ಸ್ನೇಹಿತೆಯ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ದರ್ಶನ್; ಇಷ್ಟೇ ಕಣ್ರೋ ಜೀವನ ಎಂದ ನೆಟ್ಟಿಗರು!
ನಟ ದರ್ಶನ್ ತೂಗುದೀಪ ಬಂಧನದ 80 ದಿನಗಳ ನಂತರ, ಪತ್ನಿ ವಿಜಯಲಕ್ಷ್ಮೀ ಅವರು ಸ್ನೇಹಿತರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ನಟ ದರ್ಶನ್ ತೂಗುದೀಪ ಬಂಧನದ 80 ದಿನಗಳ ನಂತರ, ಪತ್ನಿ ವಿಜಯಲಕ್ಷ್ಮೀ ಅವರು ಸ್ನೇಹಿತರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಬಂಧನವಾಗಿ 80 ದಿನಗಳು ಕಳೆದಿವೆ. ಸೋಮವಾರ ಕೋರ್ಟ್ ಇನ್ನೂ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇದರ ನಡುವೆ ಪ್ರಕರಣದಲ್ಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಕೆ ಮಾಡಿರುವ 3991 ಪುಟಗಳ ಚಾರ್ಜ್‌ಶೀಟ್ ಮಾಧ್ಯಮಗಳಿಗೆ ಲಭ್ಯವಾಗಿದೆ.
ದರ್ಶನ್ ವಿಚಾರದಲ್ಲಿ ಇಷ್ಟೆಲ್ಲಾ ಆಗಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಗಂಡನ ಪ್ರತಿ ಹೆಜ್ಜೆಗೆ ಸಾಥ್ ನೀಡಿದ್ದರು. ಒಳ್ಳಾರಿಯವರೆಗೂ ಹೋಗಿ ಗಂಡನನ್ನು ಮಾತನಾಡಿಸಿಕೊಂಡು ಬರುತ್ತಿದ್ದ ಅವರು ಹೊರಗಡೆ ಪಾರ್ಟಿಗೆಲ್ಲಾ ಹೋಗೋದು ಬಹಳ ಕಡಿಮೆಯೇ ಆಗಿತ್ತು.
ದರ್ಶನ್ ತೂಗುದೀಪ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆ ಆದ ಬಳಿಕ ವಿಜಯಲಕ್ಷ್ಮೀ ದರ್ಶನ್ ಸ್ಮಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದ ಹಾಗೆ ಕಂಡಿದೆ. ಹೌದು, ಒಂದೆಡೆ ದರ್ಶನ್ ಜೈಲಿನಲ್ಲಿದ್ದರೆ ವಿಜಯಲಕ್ಷ್ಮೀ ದರ್ಶನ್ ಸ್ನೇಹಿತಯ ಬರ್ತ್‌ಡೇ ಪಾರ್ಟಿಯಲ್ಲಿ ಫುಲ್ ಜೋಶ್‌ನಲ್ಲಿ ಸಂಭ್ರಮಿಸಿದ್ದಾರೆ. ಇತ್ತೀಚೆಗೆ ತಮ್ಮ ಸ್ಮೇಹಿತೆ ಶ್ರುತಿ ರಮೇಶ್ ಕುಮಾರ್ ಅವರ ಜನ್ಮದಿನದ ಸಂಭ್ರಮದಲ್ಲಿ ವಿಜಯಲಕ್ಷ್ಮೀ ಖುಷಿಯಿಂದಲೇ ಭಾಗಿಯಾಗಿದ್ದಾರೆ.
ಬಿಳಿ ಬಣ್ಣ ಮಾಡರ್ನ್ ಡ್ರೆಸ್‌ನಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಸಂಭ್ರಮಿಸುತ್ತಿರುವ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 'ವಿಜಿ ನಿಮ್ಮದು ಎಷ್ಟು ಒಳ್ಳೆಯ ಮನಸ್ಸು. ನಿಮ್ಮ ಆಪ್ತರು ಖುಷಿಯಾಗಿ ಇರಬೇಕೆಂದು ಎಷ್ಟೆಲ್ಲಾ ಪ್ರಯತ್ನ ಪಡ್ತೀರಿ. ನಾವು ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದರೂ, ಇಂದಿಗೂ ಕೂಡ ಉತ್ತಮ ಸ್ನೇಹಿತೆಯರಾಗಿ ಇರೋದಕ್ಕೆ ಖುಷಿಯಾಗುತ್ತಿದೆ. ನನ್ನ ಈ ದಿನ ಸ್ಪೆಷಲ್ ಆಗಿರಬೇಕು ಎನ್ನುವ ಕಾರಣಕ್ಕೆ ಇಷ್ಟು ದೂರದಿಂದ ಬಂದಿರೋದಕ್ಕೆ ತುಂಬಾ ಥ್ಯಾಂಕ್ಸ್. ನೀವು ನನ್ನ ಆತ್ಮೀಯ ಫ್ರೆಂಡ್ ಎಂದು ಹೇಳಿಕೊಳ್ಳೋದಕ್ಕೆ ನಾನು ಅದೃಷ್ಟವಂತೆ ಎಂದು ನಂಬುತ್ತೇನೆ' ಎಂದು ಶ್ರುತಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಜ್ಜೆ ಹೆಜ್ಜೆಯಲ್ಲೂ ಸಿಕ್ಕಿಬಿದ್ದ 'ಗಜ'ಪತಿ, ಗರ್ವಭಂಗಕ್ಕೆ ಸಾಕಾ ಇಷ್ಟು ಚಿತ್ರಗಳು!
ಇನ್ನು ಈ ಫೋಟೋಗೆ ಕಾಮೆಂಟ್ ಮಾಡಿರುವ ಹೆಚ್ಚಿವರು, ಅಣ್ಣ ಒಳಗಿದ್ದರೂ, ಅತ್ತಿಗೆ ಫುಲ್ ಕೂಲ್ ಆಗಿದ್ದಾರೆ.ಅಣ್ಣಂಗೂ ಕೇಕ್ ಕೊಡ್ತಿರಾ ಎಂದು ಕಾಲೆಳೆದಿದ್ದಾರೆ. ಇಷ್ಟೇ ಕಣ್ರೋ ಜೀವನ, ದುಡ್ಡು ಇರೋವರ ಮನೆ ಕಥೆನೇ ಇಷ್ಟು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಮೇಲಿನ 10 ಗಂಭೀರ ಆರೋಪಗಳು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆ?
ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್ ಜೊತೆ 10 ವರ್ಷ ಸಂಸಾರ?