ರಮೇಶ್‌-ಗಣೇಶ್‌ ಚಿತ್ರಕ್ಕೆ ನಾಯಕಿಯಾಗಿ ಭಾವನಾ: ಹಾಗಿದ್ರೆ ಸಿಕ್ಸ್ ಪ್ಯಾಕ್ ಸುಂದರಿ ಕತೆಯೇನು?

Published : Apr 18, 2025, 04:58 PM ISTUpdated : Apr 18, 2025, 05:10 PM IST

‘ಯುವರ್ಸ್‌ ಸಿನ್ಸಿಯರ್ಲಿ ರಾಮ್‌’ ಸಿನಿಮಾದಲ್ಲಿ ಜತೆಯಾಗಿ ನಟಿಸುತ್ತಿರುವ ರಮೇಶ್‌ ಅರವಿಂದ್‌- ‘ಗೋಲ್ಡನ್‌ ಸ್ಟಾರ್‌’ ಗಣೇಶ್‌. ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾಕ್ಕೆ ನಾಯಕಿಯಾಗಿ ಭಾವನಾ ಆಯ್ಕೆ. ನಿರ್ಮಾಪಕ ಎ.ಆರ್‌. ವಿಖ್ಯಾತ್‌ರಿಂದ ನಿರ್ದೇಶನ.

PREV
15
ರಮೇಶ್‌-ಗಣೇಶ್‌ ಚಿತ್ರಕ್ಕೆ ನಾಯಕಿಯಾಗಿ ಭಾವನಾ: ಹಾಗಿದ್ರೆ ಸಿಕ್ಸ್ ಪ್ಯಾಕ್ ಸುಂದರಿ ಕತೆಯೇನು?

ನಿರ್ಮಾಪಕ ಎ.ಆರ್‌. ವಿಖ್ಯಾತ್‌ ನಿರ್ದೇಶನದ ‘ಯುವರ್ಸ್‌ ಸಿನ್ಸಿಯರ್ಲಿ ರಾಮ್‌’ ಚಿತ್ರಕ್ಕೆ ಭಾವನಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಆಗಿದ್ದು, ಚಿತ್ರದ ಮೇಲೆ ಕುತೂಹಲ ಮೂಡಿಸಿದೆ. 

25

ಅಲ್ಲದೆ ನಟರಾದ ರಮೇಶ್‌ ಅರವಿಂದ್‌ ಹಾಗೂ ಗಣೇಶ್‌ ಕಾಂಬಿನೇಶನ್‌ ಚಿತ್ರ ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಸತ್ಯ ರಾಯಲ ನಿರ್ಮಾಣದ ಈ ಚಿತ್ರದ ಮೂಲಕ 1990ರ ದಶಕದ ಕತೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಈಗಾಗಲೇ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ.

35

ಈ ಚಿತ್ರವು ಯುದ್ಧ, ಪ್ರೀತಿ ಮತ್ತು ಸ್ನೇಹದ ಹಿನ್ನೆಲೆಯಲ್ಲಿ ಮೂಡಿ ಬರಲಿದೆ ಎಂಬುದು ಟೀಸರ್‌ ನೋಡಿದವರು ಮಾತನಾಡುತ್ತಿದ್ದಾರೆ. ಅಂದಹಾಗೆ ಈ ಹಿಂದೆ ರಮೇಶ್‌ ಅರವಿಂದ್‌ ಅವರು, ಗಣೇಶ್‌ ನಟನೆಯ ‘ಸುಂದರಾಂಗ ಜಾಣ’ ಚಿತ್ರವನ್ನು ನಿರ್ದೇಶಿಸಿದ್ದರು.

45

‘ಯುವರ್‌ ಸಿನ್ಸಿಯರ್ಲೀ ರಾಮ್’ ಸಿನಿಮಾಕ್ಕೆ ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು ಅವರು ಕೂಡಾ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಗಣೇಶ್‌ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಒಂದು ಹಾಡಿನ ಶೂಟಿಂಗ್‌ ಪೂರ್ಣವಾಗಿದೆ. ಜನಪ್ರಿಯ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

55

ಈ ಹಿಂದೆ ‘ಸಕತ್‌’ ಸಿನಿಮಾದಲ್ಲೂ ಗಣೇಶ್‌ ಹಾಗೂ ನಿಶ್ವಿಕಾ ನಾಯಕ ನಾಯಕಿಯಾಗಿ ನಟಿಸಿದ್ದರು. ಸದ್ಯ ಈ ಜೋಡಿಯ ‘ಯುವರ್‌ ಸಿನ್ಸಿಯರ್ಲೀ ರಾಮ್‌’ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

Read more Photos on
click me!

Recommended Stories