ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಜೋಡಿಯಾಗಿ ಅಭಿನಯಿಸಿರುವ ಅಭಿ ಸಿನಿಮಾ ರಿಲೀಸ್ ಆಗಿ 20 ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ರಮ್ಯಾ ಪೋಸ್ಟ್ ಬರೆದುಕೊಂಡಿದ್ದಾರೆ.
'ನನ್ನ ಮೊದಲ ಸಿನಿಮಾ ಅಭಿ ರಿಲೀಸ್ ಆಗಿ 20 ವರ್ಷ ಕಳೆದಿದೆ. ನಿಮ್ಮ ಜೊತೆ ನಾನು ಹಂಚಿಕೊಳ್ಳುತ್ತಿರುವ ಅದ್ಭುತ ಕ್ಷಣಗಳ ಫೋಟೋ' ಎಂದು ರಮ್ಯಾ ಬರೆದುಕೊಂಡಿದ್ದಾರೆ.
'ಈ ಮೊದಲು ಫೋಟೋವನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್‌ನಲ್ಲಿ ಸುಮ್ ಸುಮ್ಮನೆ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತು ಆಗ ಕ್ಲಿಕ್ ಮಾಡಿದ ಫೋಟೋಗಳಿದು'
'ಎರಡನೇ ಫೋಟೋವನ್ನು ಚಿಕ್ಕಮಗಳೂರಿನಲ್ಲಿ ನೀ ನನ್ನ ಕಣ್ಣಾಣೆ ಹಾಡನ್ನು ಚಿತ್ರೀಕರಣ ಮಾಡಿದ ಕೊನೆ ದಿನ ಕ್ಲಿಕ್ ಮಾಡಿದ ಫೋಟೋ'
'ಮೂರನೇ ಫೋಟೋವನ್ನು ಅಭಿ (Abhi) ಸಿನಿಮಾ ರಿಲೀಸ್ ಆದ ಮೇಲೆ ನನ್ನ ತಂದೆ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಕ್ಲಿಕ್ ಮಾಡಿದ್ದು'
'ಈ ಕೊನೆಯ ಫೋಟೋವನ್ನು ಅಭಿ 100 ದಿನದ ಸಕ್ಸಸ್ ಸಂಭ್ರಮದಲ್ಲಿ ಕ್ಲಿಕ್ ಮಾಡಿರುವುದು. ಅಪ್ಪಾಜಿ ನನಗೆ ಆಶೀರ್ವಾದ ಮಾಡುತ್ತಿರುವ ಕ್ಷಣ'
'ಸಿನಿಮಾ ಚಿತ್ರೀಕರಣದ ಮೊದಲ ದಿನ ತುಂಬಾನೇ ಭಯ ಆಗುತ್ತಿತ್ತು ಎಂದು ಅತ್ತಿದ್ದೆ...ಅದೇ ಸಿನಿಮಾ ಕೊನೆ ಚಿತ್ರೀಕರಣದ ದಿನ ತಂಡ ಬಿಟ್ಟು ಹೋಗಬೇಕು ಎಂದು ಅತ್ತಿದ್ದೆ. ತಂಡಕ್ಕೆ ಅಷ್ಟು ಹೊಂದುಕೊಂಡಿದ್ದೆ'
'ಅಭಿಮಾನಿಗಳಿಂದ ಪಡೆದಿರುವ ಪ್ರೀತಿಗೆ ನಾನು ಸದಾ ಚಿರ ಋಣಿ. ನನಗೆ ಈ ಅವಕಾಶ ಕೊಟ್ಟ ರಾಜ್‌ಕುಮಾರ್ ಕುಟುಂಬಕ್ಕೂ ಋಣಿ ಮತ್ತು ಧನ್ಯವಾದಗಳು.ಅಪ್ಪು ನನ್ನ ಮೊದಲ ಸ್ನೇಹಿತ ಹಾಗೂ ನನ್ನ ನೆಚ್ಚಿನ ಸಹ ಕಲಾವಿದ/ನಟ' ಎಂದು ರಮ್ಯಾ ಬರೆದುಕೊಂಡಿದ್ದಾರೆ.