ಯಶ್‌ - ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

Published : Aug 27, 2023, 07:57 PM IST

ಸೂಪರ್‌ಸ್ಟಾರ್‌ ಯಶ್‌ ಹಾಗೂ ನಟಿ ಮತ್ತು ಮಡದಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಮನೆಯಲ್ಲಿ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ. 

PREV
16
ಯಶ್‌ - ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ..

ಸೂಪರ್‌ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ತಮ್ಮ ಮನೆಯಲ್ಲಿ ಮಕ್ಕಳ ಜತೆ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. 

26

ನಟ ಯಶ್‌ ರೇಷ್ಮೆ ಪಂಚೆ - ಶರ್ಟ್‌ ಧರಿಸಿ ಮಿಂಚುತ್ತಿದ್ದು, ನಟಿ ರಾಧಿಕಾ ಪಂಡಿತ್ ಸಹ ಸೀರೆ ಉಟ್ಟು ಥೇಟ್‌ ಲಕ್ಷ್ಮಿಯಂತೆ ಕಾಣಿಸುತ್ತಿದ್ದು, ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ.

36

ಯಶ್‌ - ರಾಧಿಕಾ ಮಾತ್ರವಲ್ಲ ಮಕ್ಕಳು ಸಹ ಹೊಸ ಬಟ್ಟೆಗಳನ್ನು ಧರಿಸಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮಗಲು ಆಯ್ರಾ ಅಮ್ಮನ ಜತೆಗೆ ಕುಳಿತು ವರಮಹಾಲಕ್ಷ್ಮಿ ಪೂಜೆ ಮಾಡಿದ್ದಾರೆ. 

46

ಯಶ್‌ - ರಾಧಿಕಾ ಪಂಡಿತ್ ತಾರಾ ಜೋಡಿಗಳ ಮನೆಯಲ್ಲಿ ಅದ್ಧೂರಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದು, ಲಕ್ಷ್ಮಿ ಮುಖವಾಡ ಇಟ್ಟು, ಹೂವು - ಹಣ್ಣುಗಳನ್ನಿಟ್ಟು ಪೂಜೆ ಮಾಡಿದ್ದಾರೆ. 

56

ನಟಿ ರಾಧಿಕಾ ಪಂಡಿತ್ ಹಾಗೂ ಯಶ್‌ ರಾಮಾಚಾರಿ ಚಿತ್ರದ ಜೋಡಿಗಳಂತೆ ಮಿಂಚಿದ್ದು, ರಾಧಿಕಾ ತಮ್ಮ ಮನೆಯಲ್ಲಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿರುವುದು ಕಂಡುಬಂದಿದೆ.

66

ಮಗ ಯಥರ್ವ್‌ ಸಹ ಅಪ್ಪನ ಜತೆಯಲ್ಲಿ ಪಂಚೆ ಶರ್ಟ್‌ ಧರಿಸಿ ಮಿಂಚಿದ್ದಾನೆ. ಹಾಗೂ, ವರಮಹಾಲಕ್ಷ್ಮಿ ಹಬ್ಬದಲ್ಲಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. 

Read more Photos on
click me!

Recommended Stories