ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹೊಸ ಚಿತ್ರ ಘೋಷಣೆಯಾಗಿದೆ. ಈ ಚಿತ್ರಕ್ಕೆ ‘ಭಾರ್ಗವ’ ಎಂದು ಹೆಸರಿಡಲಾಗಿದೆ. ನಾಗಣ್ಣ ನಿರ್ದೇಶನದ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದಾರೆ.
25
ಈ ಹಿಂದೆ ನಾಗಣ್ಣ ಅವರು ಉಪೇಂದ್ರ ನಟನೆಯ ‘ಕುಟುಂಬ’, ‘ಗೌರಮ್ಮ’ ಹಾಗೂ ‘ದುಬೈ ಬಾಬು’ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಈ ಜೋಡಿ 17 ವರ್ಷಗಳ ನಂತರ ‘ಭಾರ್ಗವ’ ಸಿನಿಮಾ ಮೂಲಕ ಜತೆಯಾಗುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.
35
ಚಿತ್ರಕ್ಕೆ A Violent Family Man ಎಂಬ ಅಡಿಬರಹವಿದೆ. ಕೋಟಿಗೊಬ್ಬ, ಕೋಟಿಗೊಬ್ಬ 2 ಮತ್ತು 3 ಚಿತ್ರಗಳಿಗೆ ಹೆಸರುವಾಸಿಯಾದ ರಾಮ್ ಬಾಬು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸೂರಪ್ಪ ಬಾಬು ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
ಇನ್ನು ಅರ್ಜುನ್ ಜನ್ಯ ಅವರ ನಿರ್ದೇಶನದ ಚೊಚ್ಚಲ 45 ರಲ್ಲಿ ಮುಂದಿನ ಬಾರಿ ಕಾಣಿಸಿಕೊಳ್ಳಲಿರುವ ಉಪೇಂದ್ರ, ಭಾರ್ಗವ ಚಿತ್ರದಲ್ಲಿ ಎರಡು ವಿಭಿನ್ನ ಶೆಡ್ ಗಳ ಪಾತ್ರ ಮಾಡುತ್ತಿದ್ದಾರೆ.
55
ಇದೊಂದು ಭಾವನೆ, ಹಾಸ್ಯಗಳ ತೀವ್ರತೆಯನ್ನೊಳಗೊಂಡ ಪಾತ್ರವಾಗಿದ್ದು, ಉಪೇಂದ್ರ ಅವರಿಗೆ ಹೊಸ ರೀತಿಯ ಪಾತ್ರ. ಕಥೆಯು ಕುಟುಂಬದ ವ್ಯಕ್ತಿಯ ಸುತ್ತ ಸುತ್ತುತ್ತದೆಯಾದರೂ, ಆತ ಎದುರಿಸುವ ಸನ್ನಿವೇಶಗಳು ಮಿತಿಯನ್ನು ಮೀರಿ ಆತನನ್ನು ಸಂಘರ್ಷಕ್ಕೆ ತಳ್ಳುತ್ತವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.