳಾದ ಅಲಂಕಾರ್, ತೇಜಸ್ವಿನಿ ಮತ್ತು ನಂದಿನಿ ಎಲ್ಲರೂ ಸಿನಿಮಾದ ವಿವಿಧ ವಿಭಾಗಗಳ ಮೂಲಕ ಗುರುತಿಸಿಕೊಂಡವರೇ ಆಗಿದ್ದಾರೆ. ಪತ್ನಿ ಹಾಡುಗಾರ್ತಿ ಮಗ ಅಲಂಕಾರ್ ನಿರ್ಮಾಪಕ, ತೇಜಸ್ವಿನಿ ಅನಿಮೇಶನ್ ಮಾಡುತ್ತಾರೆ. ಕೊನೆಯಾಕೆ ನಂದಿನಿ ಹಲವು ಹಾಡು, ಆಲ್ಬಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

 ನಂದಿನಿ ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಹಿನ್ನಲೆ ಗಾಯಕಿ. `ದೇವರು ಕೊಟ್ಟ ತಂಗಿ',`ಬಂದು ಬಳಗ',`ಕನ್ನಡದ ಕಿರಣ್ ಬೇಡಿ',`ನಾನು ನನ್ನ ಕನಸು' ,' ನವಶಕ್ತಿ ವೈಭವ'  ಮುಂತಾದ ಚಿತ್ರಗಳ ಗೀತೆಗೆ ಧ್ವನಿಯಾಗಿದ್ದಾರೆ.

ಇಷ್ಟು ಮಾತ್ರವಲ್ಲ ನಂದಿನಿ ನಟಿ, ಗಾಯಕಿ, ಗಗನ ಸಖಿ ಮತ್ತು ಡಿಸೈನರ್ ಹೀಗೆ ವೈವಿಧ್ಯಮಯ ಪ್ರತಿಭೆ ಹೊಂದಿರುವವರು. ಮೊದಲ ಆಲ್ಬಂ ಹಾಡು `ಪುಕ್ಲ..ಪುಕ್ಲ' 2020ರಲ್ಲಿ ಹೊರಬಂತು. ಇದರಲ್ಲಿ ಹಾಡಿ ನಟಿಸಿದ್ದರು. 

ಗಾಯಕ ಫಯಾಜ್‌ ಖಾನ್‌ ಅವರ ಟ್ರೂಪಿನಲ್ಲೂ ಕಾರ್ಯ ನಿರ್ವಹಿಸಿದ ಅನುಭವವಿದೆ. ನಂದಿನಿ ಅಕ್ಕ ಮತ್ತು ಅಣ್ಣ ಕೂಡ ಗಾಯಕರು. ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕ್‌ವೊಂದರ ಉದ್ಯೋಗಿಯಾಗಿದ್ದಾರೆ.

Latest Videos

click me!