ಚಿರು ಮೀರಿಸುತ್ತಾನೆ ರಾಯನ್ ರಾಜ್ ಸರ್ಜಾ; ಮೇಘನಾ ಪುತ್ರನ ಲೇಟೆಸ್ಟ್‌ ಫೋಟೋಗಳು

First Published | Apr 26, 2023, 1:18 PM IST

ವೈರಲ್ ಆಯ್ತು ರಾಯನ್ ರಾಜ್ ಸರ್ಜಾ ಲೇಟೆಸ್ಟ್‌ ಫೋಟೋಗಳು. ತಂದೆಗೆ ತಕ್ಕ ಮಗ ಎಂದ ನೆಟ್ಟಿಗರು.....

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಹಾಲಿಡೆ ಎಂಜಾಯ್ ಮಾಡುತ್ತಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಮತ್ತು ರಾಯನ್ ರಾಜ್‌ ಸರ್ಜಾ ಹೆಸರಿನಲ್ಲಿ ಫ್ಯಾನ್ ಪೇಜ್‌ ಓಪನ್ ಮಾಡಿದ್ದಾರೆ. ಆ ಪೇಜ್‌ನಲ್ಲಿ ಸಾಕಷ್ಟು ಫೋಟೋಗಳು ಅಪ್ಲೋಡ್ ಆಗಿದೆ. 

Tap to resize

2 ವರ್ಷದ ರಾಯನ್ ಮುದ್ದು ಮುದ್ದಾಗಿ ಮಾತನಾಡಲು ಶುರು ಮಾಡಿದ್ದಾರೆ. ಮಗನನ್ನು ಸಖತ್ ಸ್ಟೈಲಿಶ್ ಆಗಿ ರೆಡಿ ಮಾಡುವ ಮೇಘನಾ ಕೂಡ ಆಗಾಗ ಫೋಟೋ ಅಪ್ಲೋಡ್ ಮಾಡುತ್ತಾರೆ. 

ರಾಯನ್ ನೋಡಲು ಸೇಮ್ ಚಿರು ರೀತಿ, ನಗುವಿನಲ್ಲಿ ತಂದೆಯನ್ನು ಮೀರಿಸುತ್ತಾನೆ, ಚಿತ್ರರಂಗಕ್ಕೆ ಬರಲಿರುವ ಮತ್ತೊಂದು ಕುಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಕಿರುತೆರೆ ರಿಯಾಲಿಟಿ ಶೋ, ಯುಟ್ಯೂಬ್ ಶೂಟ್ ಹಾಗೂ ತತ್ಸಮ ತದ್ಬವ ಸಿನಿಮಾ ಚಿತ್ರೀಕರಣದಿಂದ ಸಣ್ಣ ಬ್ರೇಕ್ ತೆಗೆದುಕೊಂಡು ರಾಯನ್‌ ಜೊತೆ ಟ್ರಿಪ್ ಎಂಜಾಯ್ ಮಾಡಿದ್ದಾರೆ. 

ರಾಯನ್ ತುಂಬಾನೇ ತುಂಟ..ಸದಾ ಆಟವಾಡುತ್ತಿರಬೇಕು ಸ್ನೇಹಿತರು ಬೇಕು ಎನ್ನುತ್ತಾರೆ. ಕೀ ಬೋರ್ಡ್‌ ನುಡಿಸುವ ವಿಡಿಯೋಗಳು ತುಂಬಾ ಇದೆ ಎಂದು ಇತ್ತೀಚಿಗೆ ಮೇಘನಾ ಹೇಳಿದ್ದರು.

Latest Videos

click me!