ಬಿಕಿನಿ ಹಾಕಿದ್ದೀನಿ ಅಂತ ಬಿಕಿನಿ ಫೋಟೋ ಕೇಳ್ಬೆಡಿ; ನೆಟ್ಟಿಗರಿಗೆ ಶಾನ್ವಿ 'ಮಾಸ್ಟರ್ ಪೀಸ್' ಡೈಲಾಗ್

First Published | Apr 26, 2023, 9:27 AM IST

ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ನಟಿ ಶಾನ್ವಿ. ಹಾಟ್ ಫೋಟೋ ಹಾಕಿ ಅಂತ ಹೇಳ ಬೇಡಿ ಎಂದ ನಟಿ....

2014ರಲ್ಲಿ ಚಂದ್ರಲೇಖ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶಾನ್ವಿ ಶ್ರೀವಾತ್ಸವ್‌ ಸದ್ಯ ಸಮ್ಮರ್ ಎಂಜಾಯ್ ಮಾಡುತ್ತಿದ್ದಾರೆ. 

ಬಿಳಿ ಬಣ್ಣದ ಬಿಕಿನಿ ಧರಿಸಿ ಸಮುದ್ರ ನೋಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಟಿ ತಾನ್ಯ ಹೋಪ್ ಸೇರಿದಂತೆ ಹಲವು ನಟಿಯರು ಕಾಮೆಂಟ್ ಮಾಡಿದ್ದಾರೆ. 

Tap to resize

' ರಜಾ ಎಂಜಾಯ್ ಮಾಡುವ ಸಮಯ ಬಂದಿದೆ. ನಿಮ್ಮ ಟೈಮ್‌ ಲೈನ್‌ನಲ್ಲಿ ನನ್ನದೇ ಫೋಟೋ ಇರುತ್ತದೆ' ಎಂದು ಶಾನ್ವಿ ಬರೆದುಕೊಂಡು ಕೊನೆಯಲ್ಲಿ ಬಿಕಿನಿ ಫೋಟೋಗಳ ನಿರೀಕ್ಷೆಯಲ್ಲಿ ಇರಬೇಡಿ ಎಂದಿದ್ದಾರೆ. 

ಬಿಕಿನಿ ಫೋಟೋ ಹಾಕಲ್ಲ ಅಂದ್ಮೇಲೆ ಬಿಕಿನಿ ಹಾಕಿದ್ದೀನಿ ಎಂದು ಯಾಕೆ ಹೇಳಬೇಕು? ರಜಾ ಮಜಾ ಬಗ್ಗೆ ಸುಳಿವು ನೀಡಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಮಹಾ ವೀರಯ್ಯ ಸಿನಿಮಾ ಮೂಲಕ ಈ ವರ್ಷ ಶಾನ್ವಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ದೇವಯಾನಿ ಪಾತ್ರದ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. 

2023ರಲ್ಲಿ ತ್ರಿಷೂಲಮ್ ಮತ್ತು ಬ್ಯಾಂಗ್ ಅನ್ನೋ ಕನ್ನಡ ಸಿನಿಮಾದಲ್ಲಿ ಶಾನ್ವಿ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದು ರಿಲೀಸ್‌ಗೆ ಸಜ್ಜಾಗುತ್ತಿದೆ. 

Latest Videos

click me!