ಚಿತ್ರೀಕರಣಕ್ಕೆ ಥೈಲ್ಯಾಂಡ್‌ಗೆ ಹೋಗಿರುವ ದರ್ಶನ್ ಅಲ್ಲಿ ಕುಟುಂಬ, ಗೆಳೆಯರ ಜೊತೆ ಸಂತೋಷವಾಗಿ ದಿನ ಕಳೆಯುತ್ತಿದ್ದಾರೆ. ಅವರ ಆನಂದಸಮಯದ ಫೋಟೋಗಳು ಇದೀಗ ವೈರಲ್ ಆಗಿವೆ.
25
ದರ್ಶನ್ ಸಮುದ್ರದ ಮಧ್ಯೆ ಯಾಟ್‌ನಲ್ಲಿ ಜಾಲಿ ರೈಡ್ ಮಾಡಿ, ಅಲ್ಲಿನ ಬೀಚ್‌ಗಳಲ್ಲಿ ದೈತ್ಯಾಕಾರದ ಮೀನು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಅವರು ರೂಫ್ ಟಾಪ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಗೆಳೆಯರೊಂದಿಗೆ ಇರುವ ವಿಡಿಯೋ ವೈರಲ್ ಆಗಿದೆ.
35
ಈ ವಿಡಿಯೋಗೆ ಆಕ್ಷೇಪ ವ್ಯಕ್ತವಾಗಿದ್ದು, ದರ್ಶನ್‌ಗೆ ಶೂಟಿಂಗ್‌ಗಷ್ಟೇ ಅನುಮತಿ ನೀಡಿದ್ದು, ಅವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.
ಇಂದು ಡೆವಿಲ್ ಪೋಸ್ಟರ್ ಬಿಡುಗಡೆ: ದರ್ಶನ್ ಅಭಿಮಾನಿಗಳ ನಡುವೆ ‘ದಿ ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಲಿದೆ. ಈ ಬಗ್ಗೆ ನಿರ್ದೇಶಕ ಪ್ರಕಾಶ್ ವೀರ್, ‘ಜುಲೈ 19ರಂದು ಸಂಜೆ 8 ಗಂಟೆಗೆ ಪೋಸ್ಟರ್ ಬಿಡುಗಡೆಯಾಗಲಿದೆ’ ಎಂದು ತಿಳಿಸಿದ್ದಾರೆ.
55
ಸದ್ಯ ಡೆವಿಲ್ ತಂಡ ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಹಾಡಿನ ಶೂಟಿಂಗ್ ಮಾಡುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ ಮುಖ್ಯಪಾತ್ರದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.