Ayra ಯೂನಿಕಾರ್ನ್ ಥೀಮಲ್ಲಿ 4ನೇ ಹುಟ್ಟಹಬ್ಬ ಆಚರಿಸಿಕೊಂಡ ಐರಾ; ಫೋಟೋ ಲೀಕ್

Published : Dec 03, 2022, 04:14 PM IST

4ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರ ಜೊತೆ ಆಚರಿಸಿಕೊಂಡ ಐರಾ. ಥೀಮ್‌ ಪಾರ್ಟಿ ಫೋಟೋ ವೈರಲ್....

PREV
17
Ayra ಯೂನಿಕಾರ್ನ್ ಥೀಮಲ್ಲಿ 4ನೇ ಹುಟ್ಟಹಬ್ಬ ಆಚರಿಸಿಕೊಂಡ ಐರಾ; ಫೋಟೋ ಲೀಕ್

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಡಿಸೆಂಬರ್ 2ರಂದು ನಾಲ್ಕನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

27

 4ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರ ಜೊತೆ ಅಪಾರ್ಟ್ಮೆಂಟ್‌ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಯೂನಿಕಾರ್ನ್‌ ಥೀಮ್‌ನಲ್ಲಿ ಪಾರ್ಟಿ ಅಲಂಕಾರ ಮಾಡಲಾಗಿತ್ತು.

37

ಸ್ಟಾರ್ ಕಿಡ್‌ ಲಿಸ್ಟ್‌ನಲ್ಲಿ ಸೇರಿಕೊಂಡಿರುವ ಐರಾ ಫ್ಯಾನ್‌ ಪೇಜ್‌ಗಳಲ್ಲಿ ಬರ್ತಡೇ ಫೋಟೋಗಳು ಲೀಕ್ ಆಗಿದೆ. ಐರಾ ಬ್ಯುಸಿಯಾಗಿ ಕೇಕ್ ಕಟ್ ಮಾಡುತ್ತಿದ್ದಾಳೆ.

47

ಲೀಕ್ ಆಗಿರುವ ಫ್ಯಾಮಿಲಿ ಫೋಟೋದಲ್ಲಿ ಯಶ್, ರಾಧಿಕಾ, ಐರಾ, ಯಥರ್ವ್‌, ಸಹೋದರಿ ನಂದಿನಿ ಕುಟುಂಬ ಮತ್ತು  ಅತ್ತೆ-ಮಾವ ಭಾಗಿಯಾಗಿದ್ದರು. 

57

ಐರಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಬೆಂಗಳೂರಿನ ಫನ್‌ ವರ್ಲ್ಡ್‌ನಲ್ಲಿ ಆಚರಿಸಲಾಗಿತ್ತು. ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು.

67

'ಹುಟ್ಟುಹಬ್ಬದ ಶುಭಾಶಯಗಳು ಮಹಾರಾಣಿ. ನನ್ನ ಪ್ರಪಂಚಕ್ಕೆ ಬೆಳಕು ತಂದವಳು ಐರಾ' ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಐರಾ ಎಲ್ಲಾ ಬಾಲ್ಯದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

77

ಸೋಷಿಯಲ್ ಮೀಡಿಯಾದಲ್ಲಿ ಐರಾ ಮತ್ತು ಯಥರ್ವ್‌ ದೊಡ್ಡ ಫ್ಯಾನ್‌ ಬಳಗವಿದೆ. ರಾಧಿಕಾ ಪಂಡಿತ್‌ಗೆ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಮಕ್ಕಳ ಬಗ್ಗೆ ಅಪ್ಡೇಟ್‌ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಾರೆ.

Read more Photos on
click me!

Recommended Stories