ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ 37ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ಜೊತೆ ಆಚರಿಸಿಕೊಂಡರು.
ಮೊದಲ ಸಲ ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡು.
ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾ ರಂಗದಲ್ಲಿರುವ ಎಲ್ಲಾ ಕಲಾವಿದರನ್ನು ಆಹ್ವಾನಿಸಿ ಅದ್ಧೂರಿಯಾಗಿ ಖಾಸಗಿ ಹೋಟೆಲ್‌ನಲ್ಲಿ ಆಚರಿಸಿಕೊಂಡಿದ್ದಾರೆ.
ಬೆಂಗಳೂರಿನ ಐಷಾರಾಮಿ ಪಬ್‌ನಲ್ಲಿ ಧಂಜಯ್ ಬರ್ತಡೇ ಪಾರ್ಟಿ ಮಾಡಿಕೊಂಡಿದ್ದಾರೆ. ದೊಡ್ಡ ಗಾತ್ರದ ಕೇಕ್ ಕತ್ತರಿಸಿದ್ದಾರೆ ಅಂಭ್ರಮಿಸಿದ್ದಾರೆ.
ನೀನಾಸಂ ಸತೀಶ್, ರಾಕಿಂಗ್ ಸ್ಟಾರ್ ಯಶ್, ಲೂಸ್ ಮಾದಾ ಯೋಗೇಶ್, ಯೋಗರಾಜ್ ಭಟ್, ಕೆಆರ್‌ಜೆ ಕಾರ್ತಿಕ್ ಗೌಡ, ನಟಿ ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪಾರ್ಟಿಗೆ ಆಗಮಿಸಿದ ಬಹುತೇಕರು ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಉಡುಪಿನಲ್ಲಿ ಮಿಂಚಿದ್ದರು. ಧನುಗೆ ವಿಶ್ ಮಾಡಿ ಅದ್ದೂರಿಯಾಗಿ ಪಾರ್ಟಿ ಮಾಡಿದ್ದಾರೆ.
ಧನಂಜಯ್ 25ನೇ ಸಿನಿಮಾ ಗುರುದೇವ ಹೋಯ್ಸಳ ನಂತರ ಒಂದು ತಮಿಳು ಎರಡು ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಕನ್ನಡ ಉತ್ತರಕಾಂಡ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.