ಕನ್ನಡ ಚಿತ್ರರಂಗದ ಮುದ್ದಾದ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ತಮ್ಮ ಮಗಳು ಪರಿಯ ಮೊದಲನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ಡಾರ್ಲಿಂಗ್ ಕೃಷ್ಣಾ (Darling Krishna), ಮಿಲನಾ ಕೃಷ್ಣ ದಾಂಪತ್ಯದಲ್ಲಿ ಬಿರುಕು ಎನ್ನುವ ರೂಮರ್ಸ್ ನಡುವೆಯೇ ಚಂದನವನದ ಮುದ್ದಾದ ತಾರಾ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಗಳ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
28
ಹೌದು, ಇತ್ತೀಚೆಗೆ ಕೃಷ್ಣ ಮಿಲನಾ (Milana Nagraj)ದಂಪತಿಗಳ ಮುದ್ದು ಮಗಳು ಪರಿ ತಮ್ಮ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ತಾರಾ ಜೋಡಿಗಳು ಮಗಳ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
38
ಮನೆಯಲ್ಲಿಯೇ ಈ ಜೋಡಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಪರಿಗೆ ಪೀಚ್ ಬಣ್ಣದ ಬಟ್ಟೆ ತೊಡಿಸಿ, ಪಿಂಕ್ ಬಣ್ಣದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಲೂನ್ ಡೆಕೊರೇಶನ್ ಹಿನ್ನೆಲೆಯಲ್ಲಿ ಪರಿ ಅಮ್ಮ-ಅಪ್ಪನ ಜೊತೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 5ರಂದು ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಮ್ಮ ಮುದ್ದಿನ ಮಗಳನ್ನು, ಅದ್ಧೂರಿಯಾಗಿ ಮನೆಗೆ ವೆಲ್ ಕಂ ಮಾಡಿಕೊಂಡಿದ್ದರು. ಆ ವಿಡಿಯೋ ಹಾಗೂ ಮಗುವಿನ ಫೋಟೊ ಶೂಟ್ ಶೇರ್ ಮಾಡುವ ಮೂಲಕ ತಮ್ಮ ಪರಿಯ ಹುಟ್ಟನ್ನು ಸಂಭ್ರಮಿಸಿದ್ದರು.
58
ಬರೋಬ್ಬರಿ ಆರು ವರ್ಷ ಪ್ರೀತಿಸಿ, 2021ರಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಮೂರು ವರ್ಷಗಳ ಬಳಿಕ ಈ ಸೆಲೆಬ್ರಿಟಿ ಜೋಡಿ ಮುದ್ದಿನ ಮಗಳನ್ನು ತಮ್ಮ ಜೀವನದಲ್ಲಿ ಬರಮಾಡಿಕೊಂಡಿದ್ದರು.
68
ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟಿವ್ ಆಗಿರುವ ಮಿಲನಾ ಮತ್ತು ಕೃಷ್ಣಾ ಇಬ್ಬರು ಹೆಚ್ಚಾಗಿ ಪರಿ ಜೊತೆಗಿನ ವಿಡಿಯೋ, ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಗಳು ಹೇಗೆ ಅಮ್ಮ ಎನ್ನುವ ಬದಲು ಅಪ್ಪ ಎನ್ನುತ್ತಾಳೆ, ಯಾವಾ ಹಾಡು ಇಷ್ಟ ಅನ್ನೋದನ್ನೆಲ್ಲಾ ತಿಳಿಸುತ್ತಿರುತ್ತಾರೆ.
78
ಮಗುವಾದ ಬಳಿಕ ಮಿಲನಾ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಬಳಿಕ ತಮ್ಮ ಸಿನಿಮಾ ಪ್ರೊಮೋಷನ್ ಕೂಡ ಮಾಡಿದ್ದರು. ಆದರೆ ಡಾರ್ಲಿಂಗ್ ಕೃಷ್ಣಾ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
88
ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಫ್ಯಾಮಿಲಿ ಕೋರ್ಟಲ್ಲಿ (family court) ಕಾಣಿಸಿಕೊಂಡು ಭಾರಿ ವಿವಾದ ಸೃಷ್ಟಿಯಾಗಿತ್ತು, ಆದರೆ ಕೃಷ್ಣಾ ಲವ್ ಮಾಕ್ಟೇಲ್ 3 ವಿಚಾರವಾಗಿ ಕೋರ್ಟ್ ಗೆ ಭೇಟಿ ಕೊಟ್ಟಿದ್ದು ಎನ್ನುವುದು ನಂತರ ತಿಳಿದು ಬಂದಿದೆ. ಲವ್ ಮಾಕ್ಟೇಲ್ ಸಿನಿಮಾದ ಮೊದಲೆರಡು ಭಾಗಗಳು ಯಶಸ್ಸು ಕಂಡಿದ್ದವು. ಇದೀಗ ಮೂರನೇ ಭಾಗ ತಯಾರಾಗುತ್ತಿದೆ.