ಡೆವಿಲ್ ಶೂಟಿಂಗ್‌ ವಿರಾಮದಲ್ಲಿ ದರ್ಶನ್‌ ಸ್ಟೈಲಿಶ್‌ ಬ್ರೇಕ್: ರೇಂಜ್‌ ರೋವರ್‌ ಡ್ರೈವ್‌ ಟ್ರೆಂಡಿಂಗ್!

Published : May 02, 2025, 05:25 PM ISTUpdated : May 02, 2025, 05:37 PM IST

ದರ್ಶನ್‌ ನಟನೆಯ ‘ಡೆವಿಲ್’ ಶೂಟಿಂಗ್‌ಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಬೆನ್ನುನೋವಿನ ನಡುವೆಯೂ ದರ್ಶನ್‌ ಕಾರು ಓಡಿಸುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.

PREV
17
ಡೆವಿಲ್ ಶೂಟಿಂಗ್‌ ವಿರಾಮದಲ್ಲಿ ದರ್ಶನ್‌ ಸ್ಟೈಲಿಶ್‌ ಬ್ರೇಕ್: ರೇಂಜ್‌ ರೋವರ್‌ ಡ್ರೈವ್‌ ಟ್ರೆಂಡಿಂಗ್!

ಬೆಂಗಳೂರಿನಲ್ಲಿ ನಡೆಯುತ್ತಿದ್ದ ದರ್ಶನ್‌ ನಟನೆಯ ‘ಡೆವಿಲ್’ ಶೂಟಿಂಗ್‌ಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಈ ನಡುವೆ ದರ್ಶನ್‌ ಸ್ನೇಹಿತರ ರೇಂಜ್‌ ರೋವರ್‌ ಹೊಸ ಕಾರು ಓಡಿಸಿ ವಿರಾಮವನ್ನು ಎಂಜಾಯ್‌ ಮಾಡುತ್ತಿದ್ದಾರೆ.

27

ಬೆನ್ನುನೋವಿನ ನಡುವೆಯೂ ದರ್ಶನ್‌ ಕಾರು ಓಡಿಸುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ. ‘ಡೆವಿಲ್‌’ ಸಿನಿಮಾದ ಮುಂದಿನ ಹಂತದ ಶೂಟಿಂಗ್‌ ಮೇ 7ರಿಂದ ಬೆಂಗಳೂರಿನ ಹೆಚ್‌ಎಎಲ್‌ ನಡೆಯಲಿದೆ. ಇದರಲ್ಲಿ ದರ್ಶನ್‌ ಭಾಗಿಯಾಗಲಿದ್ದಾರೆ.

37

ಹೊಸ ಲುಕ್‌ನಲ್ಲಿ ದರ್ಶನ್‌: ದರ್ಶನ್‌ ‘ಡೆವಿಲ್‌’ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದು, ಇದೀಗ ಸೆಟ್‌ನಲ್ಲಿ ಹೊಸ ಲುಕ್‌ನಲ್ಲಿ ಇರುವ ಫೋಟೋ ಬಿಡುಗಡೆ ಆಗಿದೆ. ಇದು ಸ್ನೇಹಿತ ಸಚ್ಚಿದಾನಂದ್‌ ಅವರ ಜನ್ಮದಿನಾಚರಣೆಯ ಫೋಟೋ ಆಗಿದ್ದು, ದಿನಕರ್ ತೂಗುದೀಪ್‌ ಕೂಡ ಇದ್ದಾರೆ.

47

ಜೈಲಿನಿಂದ ಬಂದ ಮೇಲೆ ಸ್ನೇಹಿತರಿಂದ ಅಂತರ ಕಾಯ್ದುಕೊಂಡಿದ್ದ ದರ್ಶನ್‌ ಇದೀಗ ಸಚ್ಚಿದಾನಂದ್‌ ಹುಟ್ಟುಹಬ್ಬ ಆಚರಣೆ ಮಾಡಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಉಂಟು ಮಾಡಿದೆ. ಜೊತೆಗೆ ದರ್ಶನ್‌ ಹಿಂದಿನ ಫಿಟ್‌ನೆಸ್‌ಗೆ ಹೊಂದಿರುವುದಕ್ಕೂ ಶ್ಲಾಘನೆ ವ್ಯಕ್ತವಾಗುತ್ತಿದೆ.

57

ಫೋಟೋ ಲೀಕ್‌: ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾ ಸೆಟ್‌ನದು ಎನ್ನಲಾದ ಫೋಟೋ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಫೋಟೋದಲ್ಲೊಂದು ಕಟೌಟ್‌ ಇದೆ. ಅದರಲ್ಲಿ ಸಿಎಂ ಲುಕ್‌ನಲ್ಲಿ ಕೈಮುಗಿಯುತ್ತಿರುವ ದರ್ಶನ್‌ ಚಿತ್ರವಿದೆ. 

67

‘ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್’ ಎಂದು ದರ್ಶನ್‌ ಪಾತ್ರವನ್ನು ಉಲ್ಲೇಖಿಸಲಾಗಿದೆ. ಕರುನಾಡ ಪ್ರಜಾ ಪಕ್ಷ ಎಂಬ ಪಾರ್ಟಿ ಹೆಸರೂ ಇದೆ. ಪ್ರಕಾಶ್‌ ವೀರ್‌ ನಿರ್ದೇಶನದ ‘ಡೆವಿಲ್‌’ ಚಿತ್ರದ ನಾಲ್ಕನೇ ಹಂತದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. 

77

ಅಲ್ಲಿನ ಫೋಟೋವನ್ನು ಕಿಡಿಗೇಡಿಗಳು ಸೋಷಲ್‌ ಮೀಡಿಯಾದಲ್ಲಿ ಲೀಕ್‌ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ದರ್ಶನ್‌ ಅವರ ‘ಡೆವಿಲ್‌’ ಸಿನಿಮಾದ ಟೀಸರ್‌ ನೋಡಿದವರಿಗೆ ದರ್ಶನ್‌ ಅವರ ಹೊಸ ಲುಕ್‌ ಅಚ್ಚರಿ ತಂದಿದೆ. ಈ ಸಿನಿಮಾಕ್ಕೆ ರಾಜಕೀಯ ಆಯಾಮವೂ ಇರುವ ಬಗ್ಗೆ ದರ್ಶನ್ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

Read more Photos on
click me!

Recommended Stories