ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ, ತಮ್ಮ ನಿರ್ಮಾಣದ 'ಕೋಣ' ಚಿತ್ರದ ಪೈರಸಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳ ಯುದ್ಧ ಮತ್ತು ಪ್ರಪೋಗಂಡಾದಿಂದ ಚಿತ್ರರಂಗಕ್ಕಾಗುತ್ತಿರುವ ನಷ್ಟದ ಬಗ್ಗೆ ಮಾತನಾಡಿದ್ದಾರೆ
ಸ್ಟಾರ್ ನಟರು ಎಂದ ಮೇಲೆ ಅವರಿಗೆ ಒಂದಿಷ್ಟು ಅಭಿಮಾನಿಗಳು ಇದ್ದೇ ಇರುತ್ತಾರೆ. ನಟರು ಸುಮ್ಮನೇ ಇದ್ದರೂ ಅವರ ಅಭಿಮಾನಿಗಳ ಯುದ್ಧ ನಡೆದೇ ಇರುತ್ತದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಗೂಬೆ ಕೂಡ್ರಿಸುವುದು, ಅವರ ಸಿನಿಮಾ ನೋಡದಂತೆ ಇವರು, ಇವರ ಸಿನಿಮಾ ನೋಡದಂತೆ ಅವರು ಪ್ರಪೋಗಂಡಾ ಮಾಡುವುದು ಇರುವ ನಡುವೆಯೇ ಪೈರಸಿ ಎನ್ನುವುದು ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
25
ನೇರಪ್ರಸಾರದಲ್ಲಿ ತನಿಷಾ ಕುಪ್ಪಂಡ
ಇದೀಗ ಇದರ ಬಗ್ಗೆ ನೇರಪ್ರಸಾರದಲ್ಲಿ ಬಂದು Bigg Boss ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಅವರು ಇಂಥವರ ಬಗ್ಗೆ ಮಾತನಾಡಿದ್ದಾರೆ. ತನಿಷಾ ಅವರು ಕೋಣ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಕಾಲಿಟ್ಟಿದ್ದಾರೆ. ಆದರೆ ಕೋಣ ಚಿತ್ರವನ್ನು ನೋಡಲು ವೀಕ್ಷಕರು ಥಿಯೇಟರಿಗೆ ಬರದ ಬಗ್ಗೆ ನೋಡಿದಾಗ, ಚಿತ್ರ ರಿಲೀಸ್ ಆದ ಎರಡೇ ದಿನಕ್ಕೆ ಅದು ಟೆಲಿಗ್ರಾಮ್ ಮಾತ್ರವಲ್ಲದೇ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಪೈರಸಿ ಆಗಿ ವೈರಲ್ ಆಗಿರುವುದು ತಿಳಿದಿದ್ದು, ಇದರ ಬಗ್ಗೆ ನೋವು ತೋಡಿಕೊಂಡಿದ್ದಾರೆ ತನಿಷಾ.
35
ಫ್ಯಾನ್ಸ್ ವಾರ್
'ಕೋಣ ಮಾತ್ರವಲ್ಲ, (Kona Movie) ಪ್ರತಿಯೊಂದು ಸಿನಿಮಾ ಕಥೆಯೂ ಇದೇ ಆಗಿದೆ. ಅದರಲ್ಲಿಯೇ ಸ್ಟಾರ್ ನಟರು ಚಿತ್ರ ಮಾಡಿದಾಗ ಫೇಕ್ ಅಕೌಂಟ್ನಿಂದ ಫ್ಯಾನ್ಸ್ ವಾರ್ ಕ್ರಿಯೇಟ್ ಮಾಡಿ ಪ್ರಪೋಗಂಡಾ ಮಾಡುತ್ತಿದ್ದಾರೆ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಮಾತನಾಡಿ ಸಿನಿಮಾಗಳ ಬಗ್ಗೆ ಕೆಟ್ಟ ಮಾಹಿತಿ ನೀಡುತ್ತಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವ ಮೂಲಕ ಸಿನಿಮಾವನ್ನು ನೋಡದ ಹಾಗೆ ಮಾಡುತ್ತಿದ್ದಾರೆ' ಎಂದು ನಟಿ ಹೇಳಿದ್ದಾರೆ.
ಇಂಥವರ ವಿರುದ್ಧ ಇದೇ 20ರಂದು ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸ್ ಇಲಾಖೆ ಮತ್ತು ವಾಣಿಜ್ಯ ಮಂಡಳಿ ನಮ್ಮ ಸಪೋರ್ಟ್ಗೆ ಇದೆ ಎಂದಿರುವ ತನಿಷಾ ಕುಪ್ಪಂಡ, ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಕೋರಿಕೊಂಡಿದ್ದಾರೆ.
55
ವೈಯಕ್ತಿಕ ಮಾಹಿತಿ ಸೋರಿಕೆ
ಫ್ಯಾನ್ಸ್ ವಾರ್ ಶುರುವಾಗಿ ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಾಗ ಜನರು ಕೂಡ, ಬಿಡು ಇನ್ನೊಂದೆರಡು ದಿನಗಳಲ್ಲಿ ಜಾಲತಾಣದಲ್ಲಿ ಬರುತ್ತದೆ, ನೋಡಿದ್ದರಾಯ್ತು ಎಂದು ಸುಮ್ಮನಾಗುತ್ತಿದ್ದಾರೆ ಎಂದಿರುವ ತನಿಷಾ ಇಂಥ ಫೇಕ್ ಲಿಂಕ್ಗಳನ್ನು ಓಪನ್ ಮಾಡಿದರೆ ನೀವು ಮೋಸ ಹೋಗುತ್ತೀರಿ, ನಿಮ್ಮ ಪರ್ಸನಲ್ ಡಾಟಾ ಇಂಥವರ ಕೈಸೇರಿ ಅವರು ನಿಮ್ಮ ವೈಯಕ್ತಿಯ ಮಾಹಿತಿಗಳನ್ನು ಬಳಸಿಕೊಂಡು ಕೆಟ್ಟ ಉದ್ದೇಶಕ್ಕೆ ಬಳಸುತ್ತಾರೆ. ಇದರಿಂದ ನೀವು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.