Dil Pasandನ ಐಶು ಸಖತ್‌ ಬೋಲ್ಡ್‌: ನಿಶ್ವಿಕಾ ನಾಯ್ಡು

Published : Oct 08, 2022, 11:22 AM IST

ನವೆಂಬರ್‌ 11ಕ್ಕೆ ದಿಲ್ ಪಸಂದ್ ಚಿತ್ರ ಬಿಡುಗಡೆ. ಡಾರ್ಲಿಂಗ್ ಕೃಷ್ಣಗೆ ಜೋಡಿಯಾದ ನಿಶ್ವಿಕಾ ಮತ್ತು ಮೇಘಾ...

PREV
16
Dil Pasandನ ಐಶು ಸಖತ್‌ ಬೋಲ್ಡ್‌: ನಿಶ್ವಿಕಾ ನಾಯ್ಡು

‘ದಿಲ್‌ಪಸಂದ್‌ ಚಿತ್ರದ ಐಶು ಪಾತ್ರದಲ್ಲಿ ನಟಿಸೋದು ಸಖತ್‌ ಚಾಲೆಂಜಿಂಗ್‌ ಆಗಿತ್ತು. ಆಕೆ ಬಹಳ ಬೋಲ್ಡ್‌. ಎಕ್ಸ್‌ಟ್ರೀಮ್‌ ಎಮೋಶನ್‌ ಇರುವ ಪಾತ್ರ. ವಿಭಿನ್ನ ಶೇಡ್‌ಗಳಿವೆ’.

26

‘ದಿಲ್‌ ಪಸಂದ್‌’ ಚಿತ್ರದ ತಮ್ಮ ಐಶು ಪಾತ್ರದ ಬಗ್ಗೆ ಮಾತನಾಡಿದ ನಿಶ್ವಿಕಾ ನಾಯ್ಡು, ‘ಬಾಯಿಬಿಟ್ಟು ಹೇಳದೇ ಮನಸ್ಸಿರುವುದನ್ನು ಕನ್ವೇ ಮಾಡಬೇಕಾದ್ದು ಮತ್ತೊಂದು ಚಾಲೆಂಜ್‌’ಎಂದರು. 

36

ಈ ಚಿತ್ರ ನವೆಂಬರ್‌ 11ಕ್ಕೆ ಬಿಡುಗಡೆಯಾಗಲಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ಶಿವತೇಜ, ‘ಇದರಲ್ಲಿ ಬರುವ ಮೂರು ಪ್ರಧಾನ ಪಾತ್ರಗಳಲ್ಲಿ ಕೃಷ್ಣ ಇನ್ನೋಸೆಂಟ್‌, ನಿಶ್ವಿಕಾ ವೈಲೆಂಟ್‌, ಮೇಘಾ ಸೈಲೆಂಟ್‌ ಪಾತ್ರಗಳಲ್ಲಿದ್ದಾರೆ.'

46

ಇಂದಿನ ಜನರೇಶನ್‌ ಕಥೆ ಇದರಲ್ಲಿದೆ. ಎಲ್ಲಾ ಜನರೇಶನ್‌ನವರಿಗೂ ಕನೆಕ್ಟ್ ಆಗುತ್ತೆ. ಡ್ರೈಫä್ರಟ್ಸ್‌ನಿಂದ ತುಂಬಿರುವ ರುಚಿಕಟ್ಟಾದ ದಿಲ್‌ಪಸಂದ್‌ ಇದು’ ಎಂದರು. ನಾಯಕ ಕೃಷ್ಣ ಮಾತನಾಡಿದ್ದಾರೆ.

56

‘ಎರಡು ಗಂಟೆ ಈ ಚಿತ್ರದ ನರೇಶನ್‌ ಕೇಳಿದಾಗ ನನ್ನ ಮುಖದಲ್ಲಿ ಕಿರುನಗುವಿತ್ತು. ಇದರಲ್ಲಿ ಪ್ರೇಮದ ಜೊತೆ ತಂದೆ, ಮಗನ ಸಂಬಂಧದ ಬಗ್ಗೆಯೂ ಹೇಳಲಾಗಿದೆ’ ಎಂದರು. 

66

ಮೇಘಾ ಶೆಟ್ಟಿಮುಗ್ಧ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಸುಮನ್‌ ಕ್ರಾಂತಿ ಅವರಿಗೆ ಈ ಸಿನಿಮಾ ನೋಡಿ ಗೆದ್ದ ಫೀಲ್‌ ಈಗಲೇ ಬಂದಿದೆಯಂತೆ. ‘ಈ ಸಿನಿಮಾ ನೋಡ್ತಾ ಒಂದು ಹಂತದಲ್ಲಿ ಕಣ್ಣಲ್ಲಿ ನೀರೇ ಬಂದಿತ್ತು’ ಎಂದೂ ಸುಮನ್‌ ಹೇಳಿದರು.

Read more Photos on
click me!

Recommended Stories