ಪಂಜಾಬಿ ಮೂಲ ನನ್ನದು. ಮಾಡೆಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆಗ ಸಿಕ್ಕಿದ್ದೇ ‘ಹೋಳಿ’ ಚಿತ್ರ. ಇದು ನಾನು ನಟಿಸಿದ ಮೊದಲ ಚಿತ್ರ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.
‘ನಾನು ಬೇರೆ ರಾಜ್ಯದಲ್ಲಿ ಹುಟ್ಟಿದ್ದರೂ ಕನ್ನಡ ಚಿತ್ರರಂಗ ಬದುಕು ನೀಡಿದೆ. ಜೀವನದ ಕೊನೆಗಳಿಗೆ ತನಕ ಕನ್ನಡ ನಾಡಿನ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ. ಪರಭಾಷೆಯಲ್ಲಿ ನಟಿಸುವಾಗ ನನ್ನನ್ನು ಕನ್ನಡದ ನಟಿ ಎಂದು ಗುರುತಿಸುತ್ತಾರೆ’.
27
ಭಾವುಕರಾದ ರಾಗಿಣಿ ದ್ವಿವೇದಿ
ಹೀಗೆ ಹೇಳಿಕೊಂಡಿದ್ದು ರಾಗಿಣಿ ದ್ವಿವೇದಿ. ಕನ್ನಡ ಚಿತ್ರರಂಗಕ್ಕೆ ಬಂದು 15 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಗಿಣಿ ತಮ್ಮ ಪಯಣದ ಕುರಿತು ಭಾವುಕರಾಗಿ ಮಾತನಾಡಿದರು.
37
ವೀರ ಮದಕರಿ ನನಗೆ ವಿಶೇಷ ಸಿನಿಮಾ
ಪಂಜಾಬಿ ಮೂಲ ನನ್ನದು. ಮಾಡೆಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆಗ ಸಿಕ್ಕಿದ್ದೇ ‘ಹೋಳಿ’ ಚಿತ್ರ. ಇದು ನಾನು ನಟಿಸಿದ ಮೊದಲ ಚಿತ್ರ. ಆದರೆ, ಮೊದಲು ಬಿಡುಗಡೆ ಆಗಿದ್ದು ‘ವೀರ ಮದಕರಿ’. ಹೀಗಾಗಿ ನನಗೆ ಈ ಸಿನಿಮಾ ವಿಶೇಷ. ಈಗ ಮೋಹನ್ ಲಾಲ್ ಜೊತೆಗೆ ಕಾಣಿಸಿಕೊಂಡಿರುವ ‘ವೃಷಭ’ ಚಿತ್ರದವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ.
ನನ್ನ ಪಯಣದ ಹಾದಿ ಮಲ್ಲಿಗೆಯ ಹಾದಿಯಾಗಿರಲಿಲ್ಲ. ಬದಲಾಗಿ ಮುಳ್ಳಿನ ಹಾದಿಯಾಗಿತ್ತು. ಆದರೂ ಆ ಮುಳ್ಳಿನ ಹಾದಿಯಲ್ಲೇ ಬದುಕು ಕಂಡುಕೊಂಡೆ. ನಾನು ಸ್ಟ್ರಾಂಗ್ ಲೇಡಿ ಎಂಬುದನ್ನು ನನಗೇ ನಾನೇ ಸಾಬೀತು ಮಾಡಿಕೊಳ್ಳುತ್ತಾ ಬಂದೆ.
57
ಕಿಚ್ಚ ಸುದೀಪ್ ಅವರಿಂದ ಸಾಕಷ್ಟು ಕಲಿತೆ
‘ವೀರ ಮದಕರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಂದ ಸಾಕಷ್ಟು ಕಲಿತೆ. ಈ ಕಲಿಕೆ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಆ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪರಭಾಷೆಗೂ ಹೋಗಿ ನಟಿಸಿದ್ದೇನೆ. ಎಲ್ಲೇ ಹೋಗಿ ನಟಿಸಿದರೂ ಕನ್ನಡವೇ ನನ್ನ ಮನೆ.
67
ಕಣ್ಣಲ್ಲಿ ನೀರು ಬರುತ್ತದೆ
ಕಷ್ಟದಲ್ಲಿದ್ದಾಗ ಯಾರೂ ನೆರವಿಗೆ ಬರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ. ನಾನು ಕಷ್ಟದ ಸಮಯದಲ್ಲಿ ಎಲ್ಲರ ಜೊತೆ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ. ಹಿಂದಿನದನ್ನು ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಪರಭಾಷೆಯವರು ಕೊಡುವ ಪ್ರೀತಿಯನ್ನು ಕನ್ನಡದ ಮಂದಿ ಕೊಡಲಿಲ್ಲವಲ್ಲಾ ಎನ್ನುವ ಬೇಸರವೂ ಇದೆ.
77
ಆ ಪಾತ್ರ ಇಷ್ಟವಾಗಲಿಲ್ಲ
ಪಾತ್ರಗಳ ಆಯ್ಕೆಯಲ್ಲಿ ಚೂಸಿಯಾಗಿದ್ದೇನೆ. ದರ್ಶನ್ ಅವರ ‘ದಿ ಡೆವಿಲ್’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ನಾನು ನಟಿಸಬೇಕಿತ್ತು. ಆದರೆ, ಆ ಪಾತ್ರ ಇಷ್ಟವಾಗಲಿಲ್ಲ. ಹೀಗಾಗಿ ನಟಿಸುವುದಿಲ್ಲ ಎಂದು ಹೇಳಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.