ನಟ ದರ್ಶನ್ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಮತ್ತೆ ಜತೆಯಾಗಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ಗೆ ಪ್ರತಿಷ್ಠಿತ ಕೆವಿನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ.
26
ದರ್ಶನ್, ಪ್ರೇಮ್, ಕೆವಿಎನ್ ಪ್ರೊಡಕ್ಷನ್ ಮುಖ್ಯಸ್ಥ ವೆಂಕಟ್ ಕೆ ನಾರಾಯಣ್, ಸುಪ್ರೀತ್ ಹಾಗೂ ನಟಿ ರಕ್ಷಿತಾ ಜೊತೆಗಿರುವ ಫೋಟೋ ಬಿಡುಗಡೆ ಮಾಡುವ ಮೂಲಕ ಹೊಸ ಚಿತ್ರದ ಘೋಷಣೆ ಆಗಿದೆ.
36
ಪ್ರೇಮ್ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಲುಕ್ ಮತ್ತು ಟೀಸರ್ ಸಖತ್ ಸುದ್ದಿ ಮಾಡಿತ್ತು.
46
ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದ, ರಾಕ್‌ಲೈನ್‌ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಯಾವಾಗ ಈ ಕಾಂಬಿನೇಶನ್‌ನ ಸಿನಿಮಾ ಆರಂಭವಾಗಲಿದೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.
56
ಪ್ರೇಮ್ ಹಾಗೂ ದರ್ಶನ್ ಕಾಂಬಿನೇಶನ್‌ನ ಸೂಪರ್‌ಹಿಟ್ ಸಿನಿಮಾ ‘ಕರಿಯ’ ಬಿಡುಗಡೆಯಾದ 20 ವರ್ಷಗಳ ನಂತರ ಮತ್ತೆ ಅದೇ ಕಾಂಬಿನೇಶನ್ ಜತೆಯಾಗಿರುವುದು ವಿಶೇಷ.
66
ನಾಯಕಿಯಾಗಿ ರಕ್ಷಿತಾ ಎಂಟ್ರಿ ಕೊಡಬೇಕು ಎಂದು ಅಭಿಮಾನಿಗಳು ಆಸೆ ವ್ಯಕ್ತ ಪಡಿಸುತ್ತಿದ್ದಾರೆ. ರಕ್ಷಿತಾ ಮತ್ತು ದರ್ಶನ್ ಫೋಟೋ ನೋಡಿದಾಗಲೆಲ್ಲಾ ಹಿಟ್ ಸಿನಿಮಾಗಳು ನೆನಪಾಗುತ್ತದೆ.