ದರ್ಶನ್‌ ಮೇಲಿನ 10 ಗಂಭೀರ ಆರೋಪಗಳು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆ?

ನಟ ದರ್ಶನ್‌ ಮೇಲೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 10 ಗಂಭೀರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿದ್ದು, ಆರೋಪಗಳು ಸಾಬೀತಾದರೆ ಜೀವಾವಧಿ ಶಿಕ್ಷೆಯೂ ಸೇರಿದಂತೆ ಕನಿಷ್ಠ ಎರಡು ವರ್ಷಗಳಿಂದ ಗರಿಷ್ಠ ದರ್ಶನ್ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.

renukaswamy Murder chargesheet which section has been put on Darshan pavithra gowda san

ಬೆಂಗಳೂರು (ಸೆ.9): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಹೆಚ್ಚಿನವರ ವಿರುದ್ದ ಬಹಳ ಗಂಭೀರವಾದ ಇಂಡಿಯನ್‌ ಪೆನಲ್‌ ಕೋಡ್‌ ಸೆಕ್ಷನ್‌ಗಳನ್ನು ಹಾಕಲಾಗಿದೆ. 17 ಮಂದಿಯ ಪೈಕಿ, ದುಡ್ಡಿನಾಸೆಗೆ ಶರಣಾಗಲು ಬಂದ ಇಬ್ಬರ ಮೇಲೆ ಕೊಲೆ ಆರೋಪವನ್ನು ಹಾಕಲಾಗಿಲ್ಲ. ಅವರ ವಿರುದ್ಧ ಸಾಕ್ಷ್ಯನಾಶದ ಆರೋಪಗಳನ್ನು ಹಾಕಲಾಗಿದೆ. ಚಾರ್ಜ್‌ಶೀಟ್‌ನ ಪ್ರಕಾರದಲ್ಲಿ ನೋಡೋದಾದರೆ, ದರ್ಶನ್‌ ಸೇರಿಂದಂತೆ ಹಲವರ ಮೇಲೆ ಒಟ್ಟು 10 ಸೆಕ್ಷನ್‌ಗಳಲ್ಲಿ ಕೇಸ್‌ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್‌ 302, 34, 120 (ಬಿ), 355, 143, 147, 148, 149, 201 ಹಾಗೂ 364 ಅಡಿಯಲ್ಲಿ ಕೇಸ್‌ ಮಾಡಲಾಗಿದೆ. ಈ ಎಲ್ಲಾ ಆರೋಪಗಳನ್ನು ಪೊಲೀಸರು ಕೋರ್ಟ್‌ನಲ್ಲೂ ಸಾಬೀತು ಮಾಡಿದಲ್ಲಿ, ದರ್ಶನ್‌ ಜೊತೆಗೆ ಹಲವರು ಅಪರಾಧಿಗಳಾಗಿ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ದರ್ಶನ್‌, ಪವಿತ್ರಾ ಗೌಡ ಸ್ವಇಚ್ಛಾ ಹೇಳಿಕೆಗಳನ್ನೂ ನೀಡಿದ್ದು, ಇದೂ ಕೂಡ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾದರೆ, ದರ್ಶನ್‌ ಮೇಲೆ ಹಾಕಲಾಗಿರುವ 10 ಸೆಕ್ಷನ್‌ಗಳೂ ಸಾಬೀತಾದಲ್ಲಿ ಎಷ್ಟು ವರ್ಷ ಶಿಕ್ಷೆ ಎದುರಿಸಬೇಕಾಗಬಹುದು? ಎಷ್ಟು ವರ್ಷ ಅವರು ಜೈಲಿನಲ್ಲಿರಬೇಕಾಗಬಹುದು ಎನ್ನುವುದರ ವಿವರ ಇಲ್ಲಿದೆ.

ಐಪಿಸಿ ಸೆಕ್ಷನ್‌ 302: ಕೊಲೆ ಮಾಡಿದ ಆರೋಪದ ಸೆಕ್ಷನ್‌. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಅತಿಕ್ರೂರ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ನೀಡಲಾಗುತ್ತದೆ.

ಐಪಿಸಿ ಸೆಕ್ಷನ್‌ 34: ಒಂದು ಉದ್ದೇಶ ಈಡೇರಿಕೆಗಾಗಿ ಹಲವು ವ್ಯಕ್ತಿಗಳು ಸೇರಿ ಮಾಡಿದ ಅಪರಾಧ. ಅನೇಕ ಜನರು ಸಾಮಾನ್ಯ ಉದ್ದೇಶದಿಂದ ಅಪರಾಧ ಎಸಗಿದಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಸಕ್ರಿಯವಾಗಿ ಭಾಗವಹಿಸಿದಾಗ ಸೆಕ್ಷನ್‌ 34 ಅನ್ವಯಿಸುತ್ತದೆ. ಇದರಲ್ಲಿ ಗರಿಷ್ಠ 10 ವರ್ಷ ಶಿಕ್ಷೆ ಹಾಗೂ ದಂಡಕ್ಕೆ ಅವಕಾಶವಿದೆ.

ಐಪಿಸಿ ಸೆಕ್ಷನ್‌ 120ಬಿ: ಕ್ರಿಮಿನಲ್ ಪಿತೂರಿಯ ಸೆಕ್ಷನ್‌. ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಬಹುದಾದ ಸೆಕ್ಷನ್‌ ಇದಾಗಿದೆ.

ಐಪಿಸಿ ಸೆಕ್ಷನ್‌ 355: ಯಾರಾದರೂ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದಾಗ ಅಥವಾ ಅವರನ್ನು ಅವಮಾನಿಸುವ ಉದ್ದೇಶದಿಂದ ಕ್ರಿಮಿನಲ್ ಬಲವನ್ನು ಬಳಸಿದಾಗ ಈ ಸೆಕ್ಷನ್‌ ಅನ್ವಯವಾಗುತ್ತದೆ. ಇದಕ್ಕೆ ಗರಿಷ್ಠ ಪ್ರಮಾಣದಲ್ಲಿ ಎರಡು ವರ್ಷ ಶಿಕ್ಷೆ ಅಥವಾ ದಂಡವನ್ನು ವಿಧಿಸಬಹುದು. ಇಲ್ಲವೇ ಎರಡನ್ನೂ ವಿಧಿಸಬಹುದು.

ಐಪಿಸಿ ಸೆಕ್ಷನ್‌ 143: ಕಾನೂನುಬಾಹಿರ ಗುಂಪಿನ ಸದಸ್ಯರಾಗಿರುವ ಯಾರೇ ಆಗಲಿ, ಆರು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ವಿವರಣೆಯ ಜೈಲುವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಐಪಿಸಿ ಸೆಕ್ಷನ್‌ 147: ಗುಂಪುಗೂಡಿ ಮಾಡಿದ ಗಲಭೆಯ ಸೆಕ್ಷನ್‌. ತಪ್ಪಿತಸ್ಥರು ಯಾರೇ ಆಗಿರಲಿ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲುವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಐಪಿಸಿ ಸೆಕ್ಷನ್‌ 148: ಗುಂಪುಗೂಡಿ ಮಾಡಿದ ಗಲಭೆಯ ತಪ್ಪಿತಸ್ಥರು, ಮಾರಣಾಂತಿಕ ಆಯುಧಗಳನ್ನು ಬಳಸಿದ ಸೆಕ್ಷನ್‌. ಇದರಿಂದ ಮರಣವನ್ನು ಉಂಟುಮಾಡಿರುವ ಕಾರಣಕ್ಕೆ ಈ ಸೆಕ್ಷನ್‌ ಹಾಕಲಾಗುತ್ತದೆ. ಗರಿಷ್ಠ 3 ವರ್ಷಗಳ ಶಿಕ್ಷೆ ನೀಡಲಾಗುತ್ತದೆ. ಇಲ್ಲವೇ ದಂಡ ಹಾಕಲಾಗುತ್ತದೆ. ಹೆಚ್ಚಿನ ಪ್ರಕರಣದಲ್ಲಿ ನ್ಯಾಯಾಧೀಶರು ಎರಡನ್ನೂ ವಿಧಿಸುತ್ತಾರೆ.

ಐಪಿಸಿ ಸೆಕ್ಷನ್‌ 149: ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 149 ರ ಅಡಿಯಲ್ಲಿ ಅಪರಾಧಕ್ಕೆ ಶಿಕ್ಷೆಯು ಕಾನೂನುಬಾಹಿರ ಸಭೆಯು ಮಾಡಿದ ಅಪರಾಧದ ಪ್ರಕಾರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಅಪರಾಧವು ಗಲಭೆಯಾಗಿದ್ದರೆ, ಗುಂಪಿನ ಪ್ರತಿ ಸದಸ್ಯರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಮತ್ತು ಎರಡನ್ನೂ ವಿಧಿಸಬಹುದಾಗಿದೆ. ಈ ಸೆಕ್ಷನ್‌ನಲ್ಲಿ ಶಿಕ್ಷೆ ವಿಧಿಸಲು, ಘಟನೆಯ ಹಿನ್ನೆಲೆ, ಉದ್ದೇಶ, ಸಭೆಯ ಸ್ವರೂಪ, ಸದಸ್ಯರು ಹೊತ್ತೊಯ್ದ ಆಯುಧಗಳು ಹಾಗೂ ಅಪರಾಧದ ಮೊದಲು, ಸಮಯದಲ್ಲಿ ಅಥವಾ ನಂತರ ಸದಸ್ಯರ ನಡವಳಿಕೆ ಕೂಡ ಮುಖ್ಯವಾಗುತ್ತದೆ.

ಐಪಿಸಿ ಸೆಕ್ಷನ್‌ 201: ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 201 ಕಾನೂನು ಶಿಕ್ಷೆಯಿಂದ ಬಚಾವ್‌ ಆಗಲು ಸಾಕ್ಷ್ಯವನ್ನು ನಾಶಪಡಿಸುವ ಅಥವಾ ತಪ್ಪು ಮಾಹಿತಿಯನ್ನು ನೀಡಿದ್ದಕ್ಕೆ ಶೀಕ್ಷೆ ನೀಡುತ್ತದೆ.  ಶಿಕ್ಷಿಸುತ್ತದೆ. ಪ್ರಾಥಮಿಕ ಉದ್ದೇಶ ಏನು ಅನ್ನೋದರ ಆಧಾರದ ಮೇಲೆ ಶಿಕ್ಷೆ ನಿರ್ಧಾರವಾಗುತ್ತದೆ. ಈ ಸೆಕ್ಷನ್‌ನಲ್ಲೂ ಮರಣ ದಂಡನೆ (ಅತಿಕ್ರೂರ ಪ್ರಕರಣದಲ್ಲಿ), ಗರಿಷ್ಟ 10 ವರ್ಷದ ಶಿಕ್ಷೆಗೆ ಅವಕಾಶವಿದೆ. ಉದಾಹರಣೆಗೆ, ಕೊಲೆಯಾಗಿದೆ ಎಂದು ತಿಳಿದ ನಂತರ ಯಾರಾದರೂ ದೇಹವನ್ನು ಮರೆಮಾಡಲು ಸಹಾಯ ಮಾಡಿದರೆ, ಅವರು ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು.

ಹೆಜ್ಜೆ ಹೆಜ್ಜೆಯಲ್ಲೂ ಸಿಕ್ಕಿಬಿದ್ದ 'ಗಜ'ಪತಿ, ಗರ್ವಭಂಗಕ್ಕೆ ಸಾಕಾ ಇಷ್ಟು ಚಿತ್ರಗಳು!

ಐಪಿಸಿ ಸೆಕ್ಷನ್‌ 364: ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 364 ರ ಅಡಿಯಲ್ಲಿ ಯಾರನ್ನಾದರೂ ಅಪಹರಣ ಅಥವಾ ಅಪಹರಣಕ್ಕೆ ಶಿಕ್ಷೆಯು ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ಸೆಕ್ಷನ್‌ ಕೂಡ ಹಾಕಲಾಗಿದೆ. 

ಪವಿತ್ರಾಗೌಡಗಿಂತ 14 ವರ್ಷ ದೊಡ್ಡವನಾದ ದರ್ಶನ್‌ ಜೊತೆ 10 ವರ್ಷ ಸಂಸಾರ?

ದರ್ಶನ್‌ ಹಾಗೂ ಪವಿತ್ರಾಗೌಡ ಮೇಲೆ ಹಾಕಲಾಗಿರುವ ಈ ಎಲ್ಲಾ ಸೆಕ್ಷನ್‌ಗಳ ವಿಚಾರದಲ್ಲೂ ಕೋರ್ಟ್‌ನಲ್ಲಿ ವಾದ ನಡೆಯಲಿದೆ. ಇದರಲ್ಲಿ ಯಾವುದೇ ಕನಿಷ್ಠ ಸೆಕ್ಷನ್‌ನಲ್ಲಿ ದರ್ಶನ್‌ ದೋಷಿ ಎಂದು ಸಾಬೀತಾದರೂ ಕನಿಷ್ಠ 2 ವರ್ಷಗಳ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಹಾಗೇನಾದರೂ ದರ್ಶನ್‌ ಮೇಲೆ ಹಾಕಿರುವ ಆರೋಪ ನಿಜವಾದಲ್ಲಿ, ಪ್ರತಿ ಸೆಕ್ಷನ್‌ಗೂ ವಿಧಿಸಲಾಗಿರುವ ಪ್ರತ್ಯೇಕ ಸೆರೆವಾಸವನ್ನು ಒಟ್ಟುಗೂಡಿಸಿ ಎದುರಿಸಬೇಕಾಗಿರುತ್ತದೆ.

Latest Videos
Follow Us:
Download App:
  • android
  • ios