PHOTOS: ಮೊಮ್ಮಗ ರಾಣಾ ಅಮರ್‌ ಜೊತೆ 62ನೇ ಜನ್ಮದಿನ ಆಚರಿಸಿಕೊಂಡ Sumalatha Ambareesh

Published : Aug 27, 2025, 04:39 PM IST

ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ನಟಿಸಿರುವ, ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಅವರು ಗೌರಿ ಗಣೇಶ ಚತುರ್ಥಿಯಂದು 62ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ಹಬ್ಬಕ್ಕೆ ಅವರು ಅಜ್ಜಿ ಆಗಿರೋದು ಇನ್ನೊಂದು ವಿಶೇಷ ಎನ್ನಬಹುದು.  

PREV
15

ಮೊಮ್ಮಗ ರಾಣಾ ಅಮರ್‌ ಅಂಬರೀಶ್‌ ಜೊತೆ ಸುಮಲತಾ ಹುಟ್ಟುಹಬ್ಬ ಆಚರಿಸಿಕೊಂಡಿರೋದು, ಹಬ್ಬವೂ ಬಂದಿರೋದು ಡಬಲ್‌ ಖುಷಿಯಾಗಿದೆ. ಇದುವರೆಗೂ ಮೊಮ್ಮಗನ ಫೋಟೋವನ್ನು ಸುಮಲತಾ ರಿವೀಲ್‌ ಮಾಡಿಲ್ಲ. 

25

ಸುಮಲತಾ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ತಮ್ಮ ಜನ್ಮದಿನವನ್ನು ಆಚರಿಸಿದ್ದು, ಮೊಮ್ಮಗ ರಾಣಾ ಅಮರ್, ಅಭಿಷೇಕ್‌‌, ಅವಿವಾ ಬಿದ್ದಪ್ಪ ಕೂಡ ಇದ್ದರು. 2024ರ ನವೆಂಬರ್‌ 12ರಂದು ಅಂಬಿ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಲಾಗಿದ್ದು, ಮಗುವಿಗೆ 'ರಾಣಾ ಅಮರ್‌ ಅಂಬರೀಶ್‌' ಎಂದು ಹೆಸರಿಡಲಾಗಿತ್ತು. ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಮೂಲ ಹೆಸರಾದ ಅಮರ್‌ ನಾಥ್‌ಗೆ ಗೌರವವಾಗಿ ಈ ಹೆಸರು ಇಡಲಾಗಿದೆ.

35

ಸುಮಲತಾ ಅವರು ಮೊಮ್ಮಗನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು, "ನನ್ನ ಜೀವನದ ಅತ್ಯಂತ ಖುಷಿಯ ಕ್ಷಣಗಳು" ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್‌ ಮಾಡಿ "ರಾಣಾ ಜೊತೆಗಿನ ಪ್ರತಿ ಕ್ಷಣವೂ ನನ್ನ ಹೃದಯಕ್ಕೆ ಖುಷಿ ತರುತ್ತದೆ" ಎಂದು ಬರೆದುಕೊಂಡಿದ್ದಾರೆ. ಸುಮಲತಾ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿದ್ದಾರೆ.

45

ಆಗಾಗ ಮೊಮ್ಮಗನ ಜೊತೆಗಿರುವ ಫೋಟೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದನ್ನು ನೋಡಿ ಕೆಲ ವೀಕ್ಷಕರು, "ರಾಣಾ ಜೊತೆಗಿನ ಸುಮಲತಾರ ಸಂತೋಷವನ್ನು ನೋಡಲು ಖುಷಿಯಾಗುತ್ತಿದೆ. ಅಂಬರೀಶ್‌ ಹೆಸರನ್ನು ರಾಣಾ ಮುಂದುವರಿಸಲಿ" ಎಂದು ಶುಭ ಹಾರೈಸಿದ್ದಾರೆ.

55

ಸುಮಲತಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಒಟ್ಟಾರೆಯಾಗಿ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.

Read more Photos on
click me!

Recommended Stories