ಪೈರಸಿ ಯುದ್ಧದಿಂದ ನಿಲ್ಲಲ್ಲ, ಸರ್ಕಾರದ ನೆರವು ಅಗತ್ಯ: ಹಾಸ್ಯ ನಟ ಸಾಧು ಕೋಕಿಲ ಹೇಳಿದ್ದೇನು?

Published : Dec 24, 2025, 10:44 AM IST

ಪೈರಸಿ ದೊಡ್ಡ ಪಿಡುಗು. ಅದನ್ನು ಎಷ್ಟೇ ನಿಲ್ಲಿಸಲು ಪ್ರಯತ್ನಿಸಿದರೂ ಮತ್ತೆ ಹುಟ್ಟಿಕೊಳ್ಳುತ್ತಿದೆ. ಹಾಗಂತ, ಪೈರಸಿಯನ್ನು ಯುದ್ಧ ಮಾಡಿ ನಿಲ್ಲಿಸಲಾಗದು ಎಂದು ಚಲನಚಿತ್ರ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.

PREV
15
ಯುದ್ಧ ಮಾಡಿ ನಿಲ್ಲಿಸಲಾಗದು

ಬೆಂಗಳೂರು (ಡಿ.24): ಪೈರಸಿ ದೊಡ್ಡ ಪಿಡುಗು. ಅದನ್ನು ಎಷ್ಟೇ ನಿಲ್ಲಿಸಲು ಪ್ರಯತ್ನಿಸಿದರೂ ಮತ್ತೆ ಹುಟ್ಟಿಕೊಳ್ಳುತ್ತಿದೆ. ಹಾಗಂತ, ಪೈರಸಿಯನ್ನು ಯುದ್ಧ ಮಾಡಿ ನಿಲ್ಲಿಸಲಾಗದು ಎಂದು ಚಲನಚಿತ್ರ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.

25
ಈಗಿನಿಂದ ಪೈರಸಿ ನಡೆಯುತ್ತಿಲ್ಲ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರರಂಗದಲ್ಲಿ ಪೈರಸಿ ಈಗಿನಿಂದ ನಡೆಯುತ್ತಿಲ್ಲ. ಅದನ್ನು ನಿಲ್ಲಿಸಲು ಎಷ್ಟೆಷ್ಟೋ ಪ್ರಯತ್ನಗಳಾಗಿವೆ. ಆದರೂ, ಪೈರಸಿಗಳು ಹುಟ್ಟಿಕೊಳ್ಳುತ್ತಿದೆ. ಪೈರಸಿ ನಿಲ್ಲಿಸಲು ಸರ್ಕಾರದ ನೆರವು ಬೇಕು ಎಂದರು.

35
ವಿಕೃತ ಖುಷಿಗಾಗಿ ಕಾಮೆಂಟ್‌

ನಟರಾದ ಸುದೀಪ್‌ ಮತ್ತು ದರ್ಶನ್‌ ಪತ್ನಿ ನಡುವಿನ ಹೇಳಿಕೆಗಳ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲನಚಿತ್ರ ನಿರ್ದೇಶಕ ತರುಣ್‌ ಸುಧೀರ್‌, ಸುದೀಪ್‌ ಮತ್ತು ದರ್ಶನ್‌ ಅವರ ಅಭಿಮಾನಿಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ವಿಕೃತ ಖುಷಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಅದು ಮೊದಲು ನಿಲ್ಲಬೇಕು.

45
ಅದರ ಬಗ್ಗೆ ನನ್ನ ಕೇಳ್ಬೇಡಿ

ನಾನು ಯಾರ ಬಗ್ಗೆನೂ ಮಾತನಾಡಿಲ್ಲ. ಯಾರನ್ನು ಉದ್ದೇಶಿಸಿ ಮಾತನಾಡಿಲ್ಲ. ನನ್ನ ಮಾತು ನೇರವಾಗಿಯೇ ಪೈರಸಿಯ ವಿಚಾರಕ್ಕೇನೆ ಸಂಬಂಧಿಸಿದ್ದೇ ಆಗಿದೆ. ಆದರೆ, ನನ್ನ ಮಾತಿನ ಬಳಿಕ ಅದ್ಯಾರೊ ಮಾತನಾಡಿದ್ದಾರೆ ಅಂದ್ರೆ ಅದರ ಬಗ್ಗೆ ನನ್ನ ಕೇಳ್ಬೇಡಿ, ಅವರನ್ನು ಹೋಗಿ ಕೇಳಿ.

55
ಆಗ ನಾನು ರಿಯಾಕ್ಟ್ ಮಾಡುತ್ತೇನೆ

ನೀವು ಯಾರ ಬಗ್ಗೆ ಮಾತನಾಡಿದ್ದಿರಿ ಅಂತ ಅವರನ್ನೆ ಹೋಗಿ ಕೇಳಿ. ಅವರ ನನ್ನ ಹೆಸರು ಹೇಳಿದರೆ ಆಯಿತು. ಆಗ ನಾನು ರಿಯಾಕ್ಟ್ ಮಾಡುತ್ತೇನೆ. ಆದರೆ, ಒಂದು ವೇಳೆ ಅವರು ನನ್ನ ಹೆಸರು ತೆಗೆದುಕೊಂಡಿದ್ದರೇ ನಾನು ಅದರ ಬಗ್ಗೆ ಹೇಳುತ್ತಿದ್ದೆ ಎಂದು ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories