Photos: ಪರದೇಶದ ಹುಡುಗನ ಜೊತೆ ಎಂಗೇಜ್‌ ಆದ ಅರ್ಜುನ್‌ ಸರ್ಜಾ 2ನೇ ಮಗಳು ಅಂಜನಾ! 13 ವರ್ಷದ ಲವ್

Published : Apr 17, 2025, 05:58 PM ISTUpdated : Apr 18, 2025, 08:55 AM IST

ಖ್ಯಾತ ನಟ ಅರ್ಜುನ್‌ ಸರ್ಜಾ ಅವರು ಕಳೆದ ವರ್ಷವಷ್ಟೇ ಮೊದಲ ಮಗಳು ಐಶ್ವರ್ಯಾ ಮದುವೆ ಮಾಡಿದ್ದರು. ಈಗ ಎರಡನೇ ಮದುವೆ ಮಾಡಲು ರೆಡಿಯಾಗಿದ್ದಾರೆ. ಮೊದಲು ಮಗಳು ಐಶ್ವರ್ಯಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಮದುವೆಯಾಗಿದ್ದರೆ, ಎರಡನೇ ಮಗಳು ಅಂಜನಾ ಪರದೇಶದ ಹುಡುಗನ ಜೊತೆ ಎಂಗೇಜ್‌ ಆಗಿದ್ದಾರೆ. 

PREV
17
Photos: ಪರದೇಶದ ಹುಡುಗನ ಜೊತೆ ಎಂಗೇಜ್‌ ಆದ ಅರ್ಜುನ್‌ ಸರ್ಜಾ 2ನೇ ಮಗಳು ಅಂಜನಾ! 13 ವರ್ಷದ ಲವ್

ಅರ್ಜುನ್‌ ಸರ್ಜಾ ಅವರ ಎರಡನೇ ಮಗಳು ಅಂಜನಾ ಕೂಡ ಈಗ ಎಂಗೇಜ್‌ ಆಗಿದ್ದಾರೆ. ಇಟಲಿಯಲ್ಲಿ ಇವರೆಲ್ಲರೂ ಫೋಟೋಶೂಟ್‌ ಮಾಡಿಸಿದ್ದಾರೆ. ಅಂದಹಾಗೆ ಅಂಜನಾ ಅವರು ಸಿನಿಮಾ ಮಾಡಿಲ್ಲ, ಹೀಗಾಗಿ ಅನೇಕರಿಗೆ ಇವರ ಪರಿಚಯ ಇಲ್ಲ.

27

ಕಳೆದ ಹದಿಮೂರು ವರ್ಷಗಳಿಂದ ಅಂಜನಾ ಅವರು ವಿದೇಶಿ ಹುಡುಗನನ್ನು ಪ್ರೀತಿಸುತ್ತಿದ್ದರು. ಈಗ ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ. ಐಸೆಯ (Isaiah ) ಎನ್ನುವವರ ಜೊತೆ ಅಂಜನಾ ಪ್ರೀತಿಯಲ್ಲಿ ಬಿದ್ದಿದ್ದಾರೆ.

37

ಅಂಜನಾ ಅವರು ಬಹುಶಃ ವಿದೇಶದಲ್ಲಿದ್ದಾಗ Isaiah ಅವರನ್ನು ಭೇಟಿ ಮಾಡಿರಬಹುದು, ಆಗ ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ ಪ್ರೀತಿ ಹುಟ್ಟಿರಲೂಬಹುದು. ಇವರಿಬ್ಬರು ಯಾವಾಗ ಮದುವೆ ಆಗ್ತಾರೆ ಎಂದು ಕಾದು ನೋಡಬೇಕಿದೆ.

47


ಅಂದಹಾಗೆ ಐಶ್ವರ್ಯಾ ಮದುವೆಯಲ್ಲಿ ಅಂಜನಾ ಅವರ ಬಾಯ್‌ಫ್ರೆಂಡ್‌ ಕೂಡ ಆಗಮಿಸಿದ್ದರು. ಮದುವೆಯ ಎಲ್ಲ ಕಾರ್ಯಕ್ರಮಗಳಲ್ಲಿ Isaiah ಕೂಡ ಭಾಗವಹಿಸಿದ್ದಾಗಲೇ ಅನೇಕರಿಗೆ ಡೌಟ್‌ ಬಂದಿತ್ತು. 

57

ಅಂಜನಾ ಅವರು ಇಟಲಿಯಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಅಲ್ಲಿ ಅರ್ಜುನ್‌ ಸರ್ಜಾ- ನೀತು, ಐಶ್ವರ್ಯಾ ಅರ್ಜುನ್-ಉಮಾಪತಿ ಕೂಡ ಭಾಗವಹಿಸಿದ್ದರು. 
 

67

ಸೋಶಿಯಲ್‌ ಮೀಡಿಯಾದಲ್ಲಿ ಅಂಜನಾ ಅವರು ಪ್ರಿ ವೆಡ್ಡಿಂಗ್‌ ಫೋಟೋಗಳನ್ನು ಹಂಚಿಕೊಂಡು, “ಯೆಸ್‌ ಎಂದು ಹೇಳಿದೆ ಎಂದು ಬರೆದುಕೊಂಡಿದ್ದರು. ಆಗ ಅರ್ಜುನ್‌ ಸರ್ಜಾ ಅವರು, “ನಾನು ಆಗಲೇ ನಿನ್ನ ಪಾರ್ಟ್ನರ್‌ ಆಗಿದ್ದರು ಎಂದುಕೊಂಡಿದ್ದೆ” ಎಂದು ಕಾಮೆಂಟ್‌ ಮಾಡಿ ಕಾಲೆಳೆದಿದ್ದಾರೆ.
 

77

ಅಂದಹಾಗೆ ಅಂಜನಾ ಜೋಡಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಇವರು ಯಾವಾಗ? ಎಲ್ಲಿ ಮದುವೆ ಆಗ್ತಾರೆ ಎಂದು ಕಾದು ನೋಡಬೇಕಾಗಿದೆ. 

Read more Photos on
click me!

Recommended Stories